15 ಕ್ಷೇತ್ರದ ಉಪ ಚುನಾವಣೆ; 8 ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ

ಬೆಂಗಳೂರು, ಅಕ್ಟೋಬರ್ 31 : ಕರ್ನಾಟಕದ 8 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಒಟ್ಟು 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ.

ಗುರುವಾರ ಎಐಸಿಸಿ ಒಟ್ಟು 8 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

By elections Congress Announced Candidates For 8 Seat

ಯಲ್ಲಾಪುರ, ಹಿರೇಕೆರೂರು, ರಾಣೆಬೆನ್ನೂರು, ಚಿಕ್ಕಬಳ್ಳಾಪುರ, ಕೆ. ಆರ್. ಪುರ, ಮಹಾಲಕ್ಷ್ಮೀ ಲೇಔಟ್, ಹೊಸಕೋಟೆ ಮತ್ತು ಹುಣಸೂರು ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಅಂತಿಮಗೊಳಿಸಿದೆ.

ಅಭ್ಯರ್ಥಿಗಳ ಪಟ್ಟಿ

* ಯಲ್ಲಾಪುರ - ಭೀಮಣ್ಣ ನಾಯ್ಕ್
* ಹಿರೇಕೆರೂರು - ಬಿ. ಎಚ್. ಬನ್ನಿಕೋಡ್
* ರಾಣೆಬೆನ್ನೂರು - ಕೆ. ಬಿ. ಕೋಳಿವಾಡ
* ಚಿಕ್ಕಬಳ್ಳಾಪುರ - ಎಂ. ಅಂಜನಪ್ಪ
* ಕೆ. ಆರ್. ಪುರ - ಎಂ. ನಾರಾಯಣ ಸ್ವಾಮಿ
* ಮಹಾಲಕ್ಷ್ಮೀ ಲೇಔಟ್ - ಎಂ. ಶಿವರಾಜ್
* ಹೊಸಕೋಟೆ - ಪದ್ಮಾವತಿ ಸುರೇಶ್
* ಹುಣಸೂರು - ಎಚ್. ಪಿ. ಮಂಜುನಾಥ್

ವಿಧಾನಸಭೆ ಉಪ ಚುನಾವಣೆ ಜೊತೆಗೆ ಎರಡು ವಿಧಾನ ಪರಿಷತ್ ಕ್ಷೇತ್ರಗಳ ಚುನಾವಣೆಗೂ ಅಭ್ಯರ್ಥಿ ಘೋಷಣೆ ಮಾಡಲಾಗಿದೆ.

* ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಡಾ. ಆರ್. ಎಂ. ಕುಬೇರಪ್ಪ

* ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶರಣಪ್ಪ ಮಟ್ಟೂರು ಅಭ್ಯರ್ಥಿಗಳು

ಅನರ್ಹಗೊಂಡ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಂತಿಮಗೊಳಿಸಿದ್ದು, ತೀರ್ಪಪು ಕಾಯ್ದಿರಿಸಿದೆ.

15 ಕ್ಷೇತ್ರದ ಉಪ ಚುನಾವಣೆಗೆ ನವೆಂಬರ್ 11ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.

ಅಭ್ಯರ್ಥಿ ಘೋಷಣೆ : ಯಶವಂತಪುರ, ಶಿವಾಜಿನಗರ, ಕೆ. ಆರ್. ಪೇಟೆ, ಗೋಕಾಕ್, ಅಥಣಿ, ಕಾಗವಾಡ, ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+