ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಜನವರಿ 2: ನಮ್ಮ ಕೆಲಸ, ಆಡಳಿತದ ಆಧಾರದ ಮೇಲೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ವೈಕುಂಠ ಏಕಾದಶಿ ಹಿನ್ನೆಲೆ ವೈಯ್ಯಾಲಿಕಾವಲ್ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಪವಿತ್ರವಾದ ದಿನ. ಇಂದು ವೆಂಕಟೇಶ್ವರನ ದರ್ಶನ ಮಾಡಬೇಕೆಂದು ಪ್ರತೀತಿ. ತಿರುಪತಿಗೆ ಹೋಗಲು ಸಾಧ್ಯವಿಲ್ಲ ದಿರುವರರಿಂದ ಟಿ ಟಿ ಡಿ ಯವರ ದೇವಸ್ಥಾನಕ್ಕೆ ಬಂದು ಪುನೀತ ಭಾವನೆ ಮೂಡಿದೆ. ಕರ್ನಾಟಕದ ಜನತೆ ಅಭಿವೃದ್ಧಿ, ಸಮೃದ್ಧಿಯಾಗುವಂತೆ ದೇವರಲ್ಲಿ ಬೇಡಿಕೊಂಡಿದ್ದು, ಖಂಡಿತವಾಗಿ 2023 ರಲ್ಲಿ ವೆಂಕ್ತೇಶ್ವನ ಆಶೀರ್ವಾದ ಇರುತ್ತದೆ. ವೆಂಕಟೇಶ್ವರ ಎಂದರೆ ಅಭಿವೃದ್ಧಿ, ಸಮೃದ್ಧಿಯ ಸಂಕೇತ. ಕರ್ನಾಟಕ ಹಿಂದೆಂದೂ ಕಾಣದ ಅಭಿವೃದ್ಧಿ ಕಾಣಲಿ ಎಂದು ಪ್ರಾರ್ಥಿಸಿದ್ದೇನೆ ಎಂದರು.

ಉದ್ಯಮಿ ಪ್ರದೀಪ್ ಅವರು ಶಾಸಕ ಅರವಿಂದ ಲಿಂಬಾವಳಿ ಯವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದುಎಫ್.ಐ.ಆರ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪ್ರಕ್ರಿಯೆ ಏನಾಗಬೇಕೋ ಆಗಿದೆ. ಮುಂದೂ ಕೂಡ ಕಾನೂನು ಪ್ರಕಾರವಾಗಿ ಆಗಲಿದೆ ಎಂದರು.

BJP will come to power in the next election Says Basavaraj Bommai

ಸಿದ್ದೇಶ್ವರ ಶ್ರೀಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ನಿರಂತರ ಮಾಹಿತಿ

ಸಿದ್ದೇಶ್ವರ ಶ್ರೀಗಳ ಆರೋಗ್ಯದ ಬಗ್ಗೆ ಮಾತನಾಡಿ ಅವರನ್ನು ಭೇಟಿ ಯಾದಾಗ ಗುರುತು ಹಿಡಿದರು. ಮಾತನಾಡಲು ಆಗುತ್ತಿರಲಿಲ್ಲ ಎನ್ನುವುದನ್ನು ಬಿಟ್ಟರೇ ಅವರ ಎಲ್ಲಾ ಅಂಗಾಂಗಗಳ ಮಾನದಂಡಗಳು ಸಾಮಾನ್ಯವಾಗಿಯೇ ಇತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೂರವಾಣಿ ಕರೆ ಮೂಲಕ ಮಾತನಾಡಿದಾಗ ಧ್ವನಿ ಗುರುತು ಹಿಡಿದು ಶುಭ ಕೋರಿದರು. ಇಂದೂ ಕೂಡ ಅವರ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಸಂಬಂಧ ಪಟ್ಟವರ ಸಂಪರ್ಕದಲ್ಲಿದ್ದೇನೆ. ಯಾವುದೇ ಆತಂಕಕ್ಕೆ ಅವಕಾಶವಿಲ್ಲ. ಸಿದ್ಧೇಶ್ವರ ಸ್ವಾಮಿಗಳಿಗೆ ಅವರದ್ದೇ ಆದ ಅಂತರ್ಗತ ಶಕ್ತಿ ಇದೆ. ಅದರ ಮೂಲಕ ಅನಾರೋಗ್ಯವನ್ನು ಗೆದ್ದು ಜಯಶಾಲಿಯಾಗಿ ಬರುತ್ತಾರೆ. ದೀರ್ಘಕಾಲ ನಮ್ಮ ಜೊತೆಗಿದ್ದು, ಆಶೀರ್ವಾದ ಮಾರ್ಗದರ್ಶನ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+