Congress Banner: ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ, ಇದು ಮಹಾತ್ಮನಿಗೆ ಇರಿದಂತೆ: ವಿಜಯೇಂದ್ರ ಆರೋಪ
ಬೆಂಗಳೂರು, ಡಿಸೆಂಬರ್ 27: ಪಾಕಿಸ್ತಾನ ಮುಸ್ಲಿಂ ದೇಶವಾಗಿದೆ. ಎಡಪಂಥೀಯ ಸಿದ್ಧಾಂತ ಹೊಂದಿರುವ ಭಾರತದ ಕಾಂಗ್ರೆಸ್ ಪಕ್ಷವು ಮುಸ್ಲಿಂ ಪರವಾದ ನಿಲುವು, ನೀರ್ಣಯ ಕೈಗೊಳ್ಳುತ್ತಾ ಬಂದಿರುವುದು ಗೊತ್ತಿರುವ ಸಂಗತಿ. ಕಾಶ್ಮೀರ ನಮ್ಮದು ಎನ್ನುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ಕೊಡುತ್ತಲೇ ಬಂದಿದೆ. ಈ ವಿಚಾರ ಹೇಳಲು ಕಾರಣವೇನೆಂದರೆ, ಬಿಜೆಪಿ ಆರೋಪಿಸುವಂತೆ ಮುಸ್ಲಿಮರ ತುಷ್ಟೀರಕಣಕ್ಕೆ ಮುಂದಾದ ಕಾಂಗ್ರೆಸ್ ಹಾಕಿರುವ ಬ್ಯಾನರ್‌ಗಳಲ್ಲಿ ದೇಶದ ಕಿರೀಟ ಕಾಶ್ಮೀರವನ್ನೇ ಇಲ್ಲವಾಗಿಸಿದೆ. ಕಾಶ್ಮೀರ ಇಲದ ಬ್ಯಾನರ್ ಅಳವಡಿಸಿದೆ. ಇದು ಬಿಜೆಪಿ ಸೇರಿದಂತೆ ದೇಶಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಹೌದು, 1924ರಲ್ಲಿ ಮಹಾತ್ಮಾ ಗಾಂಧೀಜಿ ಅವರು ಬೃಹತ್ ಕಾಂಗ್ರೆಸ್ ಅಧಿವೇಶನ ನಡೆಸಿದ್ದರು. ಆ ಅಧಿವೇಶನವು ಒಂದು ಶತಮಾನ ಪೂರೈಸಿದ್ದರ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಹಮ್ಮಿಕೊಂಡಿದೆ. ಎಐಸಿಸಿ ಸಹ ಗಾಂಧೀಜಿ ಸ್ಮರಣಾರ್ಥ ಹಲವು ಕಾರ್ಯಕ್ರಮ ನಡೆಸಲಿದೆ.

ಈ ಸ್ಮರಣಾರ್ಥ ಕಾರ್ಯಕ್ರಮಗಳಿಗೆಂದು ಮಹಾತ್ಮ ಗಾಂಧೀಜಿ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಇರುವ ಬ್ಯಾನರ್‌ನಲ್ಲಿ ಭಾರತದ ನಕ್ಷೆ ಇದೆ. ಆದರೆ ಆ ನಕ್ಷೆಯಲ್ಲಿ ಕಾಶ್ಮೀರವೇ ಕಾಣುತ್ತಿಲ್ಲ. ಕಾಶ್ಮೀರ ಇಲ್ಲದ ನಕ್ಷೆ ಕಂಡು ಬಿಜೆಪಿ ನಾಯಕರು, ಜೆಡಿಎಸ್ ಟೀಕಿಸಿದೆ. ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ ಪ್ರಯೋಗ
ಟ್ವೀಟ್ ಮಾಡಿರುವ ವಿಜಯೇಂದ್ರ ಅವರು, ಸ್ವಾತಂತ್ರ್ಯಕ್ಕಾಗಿ ಅಸ್ತಿತ್ವಕಂಡುಕೊಂಡಿದ್ದ ಅಂದಿನ ಕಾಂಗ್ರೆಸ್ ಅನ್ನು ರಾಜಕೀಯ ಅಧಿಕಾರಕ್ಕಾಗಿ ಅಪೋಶನ ಮಾಡಿಕೊಂಡ ಕುಟುಂಬದ ಮುಷ್ಟಿಯಲ್ಲಿರುವ ಇಂದಿನ ಕಾಂಗ್ರೆಸ್ ಇದೆ. ಇಂದು ನಡೆಸುತ್ತಿರುವ ಬೆಳಗಾವಿ ಸಮಾವೇಶದ ಶತಮಾನದ ನೆನಪು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಎಂಬುದು ದೇಶದ ಜನತೆಗೆ ತಿಳಿದಿದೆ ಎಂದು ಕಾಂಗ್ರೆಸ್ ಅಧಿವೇಶನ ಕುರಿತು ಲೇವಡಿ ಮಾಡಿದ್ದಾರೆ.
ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ ಪ್ರಯೋಗಿಸಿ ಮಹಾತ್ಮನನ್ನು ಸ್ಮರಿಸಲು ಹೊರಟಿರುವುದು ಮಹಾತ್ಮನ ಆತ್ಮಕ್ಕೆ ಇರಿದಂತೆ ಅಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ. ಅಖಂಡ ಭಾರತದ ಅಸ್ತಿತ್ವ ಹಾಗೂ ರಾಷ್ಟ್ರ ವಿಭಜನೆಯನ್ನು ತಡೆಯಲು ಕಡೇ ಕ್ಷಣದವರೆಗೂ ಪ್ರಯತ್ನಿಸಿದ ಗಾಂಧಿಯವರನ್ನು ಅಪಮಾನಿಸಲು ಹೊರಟಂತಿದೆ.
ಸ್ವಾತಂತ್ರ್ಯಕ್ಕಾಗಿ ಅಸ್ತಿತ್ವಕಂಡು ಕೊಂಡಿದ್ದ ಅಂದಿನ ಕಾಂಗ್ರೆಸ್ ಅನ್ನು ರಾಜಕೀಯ ಅಧಿಕಾರಕ್ಕಾಗಿ ಅಪೋಶನ ಮಾಡಿಕೊಂಡ ಕುಟುಂಬದ ಮುಷ್ಟಿಯಲ್ಲಿರುವ ಇಂದಿನ ಕಾಂಗ್ರೆಸ್, ಇಂದು ನಡೆಸುತ್ತಿರುವ ಬೆಳಗಾವಿ ಸಮಾವೇಶದ ಶತಮಾನದ ನೆನಪು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಎಂಬುದು ದೇಶದ ಜನತೆಗೆ ತಿಳಿದಿದೆ.
— Vijayendra Yediyurappa (@BYVijayendra) December 26, 2024
ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ ಪ್ರಯೋಗಿಸಿ… pic.twitter.com/0mHNCNNHqP
ಪ್ರತ್ಯೇಕತಾವಾದಿ, ದೇಶದ್ರೋಹಿ ಶಕ್ತಿಗಳ ಓಲೈಕೆ ಆರೋಪ
ಬೆಳಗಾವಿಯಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಅಧಿವೇಶನದ ಶತಮಾನದ ನೆನಪಿನ ಕಾರ್ಯಕ್ರಮ, ದೇಶಪ್ರೇಮವನ್ನು ಮೆರೆಯಲೋ, ಅಥವಾ ರಾಷ್ಟ್ರವಿದ್ರೋಹಿ ಶಕ್ತಿಗಳನ್ನು ಓಲೈಸಲೋ? ಅಥವಾ ನಿಮ್ಮ ಮಿತ್ರರಾದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಓಲೈಕೆಗೋ ಎನ್ನುವುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಬೇಕು ಎಂದು ಅವರು ಗುಡುಗಿದರು.
ಭಾರತದ ಭೂಪಟಕ್ಕೆ ಅಪಚಾರವೆಸಗಿ ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ್ರೋಹ, ಗಾಂಧಿದ್ರೋಹ ಎರಡನ್ನು ಎಸೆಗಿರುವ ಕಾಂಗ್ರೆಸ್ಸಿಗರು ಈ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಬಿವೈ ವಿಜಯೇಂದ್ರ ಅವರು ಒತ್ತಾಯಿಸಿದ್ದಾರೆ.












Click it and Unblock the Notifications