ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣರಾಜ್ಯೋತ್ಸವ, ವಾರಾಂತ್ಯದ ರಜೆ: ಬೆಂಗಳೂರಿನಿಂದ ತೆರಳುವವರಿಗೆ ಖಾಸಗಿ ಬಸ್ ಪ್ರಯಾಣ ದರ ಏರಿಕೆ ಶಾಕ್

ಗಣರಾಜ್ಯೋತ್ಸವದ ರಜೆ, ವಾರಾಂತ್ಯದ ರಜೆಗಳು ಇವೆ. ಬೆಂಗಳೂರಿನಿಂದ ತಮ್ಮ ಊರುಗಳಿಗೆ ಸಾಕಷ್ಟು ಜನ ತೆರಳಲಿದ್ದಾರೆ. ಈ ಸಂಬಂಧ ಖಾಸಗಿ ಬಸ್‌ ಪ್ರಮಾಣದ ದರ ಏರಿಕೆ ಆಗಿದೆ. ಯಾವ ಊರುಗಳಿಗೆ, ಎಷ್ಟೇಷ್ಟು ದರ ನಿಗದಿಯಾಗಿದೆ ಎಂಬ ಮಾಹಿತಿ ಇಲ್ಲಿದೆ.

|
Google Oneindia Kannada News

ಬೆಂಗಳೂರು, ಜನವರಿ 24: ಗಣರಾಜ್ಯೋತ್ಸವ ಜೊತೆಗೆ ವಾರಾಂತ್ಯದ ರಜೆಗಳು ಇರುವುದರಿಂದ ಬೆಂಗಳೂರಿನಿಂದ ಉದ್ಯೋಗಿಗಳು, ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲಿದ್ದಾರೆ. ಆದರೆ ಅವರಿಗೆಲ್ಲ ಖಾಸಗಿ ಬಸ್‌ ಪ್ರಯಾಣದ ದರವೇ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿದೆ.

ಪ್ರತಿ ಹಬ್ಬದ ಸಂದರ್ಭಗಳಲ್ಲಿ, ಸಾಲು ಸಾಲು ರಜೆಗಳು ಇರುವಾಗ ಬೆಂಗಳೂರಿನಿಂದ ಉದ್ಯೋಗಿಗಳು, ನಾಗರಿಕರು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಕರಾವಳಿ ಭಾಗದ ನಗರಗಳಿಗೆ ತೆರಳುತ್ತಾರೆ. ಈ ವೇಳೆ KSRTC ಹೆಚ್ಚುವರಿ ಬಸ್ ಬಿಟ್ಟರು ಒಂದೇ ದಿನದಲ್ಲಿ ಸೀಟುಗಳು ಭರ್ತಿ ಆಗುತ್ತವೆ. ಅನಿವಾರ್ಯವಾಗಿ ಖಾಸಗಿ ಬಸ್‌ಗಳನ್ನೇ ಹಿಡಿಯಬೇಕಾಗುತ್ತದೆ. ಈ ಭಾರಿಯು ಅಂತದ್ದೆ ಸಮಸ್ಯೆಯಾಗಿದೆ.

KSRTC Electric Bus: ರಸ್ತೆಗಿಳಿಯಲಿವೆ 350 ಎಲೆಕ್ಟ್ರಿಕ್, 20 ಅತ್ಯಾಧುನಿಕ ವೋಲ್ವೊ ಬಸ್KSRTC Electric Bus: ರಸ್ತೆಗಿಳಿಯಲಿವೆ 350 ಎಲೆಕ್ಟ್ರಿಕ್, 20 ಅತ್ಯಾಧುನಿಕ ವೋಲ್ವೊ ಬಸ್

ಗುರುವಾರ ಗಣರಾಜ್ಯೋತ್ಸವಕ್ಕೆ ರಜೆ ಇದೆ. ಶುಕ್ರವಾರ ಒಂದು ದಿನ ರಜೆ ಹಾಕಿದರೆ ಐಟಿ ಸೇರಿದಂತೆ ಇನ್ನಿತರ ಕಂಪನಿ ಉದ್ಯೋಗಿಗಳಿಗೆ ಸೋಮವಾರದವರೆಗೆ ನಾಲ್ಕು ರಜೆ ಸಿಗುತ್ತದೆ. ಈ ಕಾರಣದಿಂದ ಸಾಕಷ್ಟು ಮಂದಿ ಊರುಗಳತ್ತ ಬುಧವಾರದಿಂದ (ಜ.25)ಲೇ ಪ್ರಯಾಣ ಬೆಳೆಸಿದ್ದಾರೆ. ಇತ್ತ ಪ್ರತಿ ಭಾರಿಯು ಸರ್ಕಾರಿ ಬಸ್‌ಗಳಿಗಿಂತ ದುಪ್ಪಟ್ಟು ಹಣ ವಸೂಲಿ ಮಾಡಿದರೂ ಸಾರಿಗೆ ಇಲಾಖೆ ಮಾತ್ರ ನೋಡಿಯೂ ನೋಡದಂತೆ ಕುಳಿತಿರುತ್ತದೆ.

ಕ್ರಮ ಕೈಗೊಳ್ಳದ ಸರ್ಕಾರ, ಅಧಿಕಾರಿಗಳು

ಕ್ರಮ ಕೈಗೊಳ್ಳದ ಸರ್ಕಾರ, ಅಧಿಕಾರಿಗಳು

ಸಾರಿಗೆ ಸಚಿವ ಶ್ರೀರಾಮುಲು ಅವರು ಅಧಿಕಾರಿಗಳ ತಂಡ ರಚನೆ ಮಾಡಿದ್ದೇವೆ. ಅವರು ಖಾಸಗಿ ಬಸ್ ದರ ವಸೂಲಿ ಬಗ್ಗೆ ನಿಗಾ ವಹಿಸುತ್ತಾರೆ, ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಹೆಚ್ಚುವರಿ ಹಣ ವಸೂಲಿ ಮಾಡುವ ಖಾಸಗಿ ಬಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಹೀಗೆ ಪ್ರತಿ ಸರಿಯು ಹೇಳುವ ಸಚಿವರು ಇದೂವರೆಗೆ ಎಷ್ಟು ಕಡೆ ದಾಳಿಯಾಗಿದೇ, ಯಾರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂಬುದನ್ನು ತಿಳಿಸಲಿ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆ ಬುಧವಾರಕ್ಕೆ ಬೆಂಗಳೂರಿನಿಂದ ಬೇರೆ ಊರುಗಳಿಗೆ ಹೊರಡಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ದ ದರದಲ್ಲಿ ಸುಮಾರು ಶೇ.1ರಷ್ಟು ಹೆಚ್ಚಾದರೆ, ಖಾಸಗಿ ಬಸ್‌ಗಳ ದರ ಶೇ.30-50 ರಷ್ಟು ಹೆಚ್ಚಾಗಿದೆ. ಅದರ ವಿವರ ಹೀಗಿದೆ.

ಬೆಳಗಾವಿ ಎಸಿ ಸ್ಲೀಪರ್‌ಗೆ 1010 ರಿಂದ 1139ರೂ.

ಬೆಳಗಾವಿ ಎಸಿ ಸ್ಲೀಪರ್‌ಗೆ 1010 ರಿಂದ 1139ರೂ.

KSRTC ಬಸ್‌ ಬೆಂಗಳೂರು- ಬೆಳಗಾವಿ ಪ್ರಯಾಣದ ದರ ಎಸಿ ಸ್ಲೀಪರ್ 1010 ರಿಂದ 1139 ರೂಪಾಯಿ ಇದ್ದರೆ, ಸಾಮಾನ್ಯ ಬಸ್- 623 ರೂಪಾಯಿ ಇದೆ. ಅದೇ ರೀತಿ ಬೆಂಗಳೂರಿನಿಂದ ರಾಯಚೂರು ಎಸಿ ಸ್ಲೀಪರ್ 1201 ರೂಪಾಯಿ, ಸಾಮಾನ್ಯ ಬಸ್- 558 - 850ರೂ. ಇದೆ.

ಬೆಂಗಳೂರು- ಮಂಗಳೂರು ಎಸಿ ಸ್ಲೀಪರ್- 1071 ರೂಪಾಯಿ ಇದ್ದರೆ, ಐರಾವತ ಬಸ್ 905 ರೂ., ಸಾಮಾನ್ಯ ಬಸ್ 409 ರೂಪಾಯಿ ನಿಗದಿಯಾಗಿದೆ. ಇನ್ನೂ ಬೆಂಗಳೂರು- ಹಾವೇರಿ - ಐರಾವತ 788 ರೂ, ಸಾಮಾನ್ಯ ಬಸ್ 407 ರೂಪಾಯಿ ಇದೆ.

ಬೆಂಗಳೂರು- ಹುಬ್ಬಳ್ಳಿಗೆ ನಾನ್ ಎಸಿ ಸ್ಲೀಪರ್ ರೂಪಾಯಿ 700ರೂ. ಇದ್ದು, ಬೆಂಗಳೂರು- ಕಲಬುರಗಿ ಎಸಿ ಸ್ಲೀಪರ್ 1039 ರೂ. ಹಾಗೂ ಇದೇ ಮಾರ್ಗದ ಸಾಮಾನ್ಯ ಬಸ್ ಪ್ರಯಾಣದ ದರ 704 ರೂಪಾಯಿ ನಿಗದಿಯಾಗಿದೆ.

ಖಾಸಗಿ ಬಸ್ ಪ್ರಯಾಣದ ದರ ಗಗನಕ್ಕೆ

ಖಾಸಗಿ ಬಸ್ ಪ್ರಯಾಣದ ದರ ಗಗನಕ್ಕೆ

ಬೆಂಗಳೂರು- ರಾಯಚೂರಿಗೆ ನಾನ್ ಎಸಿ ಗ್ರೀನ್ ಲೈನ್ ಟ್ರಾವೆಲ್ 1400 ರೂಪಾಯಿ, ಎಸ್‌ಆರ್‌ಎಸ್‌ 900 ರೂ. ಸುಗಮ ಟೂರಿಸ್ಟ್ 1300 ರೂ. ಇದೆ. ಬೆಂಗಳೂರು- ಮಂಗಳೂರು ದುರ್ಗಂಬಾ ಟ್ರಾವೆಲ್ಸ್ ನಾನ್ ಎಸಿ 1899 ರೂ. ಶ್ರೀ ಸಾಯಿ ಟೂರಿಸ್ಟ್ 1,800, ನಾಗಶ್ರೀ ಟ್ರಾವೆಲ್ಸ 1,700, ಭಾರತಿ ಟ್ರಾವೆಲ್ (ಎಸಿ ಸ್ಲೀಪರ್) 2,500 ರೂಪಾಯಿ ಇದೆ. ಇದೇ ಮಾರ್ಗದ ಇನ್ನಿತರ ಬಸ್‌ಗಳ ದರವು ಇದೇ ಮಟ್ಟಕ್ಕೆ ಏರಿಕೆ ಆಗಿವೆ.

ಬೆಂಗಳೂರು- ಹಾವೇರಿಗೆ ವೋಲ್ವೋ ಮಲ್ಟಿ ಎಕ್ಸೆಲ್ 3,000 ರೂಪಾಯಿ ಇದ್ದರೆ, ಆನಂದ ಟ್ರಾವೆಲ್ ಎಸಿ ಸ್ಲೀಪರ್ 3,000 ರೂಪಾಯಿ, ಆನಂದ ಟ್ರಾವೆಲ್ಸ ನಾನ್ ಎಸಿ 2010-2610 ರೂ.ಗೆ ಹೆಚ್ಚಿಸಲಾಗಿದೆ. ವಿಆರ್ಎಲ್ ನಾನ್ ಎಸಿ 1400-1800ರೂ. ಇದ್ದು, ಎಸ್‌ಆರ್‌ಎಸ್‌ ನಾನ್ ಎಸಿ 1099 ರೂಪಾಯಿ ಇದೆ.

ಬೆಂಗಳೂರು- ಹುಬ್ಬಳ್ಳಿಗೆ ರೂ.3500!

ಬೆಂಗಳೂರು- ಹುಬ್ಬಳ್ಳಿಗೆ ರೂ.3500!

ಇನ್ನೂ ಬೆಂಗಳೂರು-ಹುಬ್ಬಳ್ಳಿಗೆ ಆರೆಂಜ್ ಟೂರ್ಸ್ ಆಂಡ್ ಟ್ರಾವೆಲ್ಸ ಎಸಿ ಸ್ಲೀಪರ್ 3,500ರೂಪಾಯಿಗೆ ಏರಿಕೆ ಮಾಡಿದೆ. ನಾನ್ ಎಸಿ ಆನಂದ ಟ್ರಾವೆಲ್ಸ 2,610 ರೂ, ವಿಆರ್‌ಎಲ್ 2,200, ಸೀಬರ್ಡ್ ಟೂರಸ್ಟ್ 2,600, ಭಾರತಿ ಟ್ರಾವೆಲ್ಸ 1890 ರೂಪಾಯಿಗೆ ಪ್ರಯಾಣದ ದರ ಹೆಚ್ಚಳವಾಗಿವೆ. ಬೆಂಗಳೂರು- ಕಲಬುರಗಿ- ನಾನ್ ಎಸಿ ಸುಗಮ ಟೂರಿಸ್ಟ್ 1150 ರೂ., ಆರೇಂಜ್ ಟೂರ್ಸ್‌ ಆಂಡ್ ಟ್ರಾವೆಲ್ಸ್ 1800 ರೂ., ಪೂಜಾ ಟ್ರಾವೆಲ್ಸ್ ಮತ್ತು ಕುಕ್ಕೇಶ್ರೀ ಟ್ರಾವೆಲ್ಸ್ ಎರಡು ಬಸ್‌ಗಳು ತಲಾ 1699 ರೂ., ಶ್ರೀ ಬಾಲಾಜಿ ಟ್ರಾವೆಲ್ಸ 1159 ರೂ. ಹಾಗೂ ವಿಆರ್‌ಎಲ್ 1800 ರೂಪಾಯಿ ನಿಗದಿ ಮಾಡಿದ್ದಾರೆ.

English summary
Private Bus Ticket Rate Hike: Republic Day, Weekend Holidays: Private bus fare hike shock for Passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X