ಸಿದ್ದರಾಮಯ್ಯ ಸರ್ಕಾರ ತೊಲಗಿಸಲು ಕೈ ಜೋಡಿಸಿ : ಬಿಎಸ್‌ವೈ ಕರೆ

Posted By: Gururaj
Subscribe to Oneindia Kannada

ಗಳೂರು, ನವೆಂಬರ್ 02 : 'ಮುಂದಿನ ಚುನಾವಣೆಯಲ್ಲಿ 150 ಕ್ಷೇತ್ರದಲ್ಲಿ ಗೆಲವು ಸಾಧಿಸಿ, ಭ್ರಷ್ಟ ಸಿದ್ದರಾಮಯ್ಯ ಅವರ ಸರ್ಕಾರವನ್ನು ನಾವು ಕರ್ನಾಟಕದಿಂದ ತೊಲಗಿಸೋಣ' ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.

ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಸಿಪಿ ಯೋಗೇಶ್ವರ್

ಗುರುವಾರ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಯಲ್ಲಿ ಮಾತನಾಡಿದ ಯಡಿಯೂರಪ್ಪ ಅವರು, '150 ಸ್ಥಾನ ಗೆಲ್ಲುವು ಮೂಲಕ ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವಾಗಿಸುತ್ತೇವೆ ಎಂದು ಅಮಿತ್ ಶಾ ಅವರಿಗೆ ನಾವು ಭರವಸೆ ನೀಡುತ್ತೇವೆ' ಎಂದು ಘೋಷಣೆ ಮಾಡಿದರು.

BS Yeddyurappa address Nava Karnataka Nirmana Parivartan Yatra

ಯಡಿಯೂರಪ್ಪ ಭಾಷಣದ ಮುಖ್ಯಾಂಶಗಳು ಇಲ್ಲಿವೆ...

* ಕರ್ನಾಟಕ ಕಾಂಗ್ರೆಸ್ ಮುಕ್ತವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು. ಅಮಿತ್ ಶಾ ಅವರ ಸಮ್ಮುಖದಲ್ಲಿ ನಾವು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತವಾಗಿಸುವ ಸಂಕಲ್ಪ ಮಾಡೋಣ.

ಸಿದ್ದರಾಮಯ್ಯ ಸರ್ಕಾರ ಕಿತ್ತೊಗೆಯಲು ಈ ಪರಿವರ್ತನಾ ಯಾತ್ರೆ

* ಇಂದು ಅಮಿತ್ ಶಾ ಅವರ ಸಮ್ಮುಖದಲ್ಲಿ ನವ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ನಾವು ನಿವೆಲ್ಲರೂ ಮಾಡೋಣ. 150 ಕ್ಷೇತ್ರದಲ್ಲಿ ಗೆಲವು ಸಾಧಿಸಿ, ಭ್ರಷ್ಟ ಸಿದ್ದರಾಮಯ್ಯ ಅವರ ಸರ್ಕಾರವನ್ನು ನಾವು ಕರ್ನಾಟಕದಿಂದ ತೊಲಗಿಸೋಣ.

* ಯುದ್ಧ ಆರಂಭವಾಗಿದೆ. ರಾಜಕೀಯ ಪಕ್ಷಕ್ಕೆ ಯುದ್ಧ ಎಂದರೆ ಚುನಾವಣೆ. ಪ್ರತಿ ಬೂತ್‌ನಲ್ಲಿ 70ಕ್ಕೂ ಹೆಚ್ಚು ಮತಗಳನ್ನು ಪಡೆಯುತ್ತೇವೆ ಎಂಬ ಸಂಕಲ್ಪದ ಮೂಲಕ ಪ್ರಚಾರವನ್ನು ನಾವು ಆರಂಭಿಸೋಣ. ಬೂತ್ ಮಟ್ಟದ ಕಾರ್ಯಕರ್ತರು ಸೈನಿಕರಂತೆ. ಅವರು ಪಕ್ಷವನ್ನು ಗೆಲ್ಲಿಸುವ ಪಣ ತೊಟ್ಟರೆ ಬಿಜೆಪಿಗೆ ಗೆಲುವು ಸಿಕ್ಕಂತೆ.

ಹೇಗಿದೆ ನೋಡಿ ಬಿಜೆಪಿಯ ಕರ್ನಾಟಕ ಪರಿವರ್ತನಾ ಯಾತ್ರೆಯ ಐಷಾರಾಮಿ ಬಸ್ಸು!

* ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದು ಹೋದ ಮೇಲೆ ಸಿದ್ದರಾಮಯ್ಯ ಅವರಿಗೆ ಭಯ ಆರಂಭವಾಗಿದೆ. ಅದಕ್ಕೆ ಮನ ಬಂದಂತೆ ಮಾತನಾಡುತ್ತಿದ್ದಾರೆ. ಪ್ರಧಾನಿ ಅವರಿಗೆ ಸಿದ್ದರಾಮಯ್ಯ ಅವರನ್ನು ಕಂಡರೆ ಭಯ ಎಂಬುದು ಈ ವರ್ಷದ ದೊಡ್ಡ ಜೋಕ್

* 224 ಕ್ಷೇತ್ರಕ್ಕೆ ನಾನು ಬರುತ್ತೇನೆ. 15 ರಿಂದ 20 ಸಾವಿರ ಜನರು ಪ್ರತಿ ಕ್ಷೇತ್ರದಲ್ಲಿ ಸೇರುವ ಮೂಲಕ ಶಕ್ತಿ ಪ್ರದರ್ಶನ ಮಾಡೋಣ. 150 ಸ್ಥಾನಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿರಲಿ. ದೈವ ಬಲ, ಜನಬಲ ನಮ್ಮ ಮೇಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP president B.S.Yeddyurappa addressed Nava Karnataka Nirmana Parivartan Yatra in Bengaluru, on November 2, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ