ಗುಂಡಿಮುಕ್ತ ಬೊಮ್ಮನಹಳ್ಳಿ ಅಭಿಯಾನ: ಶಾಸಕ ಸತೀಶ್ ರೆಡ್ಡಿ ಮಾಹಿತಿ
ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಗುಂಡಿ ಬಗ್ಗೆ ಸವಾರರು ಚಿಂತೆ ಮಾಡುವಂತೆ ಆಗಿದೆ, ಗುಂಡಿ ಕಾರಣಕ್ಕೆ ವಾಹನ ಓಡಿಸುವುದು ಕೂಡ ಕಷ್ಟವಾಗಿರುವ ಸಮಯದಲ್ಲೇ ಹೊಸ ಅಭಿಯಾನ ಒಂದು ಶುರುವಾಗಿದೆ. ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ಒಂದಾಗಿರುವ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ, ಇದೀಗ 'ಗುಂಡಿಮುಕ್ತ ಬೊಮ್ಮನಹಳ್ಳಿ' ಅಭಿಯಾನ ಶುರು ಮಾಡಲಾಗಿದೆ. ಈ ಮೂಲಕ ಸ್ಥಳೀಯ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಶಾಸಕ ಸತೀಶ್ ರೆಡ್ಡಿ ಮಹತ್ವದ ಕ್ರಮ ಕೈಗೊಂಡಿದ್ದಾರೆ. 'ಗುಂಡಿಮುಕ್ತ ಬೊಮ್ಮನಹಳ್ಳಿ' ಅಭಿಯಾನದ ಬಗ್ಗೆ ಶಾಸಕ ಸತೀಶ್ ರೆಡ್ಡಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಕಳೆದ ಒಂದು ದಶಕದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದಿದೆ. ಅತ್ಯಂತ ದೊಡ್ಡ ಕ್ಷೇತ್ರಗಳ ಪೈಕಿ ಒಂದಾದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಲಕ್ಷ ಲಕ್ಷ ಐಟಿ ಉದ್ಯೋಗಿಗಳು, ಗಾರ್ಮೆಂಟ್ಸ್ ನೌಕರರು, ಇತರ ಪ್ರಮುಖವಾದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು ಹೆಚ್ಚಾಗಿದ್ದಾರೆ. ಅದರಲ್ಲೂ ಪ್ರಮುಖವಾಗಿ ಎಚ್‌ಎಸ್‌ಆರ್ ಬಡವಾಣೆ ಬೆಂಗಳೂರಲ್ಲೇ ಸ್ಟಾರ್ಟ್‌ಅಪ್ ಹಬ್ ಆಗಿದೆ. ಹೀಗಾಗಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿ ಈಗ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಇದರ ಜೊತೆಯಲ್ಲೇ 'ಗುಂಡಿಮುಕ್ತ ಬೊಮ್ಮನಹಳ್ಳಿ' ಅಭಿಯಾನ ಶುರು ಮಾಡಿದ್ದಾರೆ ಶಾಸಕ ಸತೀಶ್ ರೆಡ್ಡಿ.

ರಸ್ತೆ ಗುಂಡಿ ಮುಚ್ಚಿಸಲು ಮಹತ್ವದ ಅಭಿಯಾನ
ಗುಂಡಿಮುಕ್ತ ಬೊಮ್ಮನಹಳ್ಳಿ ಅಭಿಯಾನದ ಬಗ್ಗೆ ಮಾಹಿತಿ ಹಂಚಿಕೊಂಡಿರುವ, ಶಾಸಕ ಸತೀಶ್ ರೆಡ್ಡಿ ಅವರು ವಿವಿಧ ಕಾಮಗಾರಿಗಳ ಬಗ್ಗೆ ತಿಳಿಸಿದ್ದಾರೆ. ಬೊಮ್ಮನಹಳ್ಳಿ ಕ್ಷೇತ್ರದ ವಿವಿಧ ಪ್ರಮುಖ ಮಾರ್ಗಗಳಲ್ಲಿ ರಸ್ತೆ ದುರಸ್ತಿ & ಪ್ಯಾಚ್ ವರ್ಕ್ ಕಾರ್ಯ ನಡೆಸಲಾಗುತ್ತಿದೆ. ನಾಗರಿಕರು ಸುಗಮವಾಗಿ ಸಂಚಾರ ಮಾಡುವಂತೆ ಮಾಡಲು ಈ ಕೆಲಸಗಳು ನೆರವಾಗಲಿವೆ ಎಂದು ಸತೀಶ್ ರೆಡ್ಡಿ ಅವರು ಈಗ ಮಾಹಿತಿ ನೀಡಿದ್ದಾರೆ.
ಗುಂಡಿಮುಕ್ತ ಹಾಗೂ ಸುಧಾರಿತ ಮೂಲಸೌಕರ್ಯ
ಪ್ರಮುಖವಾಗಿ DLF ಮತ್ತು ಹುಳಿಮಾವು ರಸ್ತೆಯಲ್ಲಿ ಅಗತ್ಯ ಪ್ಯಾಚ್ ವರ್ಕ್ ಪೂರ್ಣಗೊಳಿಸಲಾಗಿದೆ, ರೂಪೇನ ಅಗ್ರಹಾರ ಸರ್ವಿಸ್ ರಸ್ತೆ ಭಾಗದಲ್ಲಿ ದುರಸ್ತಿ ಕಾರ್ಯ ನೆರವೇರಿಸಲಾಗಿದೆ. ಬೇಗೂರು ರಸ್ತೆ ಮಾರ್ಗದಲ್ಲಿ ಕೂಡ ಪ್ಯಾಚ್ ವರ್ಕ್ ಮುಗಿದು, ಸಾರ್ವಜನಿಕರಿಗೆ ಸುಲಭ ಸಂಚಾರಕ್ಕೆ ನೆರವಾಗಲಿದೆ ಎಂದು ತಿಳಿಸಿದ್ದಾರೆ. ಹಾಗೇ ಬೊಮ್ಮನಹಳ್ಳಿ ಕ್ಷೇತ್ರವನ್ನು ಈಗ ಗುಂಡಿಮುಕ್ತ ಹಾಗೂ ಸುಧಾರಿತ ಮೂಲಸೌಕರ್ಯ ಹೊಂದಿರುವ ಕ್ಷೇತ್ರವಾಗಿ ರೂಪಿಸುವುದಕ್ಕೆ ನಮ್ಮ ನಿರಂತರ ಬದ್ಧತೆ ಇದಾಗಿದೆ ಎಂದು ಕೂಡ ಸತೀಶ್ ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications