ಕಾಂಗ್ರೆಸ್‌ ಸೇರಲು ಉತ್ಸುಕರಾಗಿದ್ದಾರೆ: ಬಿಜೆಪಿ ಹೀನಾಯ ಸ್ಥಿತಿ ತಲುಪಲಿದೆ: ಶೆಟ್ಟರ್

ಉಡುಪಿ, 27: ಕರ್ನಾಟಕ ವಿಧಾನಸಭೆ ಕಳೆದು ಕಾಂಗ್ರೆಸ್ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿವೆ. ಇತ್ತ ಬಿಜೆಪಿಯಲ್ಲಿ ನಾಯಕರೇ ಇಲ್ಲದಂತಾಗಿದೆ. ವಿಪಕ್ಷದ ಈಗಿನ ಸ್ಥಿತಿಗತಿ ನೋಡಿದರೆ ಮುಂದೆ ಬಿಜೆಪಿ ಮತ್ತಷ್ಟು ಹೀನಾಯ ಸ್ಥಿತಿ ತಲುಪಲಿದೆ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.

ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆಗೆ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ನೂರು ದಿನ ಪೂರೈಕೆ ಆಗಿದೆ. ಆದರೆ ಕರ್ನಾಟಕ ಬಿಜೆಪಿ ಮಾತ್ರ ಇಂದಿಗೂ ತನ್ನ ವಿರೋಧ ಪಕ್ಷದ ನಾಯಕ ಯಾರೆಂದು ಅಂತಿಮ ಮಾಡಿಲ್ಲ. ವಿಪಕ್ಷ ಸ್ಥಾನಕ್ಕೆ ಯಾರೊಬ್ಬರು ಆಯ್ಕೆ ಕಗ್ಗಂಟಾಗಿದೆ. ಬಿಜೆಪಿ ವಿರೋಧ ಪಕ್ಷ ನಾಯಕರಿಲ್ಲದೇ ಅಧಿವೇಶನ ಮುಗಿಯಿತು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ನಾಯಕರೇ ಇಲ್ಲದಾಗಿದೆ ಎಂದು ಕಿಡಿ ಕಾರಿದರು.

BJP Will Gone Reach Further Abysmal Stage, Jagadish Shettar reaction

ಇದುವರೆಗೂ ರಾಜ್ಯ ಬಿಜೆಪಿಯಲ್ಲಿ ನಾಯಕರೇ ಇಲ್ಲದಾಗಿದೆ. ಹೀಗಾಗಿಯೇ ನೂತನ ರಾಜ್ಯಾಧ್ಯಕ್ಷರನ್ನು ಆಯ್ಕೆ ಮತ್ತು ವಿರೋಧ ಪಕ್ಷ ನಾಯಕರ ಆಯ್ಕೆ ಸಹ ಆಗಿಲ್ಲ. ಬಿಜೆಪಿಯ ನಾಯಕರು ಅಪಾರ ನೋವುಂಡಿದ್ದಾರೆ. ಹೀಗಾಗಿ ಅದರಲ್ಲಿ ಕೆಲವು ಬಿಜೆಪಿ ಬಿಟ್ಟು ಬರಲು ಆಸೆಪಟ್ಟಿದ್ದಾರೆ. ಅಲ್ಲದೇ ಕೆಲವು ಶಾಸಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದರು.

ಅಮಿತ್ ಶಾ ನನಗೆ ಕರೆ ಮಾಡಿಲ್ಲ: ಶೆಟ್ಟರ್ ಸ್ಪಷ್ಟನೆ

ನಿಮ್ಮೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರೆ ಮಾಡಿ ಮಾತನಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲ ಊಹಾಪೋಹ ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಕೇಂದ್ರ ನಾಯಕರಿಂದ ನನಗೆ ಯಾವ ದೂರವಾಣಿ ಕರೆಯು ಬಂದಿಲ್ಲ. ಹಾಗಿದ್ದಲ್ಲಿ ನಾನು ಏಕೆ ಆ ಬಗ್ಗೆ ಚರ್ಚಿಸಬೇಕು. ಒಂದು ವೇಳೆ ಬಿಜೆಪಿಯಿಂದ ನನಗೆ ಕರೆ ಬಂದಿದ್ದೇ ಆದಲ್ಲಿ ನಾನು ಮಾಹಿತಿಯನ್ನು ಮಾಧ್ಯಮಗಳ ಎದುರು ತಿಳಿಸುತ್ತೇನೆ. ಅಮಿತ್ ಶಾ ಕರೆ ಮಾಡಿಲ್ಲ ಎಂದು ಅವರು ಪುನರುಚ್ಚರಿಸಿದರು.

BJP Will Gone Reach Further Abysmal Stage, Jagadish Shettar reaction

ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಗೆಲುವು

ಇನ್ನೇನು 2024ರಲ್ಲಿ ಲೋಕಸಭೆ ಚುನಾವಣೆ ಎದುರಿಸಲಿದ್ದೇವೆ. ಈ ಚುನಾವಣೆಯಲ್ಲಿ ರಾಜ್ಯ ಆಡಳಿತ ಪಕ್ಷ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಲಿವೆ. 'ಕರ್ನಾಟಕ ಒಟ್ಟು ಸ್ಥಾನಗಳ ಪೈಕಿ ಕಾಂಗ್ರೆಸ್ ಸುಮಾರು 12 ರಿಂದ 15 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸದ್ಯದ ಬೆಳವಣಿಗೆ ನೋಡಿದರೆ ಕಾಂಗ್ರೆಸ್ ಅತ್ಯಧಿಕ ಸೀಟು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿನ ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಸೇರಲು ಜನ ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ನಾಯಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬುದಕ್ಕೆ ಶೆಟ್ಟರ್ ಪುಷ್ಠಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+