ಬಿಜೆಪಿಗೆ 150 ಸ್ಥಾನ ದಕ್ಕಿಸಲು ಬಿಎಸ್ವೈ ತಂತ್ರಗಳೇನು?

Written By:
Subscribe to Oneindia Kannada

ಬೆಂಗಳೂರು, ಮೇ 24: ಕರ್ನಾಟಕ ಬಿಜೆಪಿ ಅಧ್ಯಕ್ಷರಾದ ಮೇಲೆ ಬಿ ಎಸ್ ಯಡಿಯೂರಪ್ಪ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯದ ತುಂಬೆಲ್ಲಾ ಓಡಾಡುತ್ತಿದ್ದಾರೆ.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ 150 ಸ್ಥಾನ ತಂದುಕೊಡುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಬಿಎಸ್ ವೈ ವಾಗ್ದಾನ ಮಾಡಿದ್ದಾರೆ. ಅದಕ್ಕಾಗಿ ಕಾರ್ಯತಂತ್ರಗಳನ್ನು ರೂಪಿಸಲು ಆರಂಭಿಸಿದ್ದಾರೆ.['ಸಿಎಂ ಆಗುವುದಕ್ಕಿಂತ 150 ಸ್ಥಾನ ಗೆಲ್ಲುವುದು ನನ್ನ ಗುರಿ': ಬಿಎಸ್ವೈ]

yeddyurappa

'ನನ್ನ ಗುರಿ ಕರ್ನಾಟಕದ ಮುಖ್ಯಮಂತ್ರಿಯಾಗುವುದಲ್ಲ, 2018ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಬಲವನ್ನು 46ರಿಂದ 150ಕ್ಕೇರಿಸುವುದು' ಎಂದು ಯಡಿಯೂರಪ್ಪ ಮತ್ತೆ ಮತ್ತೆ ಹೇಳುತ್ತಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಬಿಎಸ್ ವೈ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಜತೆಗೆ ಬಿಜೆಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಮತ್ತು ದಕ್ಷಿಣ ಭಾರತ ನೇತೃತ್ವ ವಹಿಸಿರುವ ಆರ್ ಎಸ್ ಎಸ್ ನ ಪ್ರಮುಖ ಬಿಎಲ್ ಸಂತೋಷ್ ಅವರ ನಡೆಗಳನ್ನು ಬಿಎಸ್ ವೈ ಗಮನಿಸುತ್ತಾ ಮುಂದೆ ಹೆಜ್ಜೆ ಇಡುತ್ತಿದ್ದಾರೆ. ಹಿಂದಿನಿಂದಲೂ ಬಿಎಸ್ ವೈ ಮತ್ತು ಸಂತೋಷ್ ನಡುವೆ ಸ್ಪರ್ಧೆ ಇತ್ತು. [ಕೇದಾರನಾಥದಲ್ಲಿ ಯಡಿಯೂರಪ್ಪ, ಶೋಭಾ, ಸೋಮಣ್ಣ]

ಜಿಲ್ಲೆಗೆ ಬಲಿಷ್ಠ ನಾಯಕತ್ವ

ಪ್ರತಿಯೊಂದು ಜಿಲ್ಲೆಗಳ ಪ್ರಮುಖ ನಾಯಕರ, ಪ್ರಭಾವಿ ನಾಯಕರ ಪಟ್ಟಿಯನ್ನು ಬಿ ಎಸ್ ವೈ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಆಧಾರದಲ್ಲಿ ಮುಂದಿನ ಕಾರ್ಯತಂತ್ರಗಳ ಸಿದ್ಧತೆ ನಡೆಸಿದ್ದಾರೆ.

ಬಿಎಲ್ ಸಂತೋಷ್ ಅವರ ತಂಡದಲ್ಲಿಯೂ ಉತ್ತಮ ನಾಯಕರಿದ್ದರೆ ಅವರಿಗೂ ನಾಯಕತ್ವದ ಜವಾಬ್ದಾರಿ ನೀಡಲು ಬಿಎಸ್ ವೈ ತಯಾರಿ ನಡೆಸಿದ್ದಾರೆ. ಈ ಮೂಲಕ ಆಂತರಿಕ ಸಂಘರ್ಷ ಕೊನೆ ಮಾಡಿ ಪಕ್ಷ ಭದ್ರ ಮಾಡಿಕೊಳ್ಳುವುದಕ್ಕೆ ಅವರ ಮೊದಲ ಆದ್ಯತೆ.

ಪ್ರಭಾಕರ್ ಭಟ್ ಅವರಿಗೆ ಶಕ್ತಿ
ರಾಜಕಾರಣದಲ್ಲಿ ಮೂಲೆಗೆ ಸರಿದಿರುವ ಆರ್ ಎಸ್ ಎಸ್ ಪ್ರಮುಖ ಪ್ರಭಾಕರ್ ಭಟ್ ಅವರಿಗೆ ವಿಶೇಷ ಜವಾಬ್ದಾರಿ ನೀಡಲು ಸಿದ್ಧತೆಗಳು ನಡೆದಿವೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಭಟ್ ನಿರ್ಣಾಯಕರಾಗಲಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜವಾಬ್ದಾರಿ ಭಟ್ ಅವರ ಮೇಲೆ ಬೀಳಲಿದೆ. ಅಭ್ಯರ್ಥಿಗಳ ಆಯ್ಕೆ ಮಾಡುವ ಅಧಿಕಾರವನ್ನು ಭಟ್ 2014ರಲ್ಲಿ ಕಳೆದುಕೊಂಡಿದ್ದು ಬಿಎಸ್ ವೈ ಕೃಪೆಯಿಂದ ಮತ್ತೆ ಪಡೆದುಕೊಳ್ಳಲಿದ್ದಾರೆ. (ಒನ್ ಇಂಡಿಯಾ ನ್ಯೂಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A grand bid to keep up the promise made to national BJP President, Amit Shah of winning 150 assembly seats in the state of Karnataka is on. State BJP President and Former Chief Minister of Karnataka, B S Yeddyurappa (BSY) in full swing strategising after he assumed president post to realise the promise. First and foremost thing, BSY is doing at present is ironing out internal differences within the party, according to close sources of BSY.
Please Wait while comments are loading...