ಕರ್ನಾಟಕ ರಾಜ್ಯ ಬಜೆಟ್ 2021: ಆದಾಯ ಮತ್ತು ಖರ್ಚಿನ ಲೆಕ್ಕಾಚಾರ ಹೀಗಿದೆ
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸೋಮವಾರ 8ನೇ ಬಾರಿಗೆ ರಾಜ್ಯ ಬಜೆಟ್ ಅನ್ನು ಮಂಡಿಸಿದರು. ಬರೋಬ್ಬರಿ 2,46,406.92 ಕೋಟಿ ರೂಪಾಯಿ ಬಜೆಟ್ ಮಂಡಿಸಿದ ಬಿಎಸ್‌ವೈ ಕಳೆದ ಬಾರಿ ಬಜೆಟ್ ಗಾತ್ರ 2,37,893.33 ಕೋಟಿ ರೂಪಾಯಿಗಿಂತ ಸುಮಾರು 8,500 ಕೋಟಿ ರೂಪಾಯಿ ಹೆಚ್ಚಿನ ಗಾತ್ರದ ಬಜೆಟ್ ಮಂಡಿಸಿದ್ದಾರೆ.
Recommended Video
ಕೋವಿಡ್-19 ಸಾಂಕ್ರಾಮಿಕದ ಪರಿಣಾಮ ಆದಾಯ ಕುಸಿತದೊಂದಿಗೆ ಈಗಾಗಲೇ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟದ ನಡುವೆ ಈ ಬಜೆಟ್ ಅನ್ನು ಮಂಡಿಸಲಾಯಿತು. ಕಳೆದ ಬಾರಿಗಿಂತ ಶೇಕಡಾ 3.4ರಷ್ಟು ಹೆಚ್ಚಿನ ಗಾತ್ರದ ಬಜೆಟ್ ಅನ್ನು ಬಿಎಸ್‌ವೈ ಮಂಡಿಸಿದ್ದಾರೆ.

ವಲಯವಾರು ಅನುದಾನ ಹಂಚಿಕೆ ಎಷ್ಟಿದೆ?
ಕೃಷಿ ಮತ್ತು ಪೂರಕ ಚಟುವಟಿಕೆಗಳು -31,028 ಕೋಟಿ ರೂಪಾಯಿ
ಮಹಿಳಾ ಉದ್ದೇಶಿತ ಯೋಜನೆಗಳು - 37,188 ಕೋಟಿ ರೂಪಾಯಿ
ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ- 62,150 ಕೋಟಿ ರೂಪಾಯಿ
ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ ನೀಡಲು- 52,529 ಕೋಟಿ ರೂಪಾಯಿ
ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿ- 7,795 ಕೋಟಿ ರೂಪಾಯಿ
ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ- 2,645 ಕೋಟಿ ರೂಪಾಯಿ
ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ - 52,519 ಕೋಟಿ ರೂಪಾಯಿ

2021-22ರ ತೆರಿಗೆ/ಆದಾಯ ಸಂಗ್ರಹಣೆ ಗುರಿ
ವಾಣಿಜ್ಯ ತೆರಿಗೆಗಳ ಇಲಾಖೆ - 76,473 ಕೋಟಿ ರೂ.
ನೋಂದಣಿ ಮತ್ತು ಮುದ್ರಣ ಇಲಾಖೆ- 12,655 ಕೋಟಿ ರೂ.
ಅಬಕಾರಿ ಇಲಾಖೆ- 24,580 ಕೋಟಿ ರೂ.
ಸಾರಿಗೆ ಇಲಾಖೆ - 7,515 ಕೋಟಿ ರೂ.
ಹೀಗೆ ಮುಂದಿನ ಆರ್ಥಿಕ ವರ್ಷದಲ್ಲಿ ಆದಾಯ ಸಂಗ್ರಹಣೆ ಗುರಿಯನ್ನು ಹೊಂದಿರುವ ಸರ್ಕಾರವು ಬಜೆಟ್‌ನಲ್ಲಿ ಮಂಡಿಸಿರುವ ಆಯವ್ಯಯ ಪಟ್ಟಿಯ ಆದಾಯದ ಮೂಲ ಹಾಗೂ ಖರ್ಚಿನ ಮಾಹಿತಿ ಈ ಕೆಳಗೆ ನೋಡಬಹುದು. ಒಟ್ಟಾರೆ ಆದಾಯ ಹಾಗೂ ಖರ್ಚನ್ನು ರೂಪಾಯಿ ಲೆಕ್ಕಾಚಾರದಲ್ಲಿ ತಿಳಿಸಲಾಗಿದ್ದು, ಆದಾಯ ಮತ್ತು ವೆಚ್ಚವನ್ನು ಪೈಸೆಗಳಲ್ಲಿ ಲೆಕ್ಕ ಹಾಕಿ ತಿಳಿಸಲಾಗಿದೆ.

ಆದಾಯ ಮೂಲಗಳು ಯಾವುವು?
ರಾಜ್ಯ ತೆರಿಗೆ - 50 ಪೈಸೆ
ಸಾಲದಿಂದ- 29 ಪೈಸೆ
ಕೇಂದ್ರ ತೆರಿಗೆ ಪಾಲು- 10 ಪೈಸೆ
ಕೇಂದ್ರ ಸರ್ಕಾರದ ಸಹಾಯಾನುದಾನ- 6 ಪೈಸೆ
ರಾಜ್ಯ ತೆರಿಗೆಯೇತರ ರಾಜಸ್ವದಿಂದ - 3 ಪೈಸೆ
ಸಾರ್ವಜನಿಕ ಲೆಕ್ಕ ನಿವ್ವಳ - 2 ಪೈಸೆ

ವೆಚ್ಚಗಳು ಯಾವುವು?
ವೇತನ ಹಾಗೂ ಭತ್ಯೆಗಳು -21 ಪೈಸೆ
ಋಣ ಮೇಲುಸ್ತುವಾರಿ - 18 ಪೈಸೆ
ಬಂಡವಾಳ ವೆಚ್ಚ- 17 ಪೈಸೆ
ಇತರ ರಾಜಸ್ವ ವೆಚ್ಚ - 16 ಪೈಸೆ
ಸಹಾಯ ಧನ - 10 ಪೈಸೆ
ಪಿಂಚಣಿ - 10 ಪೈಸೆ
ಸಹಾಯಾನುದಾನ ಮತ್ತು ಇತರೆ - 4 ಪೈಸೆ
ಸಾಮಾಜಿಕ ಭದ್ರತಾ ಪಿಂಚಣಿಗಳ - 3 ಪೈಸೆ
ಆಡಳಿತಾತ್ಮಕ ವೆಚ್ಚಗಳು-1 ಪೈಸೆ
-
Annamalai: ಅಣ್ಣಾಮಲೈ ಮತ್ತು ರಾಜಕೀಯ ಉನ್ಮಾದ: ಶಿವಕುಮಾರ್ ಮೆಣಸಿನಕಾಯಿ ಬರಹ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ












Click it and Unblock the Notifications