By Election Results: ಮುಡಾ ಹೋರಾಟದ ರಿಸಲ್ಟ್‌ ಏನಾಯ್ತು: 3 ಕಡೆ ನಾವೇ ಗೆದ್ವಿ ಎಂದ ಕಾಂಗ್ರೆಸ್‌ ಪ್ರಭಾವಿ ಸಚಿವ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಮುಡಾಗೆ ಸಂಬಂಧಿಸಿದಂತೆ ಆರೋಪ ಮಾಡಲಾಯಿತು. ಅಲ್ಲದೇ ಬಿಜೆಪಿ - ಜೆಡಿಎಸ್‌ನವರು ಕಾಂಗ್ರೆಸ್ ನವರು ಹೋರಾಟ ಮಾಡಿದ್ದಾರೆ. ಆದರೆ, ಅದರಿಂದ ಏನಾಯ್ತು. ಜನ ಅವರಿಗೇ ಪಾಠ ಕಲಿಸಿದ್ದಾರೆ. ಕಾಂಗ್ರೆಸ್‌ನವರು ನಾವು ಬ್ರಿಟಿಷರನ್ನು ಒದ್ದೊಡಿಸಿದ್ದೇವೆ. ಇನ್ನು ಬಿಜೆಪಿಯವರು ಯಾವ ಲೆಕ್ಕ ನಮಗೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧದ ಕೇಸ್‌ ರಾಜಕೀಯ ಪ್ರೇರಿತ ಕೇಸ್. ಬಹಳ ಸ್ಪಷ್ಟವಾಗಿ ಎಲ್ಲರೂ ಹೇಳಿದ್ದೀವಿ. ಜನರು ಸಹ ನೋಡುತ್ತಿರುತ್ತಾರೆ. ಸಿದ್ದರಾಮಯ್ಯ ಈ ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೇ ಸಿಬಿಐ ಕೇಸ್ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

By Election Results What is result of Muda struggle We won in by-elections Congress minister

ಇಂತಹದ್ದಕ್ಕೆಲ್ಲ ನಾವು ಹೆದರಲ್ಲ. ಮುಡಾ ವಿಚಾರದಲ್ಲಿ ರಾಜಕೀಯ ಪ್ರೇರಿತ ಕೇಸ್ ಹಾಕಿದ್ದಕ್ಕೆ ರಾಜಕೀಯವಾಗಿ ಈಗಾಗಲೇ ಉತ್ತರ ಕೊಟ್ಟಿದ್ದೀವಿ. ಈಚೆಗೆ ನಡೆದ ಮೂರು ಉಪ ಚುನಾವಣೆಗಳಲ್ಲಿ ನಾವು ಗೆದ್ದಿದ್ದೀವಿ, ರಾಜಕೀಯವಾಗಿ ಉತ್ತರ ಕೊಟ್ಟಿದ್ದೇವೆ. ಬಿಜೆಪಿ - ಜೆಡಿಎಸ್‌ಗೆ ಜನರು ಯಾರ ಪರ ಇದ್ದಾರೆ ಎಂಬ ಸ್ಪಷ್ಟ ಸಂದೇಶ ಸಿಕ್ಕಿದೆ.

ಸಿದ್ದರಾಮಯ್ಯ ಅವರ ವಿರುದ್ಧ ಕೇಸ್ ಹಾಕಿದ್ದಕ್ಕೆ ಇವರ ವಿರುದ್ಧ ರಾಜ್ಯದ ಜನ ರೊಚ್ಚಿಗೆದ್ದಿದ್ದಾರೆ ಎಂದು ಸ್ಪಷ್ಟವಾಗಿದೆ. ನಮ್ಮ ಮೇಲೆ ಎಂತಹ ಕೇಸ್ ಹಾಕಿದ್ದರೂ, ರಾಜಕೀಯವಾಗಿ ಜನ ನಿರ್ಧಾರ ಮಾಡ್ತಾರೆ. ಅಲ್ಲದೇ ಮೈಸೂರು ಭಾಗ, ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಮೂರು ಭಾಗಗಳಲ್ಲಿ ನಾವು ಗೆದ್ದಿದ್ದೀವಿ.

By Election Results What is result of Muda struggle We won in by-elections Congress minister

ಜನರೇ ತೀರ್ಪು ಕೊಟ್ಟ ಮೇಲೆ ಇವರ ಪರಿಸ್ಥಿತಿ ಏನಾಗಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇನ್ಮುಂದೆಯಾದರೂ ಬಿಜೆಪಿ - ಜೆಡಿಎಸ್ ಎಚ್ಚರಿಕೆಯ ಹೆಜ್ಜೆ ಇರಿಸಲಿ. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಿ. ಮುಡಾ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡಿದ ರಿಸಲ್ಟ್ ಏನಾಯ್ತು, ಜನರು ತೀರ್ಪು ಕೊಟ್ಟಿದ್ದಾರೆ ಇವರ ಪರಿಸ್ಥಿತಿ ಏನಾಗಿದೆ. ಇನ್ಮಂದೆಯಾದರೂ ಇದನ್ನೆಲ್ಲ ತಿಳಿದುಕೊಂಡು ವಿರೋಧ ಪಕ್ಷದವರು ಕೆಲಸ ಮಾಡಲಿ. ಮುಂದಿನ ದಿನಗಳಲ್ಲಾದರೂ ಸರಿಯಾದ ದಾರಿಯಲ್ಲಿ ನಡೆಯಲಿ.

ಬಿಜೆಪಿ ಒಡೆದ ಮನೆಯಾಗಿದೆ. ಮನೆಯೊಂದು ಮೂರು ಬಾಗಿಲಾಗಿದೆ. ಬಿಜೆಪಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಬಿ.ವೈ ವಿಜಯೇಂದ್ರ ಹಾಗೂ ಬಸವರಾಜ ಬೊಮ್ಮಾಯಿ ಮೇಲೆ ಇಡಿ ತನಿಖೆ ಆಗಬೇಕು.

ಈ ಹಿಂದೆಯೇ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸ್ಪಷ್ಟವಾಗಿ ಹೇಳಿದ್ದರು. ಮುಖ್ಯಮಂತ್ರಿ ಆಗುವುದಕ್ಕೆ ಬಿಜೆಪಿಯಲ್ಲಿ 2 ಸಾವಿರ ಕೋಟಿ ಕೊಡಬೇಕು ಎಂದಿದ್ದರು. ಬೊಮ್ಮಾಯಿ ಸಿಎಂ ಆಗಲು ಎಷ್ಟು ದುಡ್ಡು ಕೊಟ್ಟಿದ್ದಾರೆ. ಎಲ್ಲರಕ್ಕಿಂತ ಜ್ಯೂನಿಯರ್ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದಾರೆ ಅವರು ಎಷ್ಟು ದುಡ್ಡು ಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಪ್ರತಿಯೊಂದು ಹುದ್ದೆಯೂ ಮಾರಾಟಕ್ಕಿದೆ. ಇದನ್ನು ಕಾಂಗ್ರೆಸ್ ನವರು ಹೇಳಿಲ್ಲ ಬಿಜೆಪಿಯವರೇ ಹೇಳಿದ್ದಾರೆ. ವಿಜಯೇಂದ್ರ ದುಡ್ಡು ಕೊಟ್ಟು ಅಧ್ಯಕ್ಷರಾಗಿದ್ದಾರೆ ಅಂತಾ ಯತ್ನಾಳ ಹೇಳಿದ್ದಾರೆ. ಮೊದಲು ಬಿಜೆಪಿ ಅವರ ವಿರುದ್ಧ ತನಿಖೆ ಆಗಲಿ ಎಂದು ಅವರು ಒತ್ತಾಯಿಸಿದ್ದಾರೆ.

ಬಿಜೆಪಿಗೆ ಸಿದ್ಧಾಂತವೇ ಗೊತ್ತಿಲ್ಲ. ಸಿದ್ಧಾಂತ ಬಗ್ಗೆ ಗೌರವವೇ ಇಲ್ಲ. ಕೇಂದ್ರದಲ್ಲಿ ಬಿಜೆಪಿ 12 ವರ್ಷದಿಂದ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ, ಒಂದೇ ಒಂದು ಯೋಜನೆ ಬಡವರ ಪರ ಹಾಗೂ ರೈತರ ಪರ ತಂದಿದ್ದಾರಾ. ಸಣ್ಣ ರಾಜ್ಯಗಳಿಗಿಂತ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ಬರುವ ಬಗ್ಗೆ ಚರ್ಚೆ ಮಾಡಲ್ಲ ಇವರು. ಬಿಜೆಪಿ ಅವರಿಗೆ ರಾಜ್ಯದ ಹಿತಾಸಕ್ತಿ ಬೇಕಿಲ್ಲ. ಅವರಿಗೆ ಕೇವಲ ಹಿಂದೂ - ಮುಸ್ಲಿಂ ಬೇಕು.ಮಸೀದಿ ಹಾಗೂ ದೇವಾಲಯ ವಿಚಾರಗಳು ಬೇಕು. ರಾಜ್ಯದ ಬಡವರ ಬಗ್ಗೆ ಚರ್ಚೆ ಮಾಡಲು ಯಾರಿಗೂ ಇಷ್ಟ ಇಲ್ಲ.

ವಕ್ಫ್ ವಿಚಾರವಾಗಿ ಮಾತನಾಡ್ತಾರಲ್ಲ. 2019-20ನೇ ಸಾಲಿನಲ್ಲಿ ಇವರು ಎಷ್ಟು ಜನರಿಗೆ ನೋಟಿಸ್ ನೀಡಿದ್ದಾರೆ ಎನ್ನುವ ಬಗ್ಗೆ ನಮ್ಮ ಬಳಿ ದಾಖಲೆ ಇದೆ. ವಕ್ಫ್ ನೋಟಿಸ್ ಕೊಟ್ಟಿದ್ದು ಅವರೇ, ರೈತರ ಒಕ್ಕಲೆಬ್ಬಿಸಿದ್ಯಾರು ಅದೂ ಬಿಜೆಪಿಯವರೇ ಎಂದು ಅವರು ಆರೋಪಿಸಿದ್ದಾರೆ.

ಈಗ ರೈತರ ವಿಚಾರದಲ್ಲಿ ಕೇಸರಿ ಟವಲ್ ಹಾಕಿ ಊರುರು ಓಡಾಡಿದರೆ ಜನಕ್ಕೆ ಗೊತ್ತಾಗುವುದಿಲ್ಲವೇ. ದಯಮಾಡಿ ವಿಪಕ್ಷದವರು ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಮಾಡಲಿ. ಈ ಬಗ್ಗೆ ಸರ್ಕಾರ ಉತ್ತರ ಕೊಡುತ್ತೆ. ಈ ಬಾರಿ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಬಗ್ಗೆ ಅತಿ ಹೆಚ್ಚು ಚರ್ಚೆ ಆಗಲಿ. ವಿಪಕ್ಷದವರು ಸರ್ಕಾರ ಎಚ್ಚರಿಸುವ ಕೆಲಸ ಮಾಡಬೇಕು ಎಂದಿದ್ದಾರೆ.

ಅಹಿಂದ ಸಮಾವೇಶ: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಅಹಿಂದ ಸಮಾವೇಶ ಮಾಡ್ತೀವಿ. ಪಕ್ಷದ ಸಂಘಟನೆಯನ್ನು ಮಾಡ್ತೀವಿ, ಬಡವರ ಸಲುವಾಗಿ ಯೋಜನೆ ಕೊಟ್ಟಿದ್ದೀವಿ. ಅದಕ್ಕಾಗಿ ಜನ ಸೇರಿಸಿ ಹೇಳುವ ತಾಕತ್ತು ನಮಗೆ ಇದೆ. ಇನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಭ್ರಷ್ಟಾಚಾರ ವಿಚಾರದ ಬಗ್ಗೆ ಮಾತನಾಡಿರುವ ಅವರು, ಕಲಾವಿದ ಕಾರ್ಡ್‌ಗೆ ಹಣಕ್ಕೆ ಬೇಡಿಕೆ & ಕಲಾವಿದರಿಗೆ ಪ್ರೋತ್ಸಾಹ ಧನ ನೀಡಲು ಕಮಿಷನ್ ಪಡೆಯುವ ವಿಚಾರ.

ನನಗೆ ಇಂತಹದ್ದು ಎರಡು ಕಡೆ ಗಮನಕ್ಕೆ ಬಂದಿದೆ. ಅಂತಹ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆ ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟಿದ್ದೀನಿ, ನಾನು ಇಲಾಖೆ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಅಂತಹದ್ದಕ್ಕೆಲ್ಲ ಅವಕಾಶ ಕೊಟ್ಟಿಲ್ಲ ಎಂದಿದ್ದಾರೆ ಸಚಿವ ಶಿವರಾಜ ತಂಗಡಗಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+