Get Updates
Get notified of breaking news, exclusive insights, and must-see stories!

ಅಂಬೇಡ್ಕರ್ ಅವರನ್ನು ಹೆಜ್ಜೆಹೆಜ್ಜೆಗೂ ಅವಮಾನಿಸಿದರು: ಕಾಂಗ್ರೆಸ್‌ ವಿರುದ್ಧ ಎನ್.ಮಹೇಶ್ ಟೀಕೆ

ಬೆಂಗಳೂರು, ಜನವರಿ 09: ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ 1920ರಿಂದ ಆರಂಭಿಸಿ ಅವರು ಪರಿನಿರ್ವಾಣ ಆಗುವವರೆಗೆ ಹೆಜ್ಜೆಹೆಜ್ಜೆಗೆ ಹಿಂದಕ್ಕೆ ತಳ್ಳಿದವರು, ಅವರನ್ನು ಅವಮಾನಿಸಿದವರು, ಅವರನ್ನು ಸೋಲಿಸಿದ ಕಾಂಗ್ರೆಸ್‌ನವರಿಗೆ ಇವತ್ತು ಡಾ. ಅಂಬೇಡ್ಕರ್ ಅವರ ಬಗ್ಗೆ ಮಾತನಾಡಲು ಏನು ಯೋಗ್ಯತೆ ಇದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಪ್ರಶ್ನಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಸಂವಿಧಾನ ಸನ್ಮಾನ ದಿನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ಮಹೇಶ್, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ 2015ರಿಂದ ಸಂವಿಧಾನ ದಿನ ಆಚರಣೆ ನಡೆದಿದೆ. ಸಂವಿಧಾನಕ್ಕೆ ಗೌರವ ತರುವ ಹಾಗೂ ಜಾಗೃತಿ ಮೂಡಿಸುವ ಕಾರ್ಯವನ್ನು ನರೇಂದ್ರ ಮೋದಿ ಅವರು ಮಾಡಿದ್ದಾರೆ ಎಂದು ವಿವರಿಸಿದರು.

BJP s N Mahesh Criticises Congress Over Ambedkar s Legacy

ಅಂಬೇಡ್ಕರ್ ಅವರಿಗೆ ಅವಮಾನ ಆದಲ್ಲೆಲ್ಲ ಅದನ್ನು ಅಳಿಸಿ ಅವರಿಗೆ ಗೌರವ ತರುವ ಕೆಲಸವನ್ನು ಬಿಜೆಪಿ- ಮೋದಿಜೀ ಅವರು ಮಾಡಿದ್ದಾರೆ. ಸಂವಿಧಾನ ಬದಲಿಸಿದ್ದು ಯಾರು? ಸಂವಿಧಾನಕ್ಕೆ ಶಕ್ತಿ ತುಂಬಿದ್ದು ಯಾರೆಂಬ ವಿಷಯವನ್ನು ನಾವು ನಮ್ಮ ಸಂವಿಧಾನ-ನಮ್ಮ ಹೆಮ್ಮೆ ಅಭಿಯಾನದಲ್ಲಿ ಹೇಳುತ್ತಿದ್ದೇವೆ ಎಂದು ತಿಳಿಸಿದರು.

ಸಂವಿಧಾನ ಮಂಡನೆಯಾದ ದಿನವಾದ ನವೆಂಬರ್ 26ರಿಂದ ಸಂವಿಧಾನ ಜಾರಿಯಾದ ಜನವರಿ 26ರ ವರೆಗೆ 2 ತಿಂಗಳ ಕಾಲ ಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲಾ ಮಟ್ಟದ ಬಳಿಕ ಇದೀಗ ಮಂಡಲ ಮಟ್ಟದಲ್ಲಿ ಮಾಹಿತಿ ಕೊಡಲಾಗುತ್ತಿದೆ ಎಂದರು.

ಸಂವಿಧಾನಕ್ಕೆ ಕಾಂಗ್ರೆಸ್‌ನಿಂದ ಗರಿಷ್ಠ ತಿದ್ದುಪಡಿ

ಸಂವಿಧಾನಕ್ಕೆ ಇದುವರೆಗೆ 106 ತಿದ್ದುಪಡಿಗಳನ್ನು ಮಾಡಲಾಗಿದೆ. ಬಿಜೆಪಿ 22 ತಿದ್ದುಪಡಿ ಮಾಡಿದ್ದರೆ, ಅಟಲ್ ಬಿಹಾರಿ ವಾಜಪೇಯಿಯವರ ಕಾಲದಲ್ಲಿ 14, ಮೋದಿಜೀ ಅವರ ಕಾಲದಲ್ಲಿ 8 ತಿದ್ದುಪಡಿ ಮಾಡಲಾಗಿದೆ. ಇವೆಲ್ಲವೂ ಸಂವಿಧಾನದ ಪರ, ಮೀಸಲಾತಿಯ ಪರ ಇದ್ದು, ಎಸ್‌ಸಿ, ಎಸ್‌ಟಿಗಳಿಗೆ, ಇತರೆ ಹಿಂದುಳಿದ ಜಾತಿಗಳಿಗೆ ಶಕ್ತಿ ತುಂಬುವ ತಿದ್ದುಪಡಿಗಳು. ಒಂದೇ ಒಂದು ತಿದ್ದುಪಡಿ ಸಂವಿಧಾನ ವಿರೋಧಿ, ಎಸ್‌ಸಿ, ಎಸ್‌ಟಿ ವಿರೋಧಿ ಇದ್ದಲ್ಲಿ ಕಾಂಗ್ರೆಸ್ಸಿನವರು ತೋರಿಸಲಿ ಎಂದು ಸವಾಲು ಹಾಕಿದರು.

BJP s N Mahesh Criticises Congress Over Ambedkar s Legacy

ಕಾಂಗ್ರೆಸ್ ಒಟ್ಟು 75 ತಿದ್ದುಪಡಿ ಮಾಡಿದೆ. 1951ರಲ್ಲಿ ಅಧಿಕೃತ ಸರಕಾರ ಇರಲಿಲ್ಲ, ಬ್ರಿಟಿಷರು ನೇಮಿಸಿದ ಸರಕಾರ ಅಧಿಕಾರದಲ್ಲಿತ್ತು. ಇಂಥ ಸಂದರ್ಭದಲ್ಲಿ ಸಂವಿಧಾನಕ್ಕೆ ಮೊದಲನೇ ತಿದ್ದುಪಡಿ ಮಾಡಿದವರು ಜವಾಹರಲಾಲ್ ನೆಹರೂ. ಮಾಧ್ಯಮಗಳನ್ನು ನಿಯಂತ್ರಣ ಮಾಡಲು ಅಭಿವ್ಯಕ್ತಿ ಸ್ವಾತಂತ್ರ್ಯ ನಿಯಂತ್ರಿಸುವ ತಿದ್ದುಪಡಿ ಇದಾಗಿತ್ತು ಎಂದರು.

ಸುಳ್ಳು ಊರೆಲ್ಲ ಸುತ್ತಿ ಬರುವ ಹೊತ್ತಿಗೆ ಸತ್ಯ ಹೊಸಲು ದಾಟಿರಲಿಲ್ಲ ಎಂಬ ಗಾದೆ ಮಾತನ್ನು ಉಲ್ಲೇಖಿಸಿದ ಅವರು, ಕಾಂಗ್ರೆಸ್ ಪಕ್ಷವು ನಮ್ಮ ವಿರುದ್ಧ ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸುತ್ತಾರೆ, ಬಿಜೆಪಿಯವರು ಅಂಬೇಡ್ಕರ್ ಅವರ ವಿರೋಧಿ, ಬಿಜೆಪಿ ದಲಿತ ವಿರೋಧಿ ಎಂಬ ಸುಳ್ಳು ನರೇಟಿವ್ ಸೃಷ್ಟಿಸುತ್ತಿದ್ದಾರೆ. ಅದರ ಬದಲು ಸತ್ಯವನ್ನು ತಿಳಿಸುವ ಅಭಿಯಾನ ಇದಾಗಿದೆ ಎಂದು ವಿವರಿಸಿದರು.

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಕರಾಳ ತಿದ್ದುಪಡಿಗಳು

ಕಾಂಗ್ರೆಸ್ ಪಕ್ಷವು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 38, 39, 40, 41, 42 ತಿದ್ದುಪಡಿ ಮಾಡಿದ್ದು, ಅವೆಲ್ಲವೂ ಕರಾಳ ತಿದ್ದುಪಡಿಗಳು. ವ್ಯಕ್ತಿ ಸ್ವಾತಂತ್ರ್ಯ ಹರಣ, ಜೀವಿಸುವ ಸ್ವಾತಂತ್ರ್ಯ ಹರಣ, ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ, ನ್ಯಾಯಾಲಯ ನಿಯಂತ್ರಣ ಮಾಡುವ ತಿದ್ದುಪಡಿ ಮಾಡಿದ್ದರು ಎಂದು ಮಹೇಶ್ ಆಕ್ಷೇಪಿಸಿದರು.

ಪ್ರಧಾನ ಮಂತ್ರಿಗಳನ್ನು ನ್ಯಾಯಾಲಯ ಪ್ರಶ್ನಿಸುವಂತಿಲ್ಲ ಎಂಬ ತಿದ್ದುಪಡಿ ಮಾಡಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ್ದಾರೆ. 21 ತಿಂಗಳ ಕಾಲ ಸಂವಿಧಾನವನ್ನು ಅಮಾನತಿನಲ್ಲಿಟ್ಟು ಅವಮಾನಿಸಿದ್ದಾರೆ. ಇವತ್ತು ಕಾಂಗ್ರೆಸ್ಸಿಗರು ಸಂವಿಧಾನದ ಕುರಿತು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+