ಸಾರಿಗೆ ನೌಕರರ ಉಗ್ರ ಹೋರಾಟ, ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ... BMTC Bus
ಕರ್ನಾಟಕ ರಾಜ್ಯದಲ್ಲಿ ಸಾಲು ಸಾಲು ಹೋರಾಟ & ಪ್ರತಿಭಟನೆಗಳು ನಡೆಯುತ್ತಿರುವ ಕಾರಣಕ್ಕೆ ಜನರಿಗೆ ಕೂಡ ಸವಾಲು ಎದುರಾಗುತ್ತಿದೆ. ಅದರಲ್ಲೂ 2025 ವರ್ಷ ಪೂರ್ತಿ ಸಾಲು ಸಾಲು ಬಂದ್ ಹಾಗೂ ಹೋರಾಟ ನಡೆದ ಕಾರಣಕ್ಕೆ ರಜೆಗಳು ಕೂಡ ಸಾಕಷ್ಟು ಸಿಕ್ಕಿದ್ದವು. ಈಗ ಮತ್ತೊಮ್ಮೆ ಈ ರೀತಿ ಇಡೀ ಕರ್ನಾಟಕದಲ್ಲೇ ಬೃಹತ್ ಹೋರಾಟಕ್ಕೆ ಈಗ ತಯಾರಿ ನಡೆದಿದೆ. ಅಂದಹಾಗೆ ಈ ಬಾರಿ ಬಸ್ ಸಿಗೋದು ಡೌಟ್ ಅನ್ನೋ ಲೆಕ್ಕಾಚಾರದಲ್ಲಿ ಹೋರಾಟಕ್ಕೆ ಸಿದ್ಧತೆ ನಡೆಸುತ್ತಾ ಇದ್ದಾರೆ ಸರ್ಕಾರಿ ಸಾರಿಗೆ ಸಿಬ್ಬಂದಿ. ಹೀಗಿದ್ದಾಗಲೇ ಸಾರಿಗೆ ನೌಕರರ ಉಗ್ರ ಹೋರಾಟ, ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ...
ಹೌದು, ಗ್ಯಾರಂಟಿ ಯೋಜನೆಗಳ ಮೂಲಕವೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ದೇಶಾದ್ಯಂತ ಭರ್ಜರಿ ಸಂಚಲನ ಸೃಷ್ಟಿಸಿತ್ತು. ಅದರಲ್ಲೂ ಶಕ್ತಿ ಯೋಜನೆ ಇಡೀ ದೇಶಕ್ಕೆ ಮಾದರಿ ಆಗಿದ್ದು, ಇದರಿಂದ ಕೋಟ್ಯಂತರ ಮಹಿಳೆಯರಿಗೆ ಉಪಯೋಗ ಕೂಡ ಆಗಿದೆ. ಪ್ರಮುಖವಾಗಿ ಸಾರಿಗೆ ಸಚಿವರಾಗಿರುವ ರಾಮಲಿಂಗಾರೆಡ್ಡಿ ಅವರು, ಶಕ್ತಿ ಯೋಜನೆಯನ್ನು ಅತ್ಯುತ್ತಮವಾಗಿ ನಿಭಾಯಿಸಿಕೊಂಡು ಬಂದು ಯಶಸ್ಸು ಸಾಧಿಸಿದ್ದಾರೆ ಎಂಬ ಹೆಮ್ಮೆಯ ಮಾತುಗಳು ಕೇಳಿ ಬಂದಿದ್ದವು.

ಮತ್ತೊಂದು ಕಡೆ ಸ್ವತಃ ಕೇಂದ್ರ ಸರ್ಕಾರವೇ ನೀಡುವ ಸಾರಿಗೆ ವಿಭಾಗದ ಹಲವು ಪ್ರಶಸ್ತಿಗಳಲ್ಲಿ ನಮ್ಮ ಕನ್ನಡಿಗರ ಹೆಮ್ಮೆ ಕೆಎಸ್ಆರ್ಟಿಸಿ & ಬಿಎಂಟಿಸಿ ಗೆದ್ದು ಬೀಗಿದೆ. ಇಂತಹ ಸಮಯದಲ್ಲೇ, ಸಾರಿಗೆ ನೌಕರರ ಉಗ್ರ ಹೋರಾಟ, ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ...
ದಿಢೀರ್ ಪ್ರಯಾಣಿಕರಿಗೆ ಬಂದ್ ಆಘಾತ ಸಾಧ್ಯತೆ...
ಕರ್ನಾಟಕದ ಸಾರಿಗೆ ನೌಕರರು ಸರ್ಕಾರದ ಎದುರು ಹಲವಾರು ಬೇಡಿಕೆಗಳನ್ನು ಮುಂದಿಟ್ಟು, ಈ ಡಿಮ್ಯಾಂಡ್ ಜಾರಿಗೆ ಬರಬೇಕು ಎಂದು ಪದೇ ಪದೇ ಹೋರಾಟ ಮಾಡುತ್ತಿದ್ದಾರೆ. ಹೀಗಿದ್ದರು ಕೂಡ ಪದೇ ಪದೇ ಸರ್ಕಾರ ತಮ್ಮ ಬೇಡಿಕೆ ಈಡೇರಿಸಿಲ್ಲ ಎಂಬ ಆರೋಪ ಮಾಡಿ, ಇದೀಗ ಮತ್ತೊಮ್ಮೆ ಬೃಹತ್ ಮಟ್ಟದಲ್ಲಿ ಹೋರಾಟ ಮಾಡಲು ಸಜ್ಜಾಗಿದ್ದಾರೆ. ಹಾಗಾದರೆ ಬಿಎಂಟಿಸಿ & ಕೆಎಸ್ಆರ್ಟಿಸಿ ಬಸ್ಗಳ ಓಡಾಟ ಬಂದ್ ಆಗುತ್ತಾ? ಪ್ರಯಾಣಿಕರಿಗೆ ದಿಢೀರ್ ಆಘಾತ ಗ್ಯಾರಂಟಿ?
ನೌಕರರ ಸಂಘದಿಂದ ಎಚ್ಚರಿಕೆ ಸಂದೇಶ
ಅಂದಹಾಗೆ ಸಾರಿಗೆ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ 2024 ಆರಂಭದಲ್ಲೇ ಭಾರಿ ದೊಡ್ಡ ಪ್ರತಿಭಟನೆ ನಡೆಸಲಾಗಿತ್ತು. ಆ ನಂತರ ಆಗಸ್ಟ್ನಲ್ಲಿ ಮುಷ್ಕರಕ್ಕೆ ಕರೆ ನೀಡಿ, ನ್ಯಾಯಾಲಯದಿಂದ ಸೂಚನೆ ಸಿಕ್ಕಿದ್ದ ಹಿನ್ನೆಲೆ ಮುಷ್ಕರ ಕೈಬಿಡಲಾಗಿತ್ತು. ಆದರೆ ಡಿಸೆಂಬರ್ 15 ಸೋಮವಾರದಿಂದ ವಿಶಿಷ್ಠವಾಗಿ ಮುಷ್ಕರಕ್ಕೆ ಸಾರಿಗೆ ನೌಕರರು ಸಿದ್ಧತೆ ನಡೆಸಿದ್ದಾರೆ. 39 ತಿಂಗಳ ಹಿಂಬಾಕಿ ಸೇರಿ ಶೇಕಡಾ 25ರಷ್ಟು ವೇತನ ಹೆಚ್ಚಳ ಮತ್ತಿತರ ಬೇಡಿಕೆ ಮುಂದಿಟ್ಟು ಈಗ ಹೋರಾಟ ಆರಂಭಿಸೋದಕ್ಕೆ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಅದರಲ್ಲೂ ಖುದ್ದಾಗಿ ಸಾರಿಗೆ ನೌಕರರ ಸಂಘದ ಮುಖಂಡರೇ ಸಿಬ್ಬಂದಿಯ ಮನವೊಲಿಸಿ ಮುಷ್ಕರ ಆರಂಭಿಸುವ ಸಾಧ್ಯತೆ ಇದ್ದು, ಶೀಘ್ರ ಬೇಡಿಕೆ ಈಡೇರಿಸದೇ ಇದ್ದರೆ ಮತ್ತೆ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಓಡಾಟವು ಬಂದ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಕೆಎಸ್ಆರ್ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಅವರು ಇದೀಗ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
-
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications