ಬೊಮ್ಮನಹಳ್ಳಿ ಕ್ಷೇತ್ರದ ಪ್ರಜೆಗಳಿಗೆ ಉತ್ತಮ ರಸ್ತೆಗಳನ್ನು ನೀಡುವ ಗುರಿ ನಮ್ಮದು: ಶಾಸಕ ಸತೀಶ್ ರೆಡ್ಡಿ
ಬೊಮ್ಮನಹಳ್ಳಿ ಕ್ಷೇತ್ರದ ಜನರು ಅಭಿವೃದ್ಧಿ ನಂಬಿ ನನ್ನನ್ನು ಆಯ್ಕೆ ಮಾಡಿದ್ದಾರೆ, ಬೊಮ್ಮನಹಳ್ಳಿ ಕ್ಷೇತ್ರದ ಪ್ರಜೆಗಳಿಗೆ ಅಭಿವೃದ್ಧಿ ಕೆಲಸಗಳನ್ನು ತಲುಪಿಸುವುದು ನನ್ನ ಕರ್ತವ್ಯವಾಗಿದೆ. ಹೀಗಾಗಿ, ಬೊಮ್ಮನಹಳ್ಳಿ ಕ್ಷೇತ್ರದ ಪ್ರಜೆಗಳಿಗೆ ಉತ್ತಮ ರಸ್ತೆಗಳನ್ನು ನೀಡುವ ಗುರಿ ನಮ್ಮದು. ಇದಕ್ಕಾಗಿಯೇ ಹಗಲು & ರಾತ್ರಿ ಕಾಮಗಾರಿ ನಡೆಸಲಾಗುತ್ತಿದೆ ಎಂದು ಬೊಮ್ಮನಹಳ್ಳಿ ಶಾಸಕರಾದ ಸತೀಶ್ ರೆಡ್ಡಿ ತಿಳಿಸಿದರು. ಬಿಳೇಕಹಳ್ಳಿ, ಹೊಸಪಾಳ್ಯ ಸೇರಿದಂತೆ ಬೊಮ್ಮನಹಳ್ಳಿ ಕ್ಷೇತ್ರದ ವಿವಿಧ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಿಳೇಕಹಳ್ಳಿ ಸೋಮೇಶ್ವರ ಲೇಔಟ್‌ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ ಹಾಗೂ ಹೊಸಪಾಳ್ಯ ಭಾಗದಲ್ಲಿ ರಸ್ತೆ ಡಾಂಬಾರೀಕರಣ ಕಾಮಗಾರಿ ಉದ್ಘಾಟನೆ ನೆರವೇರಿಸಿ ಶಾಸಕರಾದ ಸತೀಶ್ ರೆಡ್ಡಿ ಮಾತನಾಡಿದರು. ಈ ಅಭಿವೃದ್ಧಿ ಕಾಮಗಾರಿಗಳು ಪ್ರಜೆಗಳಿಗೆ ದೈನಂದಿನ ಜೀವನಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯಕವಾಗದ್ದು, ಸಂಚಾರ ಸುಗಮವಾಗಲು ಹಲವು ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ. ಈಗಾಗಲೇ ಕ್ಷೇತ್ರದ ಹಲವು ಕಡೆ ಅಗತ್ಯ ಇರುವ ಎಲ್ಲಾ ಕಾಮಗಾರಿ ಮುಗಿಸಲಾಗಿದ್ದು, ಬಾಕಿ ಇರುವ ಕೆಲಸಗಳು ವೇಗವಾಗಿ ಸಾಗಿವೆ ಎಂದು ಶಾಸಕರಾದ ಸತೀಶ್ ರೆಡ್ಡಿ ತಿಳಿಸಿದರು.

ಹೊಸಪಾಳ್ಯ ಭಾಗದಲ್ಲಿ ರಸ್ತೆ ಅಭಿವೃದ್ಧಿ
ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸಪಾಳ್ಯ ಪ್ರದೇಶದಲ್ಲಿ ಕೂಡ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಸ್ಥಳೀಯರ ಜೊತೆಗೆ ಕುಂದು & ಕೊರತೆ ಬಗ್ಗೆ ಚರ್ಚೆ ಮಾಡಿದ ಶಾಸಕ ಸತೀಶ್ ರೆಡ್ಡಿ ಅವರು, ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿ ಪಡೆದರು. ಮಾಜಿ ನಗರಸಭಾ ಸದಸ್ಯ ಶ್ರೀನಿವಾಸ್ ರೆಡ್ಡಿ ಮತ್ತು ಬಿಜೆಪಿ ಮುಖಂಡ ಜಗದೀಶ್ ಗೌಡ, ಚಂದ್ರ ರೆಡ್ಡಿ ಹಾಗೂ ಗೋಪಿನಾಥ್ ರೆಡ್ಡಿ ಅವರು ಈ ವೇಳೆ ಹಾಜರಿದ್ದರು.
ರಸ್ತೆ ಗುಂಡಿ ಮುಚ್ಚಿಸಲು ಮಹತ್ವದ ಅಭಿಯಾನ
ಮೊದಲೇ ಹೇಳಿದಂತೆ ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಬೊಮ್ಮನಹಳ್ಳಿಯು ಮೊದಲಾಗಿದ್ದು, ಬೊಮ್ಮನಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ಕಂಪನಿಗಳು ಕಾರ್ಯನಿರ್ವಹಣೆ ಮಾಡುತ್ತಿವೆ. ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಈಗ ಗುಂಡಿಮುಕ್ತ ಬೊಮ್ಮನಹಳ್ಳಿ ಅಭಿಯಾನ ಕೈಗೊಳ್ಳಲಾಗಿದ್ದು, ಈ ಬಗ್ಗೆ ಕೂಡ ಶಾಸಕ ಸತೀಶ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದ ವಿವಿಧ ಪ್ರಮುಖ ಮಾರ್ಗಗಳಲ್ಲಿ ರಸ್ತೆ ದುರಸ್ತಿ & ಪ್ಯಾಚ್ ವರ್ಕ್ ಕಾರ್ಯ ಭಾಗಶಃ ಪೂರ್ಣಗೊಂಡಿದ್ದು. ಈ ಮೂಲಕ ನಾಗರಿಕರು ಸುಗಮವಾಗಿ ಸಂಚಾರ ಮಾಡಲು ಕ್ರಮ ಕೈಗೊಂಡಿದ್ದೇವೆಂದು ಶಾಸಕರಾದ ಸತೀಶ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications