ಬ್ರಿಟಿಷರ ಸಂಜಾತ ಕಾಂಗ್ರೆಸ್ ಪಕ್ಷಕ್ಕೆ ಸಮಾಜವನ್ನು ಒಡೆದಾಳುವುದು...
ಬೆಂಗಳೂರು: ರಾಜ್ಯದಲ್ಲಿ ಬರದ ಮಧ್ಯೆ ಬೆಲೆ ಏರಿಕೆಯೂ ದೊಡ್ಡ ಸಮಸ್ಯೆ ತಂದೊಡ್ಡಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕರು ಈ ವಿಚಾರ ಹಿಡಿದು ಮುಗಿಬೀಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬಾಂಬ್ ಸಿಡಿಸಿದೆ. ಹಾಗಾದರೆ ಏನದು ಬಿಜೆಪಿಯ ಹೊಸ ಬಾಂಬ್? ಮುಂದೆ ಓದಿ.
ರಾಜ್ಯದಲ್ಲಿ ಕಾಂಗ್ರೆಸ್ & ಬಿಜೆಪಿ ಮಧ್ಯೆ ನಡೆಯುತ್ತಿದ್ದ ವಾರ್‌ಗೆ ಜೆಡಿಎಸ್ ರಾಕಿಂಗ್ ಎಂಟ್ರಿ ಕೊಟ್ಟಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಗಂಭೀರ ಆರೋಪ ಮಾಡುತ್ತಿದೆ. ಈಗ ತನ್ನ ವಾಗ್ದಾಳಿಯನ್ನ ಮುಂದಿನ ಹಂತಕ್ಕೆ ಕೊಂಡೊಯ್ದಿರುವ ಬಿಜೆಪಿ, 'ಬ್ರಿಟಿಷರ ಸಂಜಾತರಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಸಮಾಜ ಒಡೆದಾಳುವುದು, ಚುನಾವಣೆಗೂ ಮುನ್ನ ಆಸೆ-ಆಮೀಷಗಳನ್ನು ಒಡ್ಡಿ ಮತ ಹಾಕಿಸಿಕೊಳ್ಳುವುದು ಅಭ್ಯಾಸವಾಗಿದೆ. ಗೆದ್ದ ಬಳಿಕ ಉಲ್ಟಾ ಹೊಡೆದು ನಂತರ ಒಂದು ವರ್ಗವನ್ನು ಮಾತ್ರ ಓಲೈಸುವುದು ಸೇರಿದಂತೆ ಇತರ ಕುತಂತ್ರ ವಿದ್ಯೆಗಳು "ಕೈ" ಪಕ್ಷಕ್ಕೆ ಕರತಲಾಮಲಕವಾಗಿವೆ.' ಎಂದು ವ್ಯಂಗ್ಯವಾಡಿದೆ.

ತುಘಲಕ್ ನೀತಿಗೆ ನಮ್ಮ ಧಿಕ್ಕಾರ!
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 'ದೇಶದೆಲ್ಲೆಡೆ ಸೋತು-ಸುಣ್ಣವಾಗಿದ್ದ ಕೈ ಪಕ್ಷ, ಕರ್ನಾಟಕದಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಹೆಸರಿನಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಅಧಿಕಾರಕ್ಕೆ ಬಂದ ಬಳಿಕ, ಗ್ಯಾರಂಟಿ ಗಳ ಅನುಷ್ಠಾನದಲ್ಲಿ ನಾಡ ಜನತೆಗೆ ದ್ರೋಹ ಬಗೆದಿದೆ. ಇದನ್ನು ಸಹಿಸುವುದಾದರು ಹೇಗೆ? ಅಧಿಕಾರಕ್ಕೆ ಬಂದ ತಕ್ಷಣ ತನ್ನ ನೆರಳಿನಂತೆ ಕಾರ್ಯ ನಿರ್ವಹಿಸಿದ್ದ ಮಿಷನರಿಗಳ, ಪಿ.ಎಫ್.ಐ ಗಳ ಋಣ ತೀರಿಸಲು ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಮುಂದಾಗಿರುವ ಸರ್ಕಾರದ ಈ ತುಘಲಕ್ ನೀತಿಗೆ ನಮ್ಮ ಧಿಕ್ಕಾರವಿದೆ.' ಎಂದಿದೆ.
ಬ್ರಿಟಿಷರ ಸಂಜಾತರಾಗಿರುವ @INCIndia ಪಕ್ಷಕ್ಕೆ ಸಮಾಜವನ್ನು ಒಡೆದಾಳುವುದು, ಚುನಾವಣೆಗೂ ಮುನ್ನ ಆಸೆ-ಆಮೀಷಗಳನ್ನು ಒಡ್ಡಿ ಮತ ಹಾಕಿಸಿಕೊಳ್ಳುವುದು ಅಭ್ಯಾಸವಾಗಿದೆ.
— BJP Karnataka (@BJP4Karnataka) July 5, 2023
ಗೆದ್ದ ಬಳಿಕ ಉಲ್ಟಾ ಹೊಡೆದು ನಂತರ ಒಂದು ವರ್ಗವನ್ನು ಮಾತ್ರ ಓಲೈಸುವುದು ಸೇರಿದಂತೆ ಇತರ ಕುತಂತ್ರ ವಿದ್ಯೆಗಳು "ಕೈ" ಪಕ್ಷಕ್ಕೆ ಕರತಲಾಮಲಕವಾಗಿವೆ.
1/6
ಸರ್ಕಾರಕ್ಕೆ ಜನತೆ ಕಪಾಳಮೋಕ್ಷ...
ಇನ್ನೊಂದ್ಕಡೆ ಕಾಂಗ್ರೆಸ್ ನಾಯಕರ ಹೇಳಿಕೆ ಉಲ್ಲೇಖಿಸಿ 'ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಕುಮಾರ್ ಅವರೇ ಹೇಳಿರುವಂತೆ ನಾಲ್ಕೈದು ತಲೆಮಾರುಗಳಿಗಾಗುವಷ್ಟು ಅಕ್ರಮ ಸಂಪತ್ತನ್ನು ಆ ಪಕ್ಷದ ನಾಯಕರು ಅಕ್ರಮವಾಗಿ ಗಳಿಸಿಕೊಂಡಿದ್ದರು ಅವರ್ಯಾರಿಗೂ ಹಣದ ದಾಹ ಇನ್ನು ನೀಗಿಲ್ಲ. ರಾಜ್ಯದ ಜನರ ತೆರಿಗೆ ಹಣವನ್ನು ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಸಂಪಾದಿಸಿ ದೆಹಲಿ ಏಜೆಂಟರ ಮೂಲಕ ಕಳುಹಿಸುತ್ತಿರುವ ಈ ಸರ್ಕಾರಕ್ಕೆ ಜನತೆ ಕಪಾಳಮೋಕ್ಷ ಮಾಡಲಿದೆ.' ಎಂದು ಎಚ್ಚರಿಸಿದೆ ಕಮಲ ಪಾಳಯ.
ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಕುಮಾರ್ ಅವರೇ ಹೇಳಿರುವಂತೆ ನಾಲ್ಕೈದು ತಲೆಮಾರುಗಳಿಗಾಗುವಷ್ಟು ಅಕ್ರಮ ಸಂಪತ್ತನ್ನು ಆ ಪಕ್ಷದ ನಾಯಕರು ಅಕ್ರಮವಾಗಿ ಗಳಿಸಿಕೊಂಡಿದ್ದರು ಅವರ್ಯಾರಿಗೂ ಹಣದ ದಾಹ ಇನ್ನು ನೀಗಿಲ್ಲ.
— BJP Karnataka (@BJP4Karnataka) July 5, 2023
ರಾಜ್ಯದ ಜನರ ತೆರಿಗೆ ಹಣವನ್ನು ಭ್ರಷ್ಟಾಚಾರದ ಮೂಲಕ ಅಕ್ರಮವಾಗಿ ಸಂಪಾದಿಸಿ ದೆಹಲಿ ಏಜೆಂಟರ ಮೂಲಕ ಕಳುಹಿಸುತ್ತಿರುವ ಈ…
ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದೇವೆ!
ಸರಣಿ ಟ್ವೀಟ್‌ನಲ್ಲಿ ಅಂತಿಮವಾಗಿ, 'ವರ್ಗಾವಣೆ ಅವಧಿಯನ್ನ ನಿರಂತರವಾಗಿ ವಿಸ್ತರಿಸುತ್ತಾ, ಆ ದಂಧೆಯಲ್ಲಿ ಮುಳುಗಿರುವ ಹಾಗೂ ನಾಡಿನಲ್ಲಿ ಉಂಟಾಗಿರುವ ಬರ ಮತ್ತು ಬೆಲೆಯೇರಿಕೆ ಸಂಪೂರ್ಣವಾಗಿ ಮರೆತು ವಿಲಾಸಿ ಜೀವನ ನಡೆಸುತ್ತಿರುವ ಈ ಆಲಸಿ #ATMSarkara ವನ್ನು ನಿದ್ದೆಯಿಂದ ಎಬ್ಬಿಸುತ್ತೇವೆ. "ನುಡಿದಂತೆ ಗ್ಯಾರಂಟಿ ಕೊಡಿ - ಇಲ್ಲವೇ ಕುರ್ಚಿ ಬಿಡಿ" ಎಂಬ ನಿಟ್ಟಿನಲ್ಲಿ @BJP4Karnataka ರಾಜ್ಯಾದ್ಯಂತ ಹೋರಾಟ ಆರಂಭಿಸಿದ್ದು, ನಾಡಿನ ಜನತೆಗೆ ದ್ರೋಹ ಬಗೆಯಲು ಯತ್ನಿಸುತ್ತಿರುವ ನಾಡದ್ರೋಹಿ @INCKarnataka ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದೇವೆ.' ಎಂದು ಬಿಜೆಪಿ ವಾರ್ನಿಂಗ್ ಕೊಟ್ಟಿದೆ.
ಒಟ್ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಸ ಕಿಚ್ಚು ಹೊತ್ತಿಕೊಂಡಿದೆ. ಈ ಮೂಲಕ ಎರಡೂ ಪಕ್ಷಗಳ ತಿಕ್ಕಾಟ ಜೋರಾಗಿರುವ ಸಂದರ್ಭದಲ್ಲೇ ಜೆಡಿಎಸ್ ಕೂಡ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದು, ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಗುಡುಗಿದೆ. ಹೀಗೆ ವಿರೋಧ ಪಕ್ಷ ಬಿಜೆಪಿಗೆ ಸಾಥ್ ನೀಡಲು ಜೆಡಿಎಸ್ ಕೂಡ ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಇದೇ ವಿಚಾರ ಹಿಡಿದು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸಲು ಸಜ್ಜಾಗಿವೆ. ಆದರೆ ಇದಕ್ಕೆ ತಿರುಗೇಟು ಕೊಡಲು ಕಾಂಗ್ರೆಸ್ ನಾಯಕರು ಕೂಡ ಪ್ರತಿತಂತ್ರ ರೂಪಿಸಿದ್ದು, ಮುಂದಿನ ದಿನಗಳಲ್ಲಿ ಬಜೆಟ್ ಅಧಿವೇಶನ ರಣಾಂಗಣವಾಗುವುದು ಬಹುತೇಕ ಪಕ್ಕಾ.












Click it and Unblock the Notifications