ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರು: ಬಾಲಕನ ಪ್ರಾಣಕ್ಕೆ ಉರುಳಾಯ್ತು ತೊಟ್ಟಿಲ ಹಗ್ಗ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜುಲೈ.12: ತೊಟ್ಟಿಲಲ್ಲಿ ಮಲಗಿ, ಹಿರಿಯರಿಂದ ಜೀಕಿಸಿಕೊಳ್ಳಬೇಕು ಅನ್ನುವ ಆಸೆ ಇಲ್ಲದ ಮಕ್ಕಳಿಲ್ಲ. ಆದರೆ ಹಗ್ಗವೇ ಹಾವಾಯಿತು ಅನ್ನುವ ರೀತಿಯಲ್ಲಿ ತೊಟ್ಟಿಲಿನ ಹಗ್ಗವೇ ಜೀವಕ್ಕೆರವಾದರೆ? ಹೌದು, ಇಂತಹ ಘಟನೆಯೊಂದು ನಗರದ ಆದಿಶಕ್ತಿ ನಗರದಲ್ಲಿ ನಡೆದಿದೆ.

ತೇಜಸ್ (10) ಮೃತ ಬಾಲಕ. ಸಂಬಂಧಿಕರೊಬ್ಬರ ಮಗುವನ್ನು ತೂಗುತ್ತಿದ್ದಾಗ, ಅಕಸ್ಮಾತಾಗಿ ಹಗ್ಗ ಈತನ ಕುತ್ತಿಗೆಗೆ ಸುತ್ತಿಕೊಂಡಿದೆ. ಉಸಿರು ನಿಂತು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತನ ತಂದೆ ಕೆಎಸ್ಆರ್ ಟಿಸಿ ಚಾಲಕರಾಗಿದ್ದು, ಚಿತ್ರದುರ್ಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ? ದಂಪತಿ ಸಾವು, ಮಕ್ಕಳು ಅನಾಥಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆ? ದಂಪತಿ ಸಾವು, ಮಕ್ಕಳು ಅನಾಥ

ನಗರ ಪೊಲೀಸರು ತನಿಖೆ ಕೈಗೊಂಡಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಸಾವಿನ ನಿಖರ ಕಾರಣ ತಿಳಿಯಬಹುದು.

Boy was died by breathless incident happened in chikmagalur

ಹೊತ್ತಿ ಉರಿದ ಬಟ್ಟೆ ಅಂಗಡಿ

ಚಿಕ್ಕಮಗಳೂರು ನಗರದ ಎಂ.ಜಿ.ರಸ್ತೆಯ ಕಾಟನ್ ಎಕ್ಸ್ಪೋಸೇಲ್ ಅಂಗಡಿಯಲ್ಲಿ ಜುಲೈ.11 ರಂದು ಬುಧವಾರ ಮಧ್ಯರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿಯಲ್ಲಿ ಮಲಗಿದ್ದ ಆರು ಜನ ಕೆಲಸಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ಲಕ್ಷಾಂತರ ಮೌಲ್ಯದ ಬಟ್ಟೆಗಳು ಬೆಂಕಿಗಾಹುತಿಯಾಗಿವೆ. ವಿದ್ಯುತ್ ಶಾರ್ಟ್ ಸಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ್ದು, ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

English summary
Boy was died by breathless incident happened in chikmagalur. This is due to the cradle rope. Tejas (10) is a dead boy. The city police have taken a probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X