ಸಂಪುಟ ವಿಸ್ತರಣೆ: ನಿಗಮ-ಮಂಡಳಿ, ಸಂಸದೀಯ ಕಾರ್ಯದರ್ಶಿ ಸ್ಥಾನ ಯಾರಿಗೆ?
ಬೆಂಗಳೂರು, ಡಿಸೆಂಬರ್ 21: ಸುಮಾರು ಏಳು ತಿಂಗಳ ಕಸರತ್ತಿನ ಬಳಿಕ ಕೊನೆಗೂ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆ ಆಗುತ್ತಿದೆ. ಕಾಂಗ್ರೆಸ್ ಪಕ್ಷವು ತನ್ನ ಕೆಲವು ಸಚಿವರನ್ನು ಕೆಳಕ್ಕಿಳಿಸುವ ಮತ್ತು ಕೆಲವು ಶಾಸಕರಿಗೆ ಸಚಿವ ಸ್ಥಾನ ನೀಡುವ ನಿರ್ಧಾರ ತೆಗೆದುಕೊಂಡಿದೆ.
ರಮೇಶ್ ಜಾರಕಿಹೊಳಿ, ಜಯಮಾಲಾ ಮತ್ತು ಆರ್. ಶಂಕರ್ ಸಚಿವ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಾತರಿಯಾಗಿದೆ. ಇನ್ನು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಎಲ್ಲರಿಗೂ ಸಿಹಿ ದೊರಕದೆ ಇದ್ದರೂ, ನಿಗಮ ಮತ್ತು ಮಂಡಳಿಯ ಅಧಿಕಾರದ ಸಮಾಧಾನ ಸಿಕ್ಕಿದೆ.

ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ.
18 ನಿಗಮ, ಮಂಡಳಿಗೆ ಮತ್ತು ಸಂಸದೀಯ ಕಾರ್ಯದರ್ಶಿ ಸ್ಥಾನಕ್ಕೆ ಪ್ರಸ್ತಾಪಿಸಲಾಗಿರುವ ಹೆಸರುಗಳು ಹೀಗಿವೆ.
ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನ
* ಬಿ.ಕೆ. ಸಂಗಮೇಶ್- ಕೇಂದ್ರ ಭೂಸೇನಾ ನಿಗಮ
* ಆರ್. ನರೇಂದ್ರ-ಕೆಎಫ್ಎಸ್‌ಸಿ
* ಬಿ. ನಾರಾಯಣ ರಾವ್- ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
* ಟಿ. ವೆಂಕಟರಮಣಯ್ಯ- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
* ಟಿ. ರಘುಮೂರ್ತಿ- ಹಟ್ಟಿ ಚಿನ್ನದ ಗಣಿ ನಿಗಮ
* ಎಸ್ ಎನ್ ಸುಬ್ಬಾರೆಡ್ಡಿ- ರೇಷ್ಮೆ ಕೈಗಾರಿಕೆ ನಿಗಮ
* ಯಶವಂತರಾಯ್ ಗೌಡ ಪಾಟೀಲ್/ ನಾಗೇಶ್ (ಸ್ವತಂತ್ರ)- ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ
* ಬಿ. ಶಿವಣ್ಣ- ಕಿಯೋನಿಕ್ಸ್
* ಬಿಎ ಬಸವರಾಜು- ಸಾಬೂನು ಮತ್ತು ಮಾರ್ಜಕ ನಿಗಮ
* ಶಿವರಾಮ್ ಹೆಬ್ಬಾರ್- ವಾಯವ್ಯ ಕರ್ನಾಟಕ ಸಾರಿಗೆ
* ಕೆ. ಸುಧಾಕರ್- ಮಾಲಿನ್ಯ ನಿಯಂತ್ರಣ ಮಂಡಳಿ
* ಬಿಎಸ್ ಸುರೇಶ್- ಕೆಎಸ್‌ಎಸ್‌ಐಡಿಸಿ
* ಪ್ರಸಾದ್ ಅಬ್ಬಯ್ಯ- ಎಲ್‌ಐಡಿಕೆಎಆರ್
* ಎನ್‌ಎ ಹ್ಯಾರಿಸ್- ಬಿಎಂಆರ್‌ಟಿಸಿ
* ಎಸ್‌ಟಿ ಸೋಮಶೇಖರ್- ಬಿಡಿಎ
* ಮುನಿರತ್ನ- ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮ
* ಉಮೇಶ್ ಜಾಧವ್ - ಕರ್ನಾಟಕ ಉಗ್ರಾಣ ನಿಗಮ
* ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ- ನಾರಾಯಣ ಸ್ವಾಮಿ ಎಸ್.ಎನ್.
ನವದೆಹಲಿಯ ವಿಶೇಷ ಪ್ರತಿನಿಧಿ: ಡಾ. ಅಜಯ್ ಸಿಂಗ್
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ: ವಿ. ಮುನಿಯಪ್ಪ
ಸಂಸದೀಯ ಕಾರ್ಯದರ್ಶಿ ಸ್ಥಾನ
ಸೌಮ್ಯಾ ರೆಡ್ಡಿ, ಅಂಜಲಿ ನಿಂಬಾಳ್ಕರ್, ಕೆ. ಗೋವಿಂದರಾಜು, ರಾಘವೇಂದ್ರ ಹಿಟ್ನಾಳ್, ಐವನ್ ಡಿಸೋಜಾ, ಬಿ. ಮುನಿಯಪ್ಪ, ಮಹಾಂತೇಶ್, ರೂಪಾ ಶಶಿಧರ್.ಯೋಜನಾ ಆಯೋಗದ ಉಪಾಧ್ಯಕ್ಷ: ಶರಣಬಸಪ್ಪ ದರ್ಶನಪುರ












Click it and Unblock the Notifications