ಹೆತ್ತ ತಾಯಿ ಕಣ್ಣೀರಿನ ಶಾಪ ನಿಮ್ಮನ್ನು ತಟ್ಟದೆ ಬಿಡದು: ಯಡಿಯೂರಪ್ಪ
Recommended Video

ಬುಧವಾರ (ಜ 31) ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ಸಾವಿನ ಸುತ್ತ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನಿರೀಕ್ಷೆಯಂತೆ ಮೇಲಾಟ ನಡೆಯುತ್ತಿದೆ, ಸಾವಿನಲ್ಲೂ ರಾಜಕೀಯ ಮುಂದುವರಿಯುತ್ತಿದೆ.
ಅತ್ತ, ಮೃತ ಕುಟುಂಬ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ದು:ಖದಲ್ಲಿದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಒಬ್ಬರೊನ್ನಬ್ಬರು ದೂರುತ್ತಿರುವುದನ್ನು ನೋಡಿದರೆ, ರಾಜಕೀಯದ ಸಹವಾಸವೇ ಬೇಡ ಎಂದು ಕಾರ್ಯಕರ್ತರಿಗೆ ಅನಿಸುವ ದಿನ ದೂರವಿಲ್ಲವೇನೋ?
ಪಕ್ಷದ ಕಾರ್ಯಕರ್ತ ಸಂತೋಷ್ ಹತ್ಯೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ತಂದೆ ತಾಯಿಯ ಕಣ್ಣೀರಿನ ಶಾಪ ಕಾಂಗ್ರೆಸ್ಸಿಗೆ ತಟ್ಟದೇ ಬಿಡದು ಎಂದು ವಾಗ್ದಾಳಿ ನಡಿಸಿದ್ದಾರೆ.
ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಾ ರಾಜ್ಯ ಗೃಹಸಚಿವ ರಾಮಲಿಂಗ ರೆಡ್ಡಿ, ಸತ್ತಮೇಲೆ ಎಲ್ಲರನ್ನೂ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆಂದು ವ್ಯಂಗ್ಯವಾಡಿದ್ದಾರೆ.
ಮೃತಪಟ್ಟ ಯುವಕ ಮತ್ತು ಆರೋಪಿಗಳು ಬಹುಕಾಲದ ಸ್ನೇಹಿತರು, ವ್ಯವಹಾರಕ್ಕೆ ಸಂಬಂಧಪಟ್ಟಂತೆ ಕೊಲೆ ನಡೆದಿದೆಯೇ ಹೊರತು, ಬೇರಾವ ಕಾರಣಕ್ಕೂ ಅಲ್ಲ. ಬಿಜೆಪಿಯವರು ಸಾವಿನಲ್ಲೂ ರಾಜಕೀಯ ಲಾಭದ ಲೆಕ್ಕಾಚಾರ ಹಾಕುವವರು ಎಂದು ಗೃಹಸಚಿವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಜೊತೆಗೆ, ಆರ್ ಅಶೋಕ್ ಡಿಎನ್ಎ ಟೆಸ್ಟ್ ಬಗ್ಗೆ ಕೂಡಾ, ರಾಮಲಿಂಗ ರೆಡ್ಡಿ ಮಾತನಾಡಿದ್ದಾರೆ. ಮುಂದೆ ಓದಿ..

ನಾನು ಆರ್ ಅಶೋಕ್ ಅವರ ಡಿಎನ್‍ಎ ಟೆಸ್ಟ್ ಮಾಡಿಸಿದ್ದೀನಿ
ಓವೈಸಿಯವರನ್ನು ನಾವು ಭೇಟಿ ಮಾಡಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ, ಅವರೇನು ಸತ್ಯ ಹರಿಶ್ಚಂದ್ರನ ವಂಶಸ್ಥರಾ? ನಾನು ಆರ್ ಅಶೋಕ್ ಅವರ ಡಿಎನ್‍ಎ ಟೆಸ್ಟ್ ಮಾಡಿಸಿದ್ದೀನಿ. ಡಿಎನ್‍ಎ ಟೆಸ್ಟ್ ವರದಿ ಬಂದ ನಂತರ ಅಶೋಕ್ ಸತ್ಯಹರಿಶ್ಚಂದ್ರನ ಕುಟುಂಬಸ್ಥರು ಎನ್ನುವುದು ಗೊತ್ತಾಗಿದೆ - ಗೃಹಸಚಿವ ರಾಮಲಿಂಗ ರೆಡ್ಡಿ.

ಇಲೆಕ್ಷನ್ ಹತ್ತಿರ ಬರುತ್ತಿರುವುದರಿಂದ ಬಿಜೆಪಿಯವರು ಆರೋಪ ಮಾಡುತ್ತಾರೆ
ಇಲೆಕ್ಷನ್ ಹತ್ತಿರ ಬರುತ್ತಿರುವುದರಿಂದ ಬಿಜೆಪಿಯವರು ಏನು ಬೇಕಾದರೂ ಆರೋಪ ಮಾಡುತ್ತಾರೆ, ಅದೇನು ಹೊಸದಲ್ಲ. ಸತ್ತ 28ವರ್ಷದ ಯುವಕ, ನನಗೆ ಮಗ ಅಥವಾ ತಮ್ಮನಾಗಬಹುದು. ಅಮಾಯಕರು ಸತ್ತುಹೋದರೆ ಯಾವ ಜಾತಿ, ಆ ಹುಡುಗನ ತಂದೆತಾಯಿಗೆ ಮಗನನ್ನು ಕಳೆದುಕೊಂಡ ನೋವು ಏನಿದೆಯೋ, ಅಷ್ಟೇ ನೋವು ನನಗೂ ಆಗಿದೆ - ಸಚಿವ ರೋಷನ್ ಬೇಗ್.

ಎಷ್ಟು ಹಗುರವಾಗಿ ಹೇಳಿಬಿಟ್ಟಿರಿ ರಾಮಲಿಂಗಾರೆಡ್ಡಿಯವರೇ?
"ಸಾಯಿಸಬೇಕು ಅಂತ ಇರ್ಲಿಲ್ಲ, ಸುಮ್ನೆ ಚುಚ್ಚಿದ ಅಷ್ಟೇ" ಎಷ್ಟು ಹಗುರವಾಗಿ ಹೇಳಿಬಿಟ್ಟಿರಿ ರಾಮಲಿಂಗಾರೆಡ್ಡಿಯವರೇ? ಸುಮ್ನೆ ಚುಚ್ಚಿದರೂ ಹೋದದ್ದು ಪ್ರಾಣವೇ ಅಲ್ಲವೇ?ಅಷ್ಟು ಕಡೆಯಾಯಿತೇ ಹಿಂದೂಗಳ ಪ್ರಾಣ?
'ಮುಗ್ಧ ಅಲ್ಪಸಂಖ್ಯಾತರ ಮೇಲಿನ ಪ್ರಕರಣವನ್ನು ಕೈಬಿಡಲು ನಿರ್ಧರಿಸಿದ್ದು ಇಂಥವರನ್ನು ಬೆಂಬಲಿಸುವುದಕ್ಕಾಗಿಯೇ? ಯಡಿಯೂರಪ್ಪ ಪ್ರಶ್ನೆ.
|
ಮಕ್ಕಳನ್ನು ಕಳೆದುಕೊಂಡ ತಂದೆ ತಾಯಂದಿರ ಕಣ್ಣೀರಿನ ಶಾಪ ತಟ್ಟದೇ ಇರದು
ಬಿಜೆಪಿ ಕಾರ್ಯಕರ್ತ ಸಂತೋಷ್ ಹತ್ಯೆಗೈದ ವಸೀಮ್‌ನ ತಂದೆ ಖಾದರ್ ಷರೀಫ್, ಕಾಂಗ್ರೆಸ್ ಮುಖಂಡರೆಂದು ತಿಳಿದು ಬಂದಿದೆ. ಈ ಮೂಲಕ ಕಾಂಗ್ರೆಸ್‌ನ ಕ್ರೂರ ಮನಸ್ಥಿತಿ ಮತ್ತೊಮ್ಮೆ ಅನಾವರಣಗೊಂಡಿದೆ. ಇಂಥ ಗೂಂಡಾ ಸರ್ಕಾರದ ಕ್ರೌರ್ಯಕ್ಕೆ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಂದಿರ ಕಣ್ಣೀರಿನ ಶಾಪ ತಟ್ಟದೇ ಇರದು.

ಕೋಮುವಾದಿ ಕಾಂಗ್ರೆಸ್ ಪಕ್ಷಕ್ಕೆ ಇಂತಹ ವಿದ್ಯೆಗಳೆಲ್ಲಾ ಕರಗತ
ರಾಜಕೀಯ ಲಾಭಕ್ಕಾಗಿ ಹೆಣ ಉರುಳಿಸುವುದು ಮತ್ತು ಹೆಣವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುವ ವಿದ್ಯೆ ಕೋಮುವಾದಿ ಕಾಂಗ್ರೆಸ್ ಪಕ್ಷಕ್ಕೆ ಕರಗತವಾಗಿದೆ. @BJP4Karnataka ಕಾರ್ಯಕರ್ತ ಸಂತೋಷ್ ಕೊಲೆಯ ವಿಚಾರದಲ್ಲಿ ಗೃಹ ಮಂತ್ರಿ @RLR_BTM ನಾಲಿಗೆಯ ಹಿಡಿತವಿಲ್ಲದೆ ಮಾತನಾಡುತ್ತಿರುವುದು ಅವರ ತಾಲಿಬಾನ್ ಮನಸ್ತಿತಿಯನ್ನು ತೋರಿಸುತ್ತದೆ.












Click it and Unblock the Notifications