ಕುಮಾರಸ್ವಾಮಿ ಬಹುಮತ ಸಾಬೀತು ಮಾಡಲ್ಲ : ಯಡಿಯೂರಪ್ಪ

Recommended Video

      ಎಚ್ ಡಿ ಕುಮಾರಸ್ವಾಮಿ ಬಗ್ಗೆ ಬಿ ಎಸ್ ಯಡಿಯೂರಪ್ಪ ಹೇಳಿದ್ದು ಹೀಗೆ

      ಬೆಂಗಳೂರು, ಜುಲೈ 15 : "ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತಯಾಚನೆಯಲ್ಲಿ ಗೆಲ್ಲುವುದಿಲ್ಲ, " ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

      ಬೆಂಗಳೂರಿನಲ್ಲಿ ಸೋಮವಾರ ಸಂಜೆ ಮಾತನಾಡಿದ ಅವರು, "ಶಾಸಕರು ರೆಸಾರ್ಟ್‌ಗೆ ಬರಬೇಕು ಎನ್ನುತ್ತಿದ್ದಾರೆ. ಇಂದು ರೆಸಾರ್ಟ್‌ನಲ್ಲಿಯೇ ವಾಸ್ತವ್ಯ ಹೂಡುತ್ತೇನೆ" ಎಂದು ಹೇಳಿದರು.

      'ನಮಗೆ ರಿವರ್ಸ್ ಆಪರೇಷನ್ ಭೀತಿಯೇ ಇಲ್ಲ. ಗುರುವಾರದ ತನಕ ನಮ್ಮ ಶಾಸಕರು ರೆಸಾರ್ಟ್‌ನಲ್ಲಿಯೇ ಇರುತ್ತಾರೆ. ಸುಪ್ರೀಂಕೋರ್ಟ್‌ ಆದೇಶವನ್ನು ನಾವು ಕಾದು ನೋಡುತ್ತೇವೆ" ಎಂದು ಯಡಿಯೂರಪ್ಪ ತಿಳಿಸಿದರು.

      BJP will welcome speaker decision says Yeddyurappa

      "ನಾವು ಅವಿಶ್ವಾಸ ನಿರ್ಣಯ ಮಂಡಿಸುವ ಮೊದಲು ಅವರೇ ವಿಶ್ವಾಸಮತಯಾಚನೆ ಮಾಡುತ್ತೇವೆ ಎಂದು ಹೇಳಿದರು. ಆದ್ದರಿಂದ, ಅವಕಾಶ ನಿಡೋಣ. ಅದರಲ್ಲಿ ಏನೂ ವ್ಯತ್ಯಾಸ ಆಗಲ್ಲ" ಎಂದು ಹೇಳಿದರು.

      "ಗುರುವಾರದ ತನಕ ವಿಧಾನಸಭೆಯ ಯಾವುದೇ ಕಾರ್ಯ ಕಲಾಪ ಮಾಡಬಾರದು ಎಂದು ಸ್ಪೀಕರ್‌ಗೆ ಮನವಿ ಸಲ್ಲಿಸಿದ್ದೆವು. ಅದರಂತೆ ಸ್ಪೀಕರ್ ವಿಧಾನಸಭೆ ಕಲಾಪವನ್ನು ಗುರುವಾರಕ್ಕೆ ಮುಂದೂಡಿದ್ದಾರೆ. ಅದನ್ನು ನಾವು ಗೌರವಿಸುತ್ತೇವೆ" ಎಂದರು.

      ಸೋಮವಾರದ ಅಧಿವೇಶನ ಮುಗಿಸಿ ಬಿಜೆಪಿ ಶಾಸಕರು ರಾಜನಕುಂಟೆ ಬಳಿಯ ರಮಾಡ ಹೋಟೆಲ್‌ಗೆ ತೆರಳಿದ್ದಾರೆ. ಗುರುವಾರದ ತನಕ ಶಾಸಕರು ಅಲ್ಲಿಯೇ ವಾಸ್ತವ್ಯ ಹೂಡಲಿದ್ದು, ಯಡಿಯೂರಪ್ಪ ಸಹ ಶಾಸಕರ ಜೊತೆ ಇಂದು ವಾಸ್ತವ್ಯ ಹೂಡಲಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+