ಅಮಿತ್ ಶಾ ಬೆನ್ನು ತಟ್ಟಿ ಮಾತಾಡಿಸಿದ್ದು ಆನೆ ಬಲ ಬಂದಂತಾಗಿದೆ: ವಿರೋಧಿಗಳಿಗೆ ಟಾಂಗ್ ಕೊಟ್ಟ ವಿಜಯೇಂದ್ರ
ಬೆಂಗಳೂರು, ಮಾರ್ಚ್ 24: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರವನ್ನ ನಡೆಸುತ್ತಿವೆ. ಇತ್ತ ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಪಣ ತೊಟ್ಟಿದೆ.
ಇನ್ನೂ ಚುನಾವಣೆ ಹೊತ್ತಲಿ ರಾಜ್ಯ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ವಿಜಯೇಂದ್ರ ವಿರುದ್ದ ಬಿಜೆಪಿ ಕೆಲ ನಾಯಕರು ತಿರುಗಿಬಿದ್ದಿದ್ದಾರೆ. ಈಗಾಗಾಲೇ ದೆಹಲಿಯ ಹೈಕಮಾಂಡ್ ನಾಯಕರಿಗೆ ವಿಜಯೇಂದ್ರ ವಿರುದ್ದ ದೂರು ನೀಡಿದ್ದಾರೆ.

ಚುನಾವಣಾ ರಣತಂತ್ರ ರೂಪಿಸಲು ರಾಜ್ಯಕ್ಕೆ ಆಗಮಿಸಿರುವ ಅಮಿತ್ ಶಾ ಅವರನ್ನ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಮ್ಮ ನಿವಾಸಕ್ಕೆ ಉಪಹಾರಕ್ಕೆ ಆಹ್ವಾನಿಸಿದ್ದರು. ಹೀಗಾಗಿ ಇಂದು(ಶುಕ್ರವಾರ) ಬೆಳಿಗ್ಗೆ ಬಿ ಎಸ್ ಯಡಿಯೂರಪ್ಪ ನಿವಾಸಕ್ಕೆ ಅಮಿತ್ ಶಾ ಆಗಮಿಸಿದ್ದರು, ಕಾರಿನಿಂದ ಇಳಿದ ಕೂಡಲೇ ಅಮಿತ್ ಶಾ, ಯಡಿಯೂರಪ್ಪನವರ ಕಡೆಗೆ ನಗುಮೊಗ ಬೀರಿದರಾದರೂ ಕಾರು ಇಳಿಯುತ್ತಲೇ, ಯಡಿಯೂರಪ್ಪನವರಿಗೆ ನಿಮ್ಮ ಕೈಯ್ಯಲ್ಲಿರುವ ಹೂಗುಚ್ಛವನ್ನು ನಿಮ್ಮ ಮಗನ ಕೈಗೆ ನೀಡಿ ಎಂದರು.
ಇದನ್ನು ನಿರೀಕ್ಷಸದ ಯಡಿಯೂರಪ್ಪನವರಿಗೆ ಮೊದಲಿಗೆ ಅರ್ಥವಾಗಲೇ ಇಲ್ಲ. ಅದನ್ನು ಗಮನಿಸಿದ ಶಾ, ಮತ್ತೆ ಹೂಗುಚ್ಛವನ್ನು ಅವರಿಗೆ ಕೊಡಿ, ಅವರಿಗೆ ಕೊಡಿ ಅಂತ ಕೈ ತೋರಿಸಿ ಹೇಳಿದರು. ಆಗ ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು. ನಂತ್ರ ವಿಜಯೇಂದ್ರ ಅವರಿಂದ ಹೂಗುಚ್ಚ ಪಡೆದು ವಿಜಯೇಂದ್ರ ಬೆನ್ನು ತಟ್ಟಿ, ಖುಷಿಯಿಂದ ಯಡಯೂರಪ್ಪ ನಿವಾಸಕ್ಕೆ ಆಗಮಿಸಿದರು.
ಅಮಿತ್ ಶಾ ಬ್ರೇಕ್ ಫಾಸ್ಟ್ ಮಿಟೀಂಗ್ ನಂತರ ಬಿ.ವೈ. ವಿಜಯೇಂದ್ರ ಮಾತನಾಡಿ, ಅಮಿತ್ ಶಾ ಅವರು ನನ್ನ ಬೆನ್ನು ತಟ್ಟಿ ಮಾತಾಡಿಸಿದ್ದು ಆನೆ ಬಲ ಬಂದಂತಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಇದು ರಾಜಕೀಯ ಸಂದೇಶವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಅಮಿತ್ ಶಾ ಬೆನ್ನು ತಟ್ಟಿ ಮಾತಾಡಿಸಿದ್ದು ಆನೆ ಬಲ ಬಂದಂತಾಗಿದೆ. ಇದು ಸಹಜ, ಇದು ರಾಜಕೀಯದಲ್ಲಿ ಸಹಜ
ಆನೆ ಬಲ ಬಂದಂತಾಗಿದೆ ಎನ್ನುವ ಮೂಲಕ ಸ್ವಪಕ್ಷದಲ್ಲೆ ಇರುವ ವಿರೋಧಿಗಳಿಗೆ ವಿಜಯೇಂದ್ರ ಟಾಂಗ್ ನೀಡಿದ್ದಾರೆ.
ಅಮಿತ್ ಶಾ ಉಪಹಾರಕ್ಕೆ ಬಂದಿದ್ದರು,ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡುಕೊಂಡು ಬಂದಿದ್ದರು. ರಾಜ್ಯದಲ್ಲಿ ಚನಾವಣೆ ಎದುರಿಸಸಬೇಕಿದೆ, ಅದಕ್ಕಾಗಿ ಎಲ್ಲ ನಾಯಕರೂ ಸೇರಿ ಸುದೀರ್ಘ ಸಮಾಲೋಚನೆ ನಡೆಸಿದರು. ಮುಂದಿನ ದಿನಗಳಲ್ಲಿ ಚುನಾವಣೆ ನಂತರ ರಾಜ್ಯದಲ್ಲಿ ಅತಂತ್ರ ಸ್ಥಿತಿ ಸೃಷ್ಟಗೆ ಬಿಡಲ್ಲ, ಕೇಂದ್ರ, ರಾಜ್ಯ ಸರ್ಕಾರದ ಯೊಜನೆ ಮನೆ ಮನೆಗೆ ತಲುಪಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎಂದು ಚರ್ಚೆ ನಡೆಸಲಾಯಿತು. ರಾಜಕಾರಣ ಬಿಟ್ಟು ಬೇರೆ ಏನು ಚರ್ಚೆ ಆಗಿಲ್ಲ.ಆಗಲು ಸಾಧ್ಯವೂ ಇಲ್ಲ ಎಂದರು.

ವರುಣಾದಿಂದ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರಾ ಎಂಬ ಕುರಿತು ಮಾತನಾಡಿ, ನಾನು ಶಿಕಾರಿಪುರದಲ್ಲಿ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದೇನೆ, ಶಿಕಾರಿಪುರ ಕ್ಷೇತ್ರದ ಜನತೆ, ಮತದಾರರ ಅಭಿಪ್ರಾಯ ಮೇರೆಗೆ ಅಲ್ಲಿ ಸ್ಪರ್ಧೆ ಮಾಡುತ್ತೇನೆ. ಆದರೂ ಕೇಂದ್ರದ ನಿರ್ಧಾರಕ್ಕೆ ಈ ವಿಚಾರವನ್ನು ಬಿಡಲಾಗಿದೆ ಎಂದು ಹೇಳಿದರು.
ಯಡಿಯೂರಪ್ಪ ರಾಜೀನಾಮೆ ಬಳಿಕ ಸಾಕಷ್ಟು ಚರ್ಚೆ ಆಗಿತ್ತು. ಅನೇಕ ಬಾರಿ ಚರ್ಚೆ ಆಗಿದೆ, ಸಿಎಂ ಆಗಿದ್ದಾಗ ಹೇಗೆ ಇದ್ದರೂ ಈಗಲೂ ಅದೇ ಬದ್ದತೆಯಿಂದ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications