Get Updates
Get notified of breaking news, exclusive insights, and must-see stories!

ಹೊಟ್ಟೆಗೆ ಊಟ ಇಲ್ಲದಿದ್ದ ಸಿ.ಟಿ. ರವಿ ಇಂದು ಸಾವಿರ ಕೋಟಿಯ ಮಾಲೀಕ!

ಬೆಂಗಳೂರು, ಆ. 27: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಮುಖ್ಯಮಂತ್ರಿ ಪಟ್ಟ ಸ್ವಲ್ಪದರಲ್ಲಿ ತಪ್ಪಿದೆಯಾ? ಹೌದು ಅಂಥದ್ದೊಂದು ಮಾಹಿತಿಯನ್ನು ಕೇಂದ್ರ ಕಾಂಗ್ರೆಸ್ ನಾಯಕರು ಕೊಟ್ಟಿದ್ದಾರೆ. ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿದ್ದ ಸಿ.ಟಿ. ರವಿ ಆ ಸ್ಥಾನ ಸಿಗದ ಬೇಸರದಲ್ಲಿ ಲಘುವಾಗಿ ಮಾತನಾಡುತ್ತಿದ್ದಾರಂತೆ!.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ಬದಲಾವಣೆ ಬಳಿಕ ಯಾರು? ಎಂಬ ಹುಡುಕಾಟದಲ್ಲಿ ಬಿಜೆಪಿ ವರಿಷ್ಠ ನಾಯಕರಿದ್ದರು. ಆಗ ಅವರು ಗುರುತಿಸಿದ್ದ ರಾಜ್ಯ ಬಿಜೆಪಿ ನಾಯಕರಲ್ಲಿ ಸಿ.ಟಿ. ರವಿ ಕೂಡ ಇದ್ದರು ಎನ್ನಲಾಗಿದೆ. ಸಿ.ಟಿ. ರವಿ ಅವರೊಂದಿಗೆ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ವಿ. ಸುನಿಲ್ ಕುಮಾರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಅನೇಕರಿದ್ದರು.

ಕೊನೆಗೆ ಮಾಜಿ ಸಿಎಂ ಯಡಿಯೂರಪ್ಪ ಒತ್ತಡಕ್ಕೆ ಮಣಿದು ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಲು ಬಿಜೆಪಿ ಹೈಕಮಾಂಡ್ ಒಪ್ಪಿಕೊಂಡಿತು ಎಂಬ ಮಾಹಿತಿಯಿದೆ. ಹೀಗಾಗಿ ಅಂತಿಮ ಕ್ಷಣದಲ್ಲಿ ಸಿ.ಟಿ. ರವಿ ಅವರಿಗೆ ಸಿಎಂ ಹುದ್ದೆ 'ಕೈ'ತಪ್ಪಿದೆ ಎಂದು 'ಕೈ' ನಾಯಕರು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ವಾಂತಿ ಬೇಧಿ ಬಂದವರಂತೆ ಮಾತನಾಡುತ್ತಿದ್ದಾರೆ!

ವಾಂತಿ ಬೇಧಿ ಬಂದವರಂತೆ ಮಾತನಾಡುತ್ತಿದ್ದಾರೆ!

"ಮುಖ್ಯಮಂತ್ರಿ ಪಟ್ಟದ ಕನಸು ಕಾಣುತ್ತಿದ್ದ ಸಿ.ಟಿ. ರವಿ, ಆ ಸ್ಥಾನ ಸಿಗದ ಬೇಸರದಲ್ಲಿ ಕಾಂಗ್ರೆಸ್ ನಾಯಕರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಈ ರೀತಿ ಮಾತನಾಡುವುದನ್ನು ನಿಲ್ಲಿಸಲಿ. ಬಿಜೆಪಿಯಲ್ಲಿ ಯಾರೆಲ್ಲಾ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದರೋ ಅವರೆಲ್ಲ ನಿರಾಸೆಗೊಂಡು ವಾಂತಿ ಬೇಧಿ ಬಂದವರಂತೆ ಮಾತನಾಡುತ್ತಿದ್ದಾರೆ" ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.

"ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ನಂತರ ಆ ಸ್ಥಾನದ ಮೇಲೆ ಆಸೆ ಪಟ್ಟವರು ಸಿ.ಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್ ಈಶ್ವರಪ್ಪ ಅವರು. ಬಿಜೆಪಿ ಹೈಕಮಾಂಡ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ನಂತರ ಈ ಮೂವರ ಹತಾಶರಾಗಿ ವಾಂತಿ, ಬೇಧಿ ಬಂದವರಂತೆ ದಿನನಿತ್ಯ ಕೀಳು ಮಾತುಗಳನ್ನಾಡುತ್ತಿದ್ದಾರೆ" ಎಂದು ಟೀಕಿಸಿದ್ದಾರೆ.

ಲಕ್ಷ್ಮಣ್ ಸವದಿ ಯಾವ ಘನ ಕಾರ್ಯ ಮಾಡಿದ್ದಾರೆ?

ಲಕ್ಷ್ಮಣ್ ಸವದಿ ಯಾವ ಘನ ಕಾರ್ಯ ಮಾಡಿದ್ದಾರೆ?

"ಸಿ.ಟಿ ರವಿ ಅವರು ಹೆಚ್ಚು ನಿರಾಸೆಯಾದವರಂತೆ ಮೊದಲು ದಿ. ಇಂದಿರಾ ಗಾಂಧಿ ಅವರ ಬಗ್ಗೆ ಮಾತನಾಡಿದರು. ನಂತರ ನೆಹರೂ ಅವರ ಬಗ್ಗೆ ಮಾತನಾಡಿದರು. ನಂತರ ನಾವು ಅವರಿಗೆ ಪ್ರತ್ಯುತ್ತರ ನೀಡಿದಾಗ ರವಿ ಅವರು ಕೇಸ್ ದಾಖಲಿಸುವುದಾಗಿ ಹೇಳಿದರು. ಗಾಜಿನಮನೆಯಲ್ಲಿರುವವರು ಕಲ್ಲು ಬಿಸಾಡಬಾರದು ಎಂದು ಹೇಳುತ್ತಾರೆ. ಇದು ರವಿ ಅವರಿಗೆ ತಿಳಿದಿಲ್ಲ ಎನಿಸುತ್ತದೆ. ಹೀಗಾಗಿ ವಿನಯ್ ಕುಲಕರ್ಣಿ ಅವರ ಬಿಡುಗಡೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಪ್ರಮೋಷನ್ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಲಕ್ಷ್ಮಣ್ ಸವದಿ ಅವರು ಯಾವ ಘನ ಕಾರ್ಯ ಮಾಡಿದ್ದಾರೆ ಎಂದು ಚುನಾವಣೆಯಲ್ಲಿ ಸೋತವರಿಗೆ ಉಪಮುಖ್ಯಮಂತ್ರಿ ಪಟ್ಟ ಕೊಟ್ಟರು?" ಎಂದು ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ಮತ್ತು ಜೈಲು!

ಬಿಜೆಪಿ ನಾಯಕರು ಮತ್ತು ಜೈಲು!

"ನಮ್ಮ ದೇಶದ ಗೃಹ ಮಂತ್ರಿಗಳು ಹಾಗೂ ಮಾಜಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ 17 ಜನರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಸಾಯಿಸಿದ ಆರೋಪದಲ್ಲಿ ಜೈಲು ಸೇರಿದ್ದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ರಘುಪತಿ ಭಟ್, ಹಾಲಪ್ಪ, ಜನಾರ್ದನ ರೆಡ್ಡಿ ಸೇರಿದಂತೆ ಆಗಿನ ಬಿಜೆಪಿ ಸರ್ಕಾರದ ಅರ್ಧದಷ್ಟು ಸಂಪುಟ ಸಚಿವರು ಜೈಲು ಸೇರಿದ್ದರು. ಇಂತಹ ಹಿನ್ನೆಲೆ ಇಟ್ಟುಕೊಂಡು ಸಿ.ಟಿ. ರವಿ ಈ ರೀತಿಯಾಗಿ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುತ್ತಾರೆ" ಎಂದು ಆರೋಪಿಸಿದ್ದಾರೆ.

Recommended Video

    ಒಡಿಸ್ಸಾ ದೇವತೆ ಲಂಕೇಶ್ವರಿ ಲಂಕೆಯಲ್ಲಿ ನೆಲೆಸಿದ್ದು ಹೇಗೆ? | Oneindia Kannada
    ಊಟ ಇಲ್ಲದವರು ಈಗ ಸಾವಿರ ಕೋಟಿಯ ಮಾಲೀಕ

    ಊಟ ಇಲ್ಲದವರು ಈಗ ಸಾವಿರ ಕೋಟಿಯ ಮಾಲೀಕ

    "ಸಿ.ಟಿ. ರವಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನ 'ಲೂಟಿ ರವಿ' ಎಂದು ಕರೆಯುತ್ತಾರೆ. ಒಂದು ಸಂದರ್ಭದಲ್ಲಿ ಹೊಟ್ಟೆಗೆ ಊಟ ಇಲ್ಲದವರು ಇಂದು ಸಾವಿರ ಕೋಟಿಯ ಮಾಲೀಕರು. ಇದಕ್ಕೆ ಲೆಕ್ಕ ಎಲ್ಲಿದೆ? ಈ ಹಿನ್ನೆಲೆಯಲ್ಲಿ ಸಿ.ಟಿ ರವಿ ಅವರು ನಿರಾಸೆಯಿಂದ ಹಗುರವಾಗಿ ಮಾತನಾಡುವಾಗ ನಿಮ್ಮ ಎದುರಾಳಿಗಳು ನಿಮ್ಮ ಜತೆ ಅದೇ ರೀತಿ ಮಾತನಾಡುತ್ತಾರೆ ಎಂಬುದನ್ನು ಅರಿಯಿರಿ. ನೀವು ಮುಖ್ಯಮಂತ್ರಿಯಾಗುವ ಆಸೆ ಇದ್ದರೆ ಆಗಿ, ನಮ್ಮಲ್ಲಿ ಯಾರಿಗೂ ಬೇಸರ ಇಲ್ಲ. ನೀವು ಪಂಡಿತ್ ನೆಹರೂ ಅವರ ಬಗ್ಗೆ ಮಾತನಾಡಿಕೊಂಡು ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ನೀವು ನಿಮ್ಮ ಗೌರವ ಉಳಿಸಿಕೊಳ್ಳಿ. ನೆಹರೂ ಅವರಿಗೆ ನಿಮ್ಮ ತಂದೆ, ತಾತ ಅವರು ಕೂಡ ಮತ ಹಾಕಿರುತ್ತಾರೆ. ಈ ದೇಶಕ್ಕೆ ಮಹಾನ್ ಕೊಡುಗೆ ಕೊಟ್ಟಿದ್ದಾರೆ, ಅವರ ಬಗ್ಗೆ ಹಾಗೂ ಬೇರೆ ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿ. ನಿಮ್ಮ ಪಕ್ಷದಲ್ಲಿರುವ ಲೋಪದೋಷಗಳ ಬಗ್ಗೆ ತಿಳಿದುಕೊಳ್ಳಿ" ಎಂದು ಬ್ರಿಜೇಶ್ ಕಾಳಪ್ಪ ಸಲಹೆ ನೀಡಿದ್ದಾರೆ.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+