ವಿದ್ಯುತ್ ದರ ಏರಿಕೆ: ಕಾಂಗ್ರೆಸ್ ಸರ್ಕಾರದ ಬಗ್ಗೆ ಬಿಜೆಪಿ ಹೇಳಿದ್ದೇನು
ಕರ್ನಾಟಕದಲ್ಲಿ ಈಗಾಗಲೇ ವಿದ್ಯುತ್ ವಿಚಾರವಾಗಿ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ಪೈಕಿ ವಿದ್ಯುತ್ ವ್ಯತ್ಯಯದ ಅಸ್ತ್ರ ಹಿಡಿದು ವಿರೋಧ ಪಕ್ಷಗಳು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿವೆ. ಆದ್ರೆ ಇದೇ ಸಮಯದಲ್ಲಿ ಕರ್ನಾಟಕ ಬಿಜೆಪಿ ಈಗ, ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ವಿದ್ಯುತ್ ದರ ಏರಿಕೆಯ ಬಗ್ಗೆ ಆರೋಪ ಮಾಡಿದೆ.
ಹೌದು, ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ಬೆಲೆ ಸಾಕಷ್ಟು ಏರಿಕೆ ಆಗಿದೆ ಅನ್ನೋ ಆರೋಪ ಜನರಿಂದ ಕೇಳಿಬರುತ್ತಿದೆ. ಅದರಲ್ಲೂ ಇದೇ ಸಮಯದಲ್ಲಿ ಬರ ಬೇರೆ ಎದುರಾಗಿ ಜನಗಳು ಪರದಾಡಿದ್ದಾರೆ. ಹೀಗಿದ್ದಾಗಲೇ ಮತ್ತೊಮ್ಮೆ ರಾಜ್ಯದಲ್ಲಿ ವಿದ್ಯುತ್ ಬೆಲೆ ಏರಿಕೆ ಮಾಡಲು, ಕಾಂಗ್ರೆಸ್ ಸರ್ಕಾರ ಚಿಂತನೆ ನಡೆಸಿದೆ ಅಂತ ಮಾಧ್ಯಮಗಳ ವರದಿ ಉಲ್ಲೇಖಿಸಿ ಈಗ ಬಿಜೆಪಿ ಗಂಭೀರ ಆರೋಪ ಮಾಡಿದೆ. ಹಾಗಾದ್ರೆ ನಿಜವಾಗಿ ಕರ್ನಾಟಕದಲ್ಲಿ ಮತ್ತೊಮ್ಮೆ ವಿದ್ಯುತ್ ಬೆಲೆಯ ಏರಿಕೆ ಆಗುತ್ತಾ?

'ತುಘಲಕ್ ಆಡಳಿತದಿಂದ ಕರ್ನಾಟಕವನ್ನು...'
ಕರ್ನಾಟಕ ಬಿಜೆಪಿ ಈ ಬಗ್ಗೆ ಟ್ವೀಟ್ ಮಾಡಿ, 'ತುಘಲಕ್ ಆಡಳಿತದಿಂದ ಕರ್ನಾಟಕವನ್ನು ಸಂಪೂರ್ಣ ಕತ್ತಲಾಗಿರಿಸಿರುವ @INCKarnataka ಸರ್ಕಾರ, ಈಗ ಕರ್ನಾಟಕದ ಜನತೆಯ ದೀಪಾವಳಿ ಸಂಭ್ರಮಕ್ಕೂ ತಣ್ಣೀರೆರಚಿದೆ. ಡಿಸೆಂಬರ್ ತಿಂಗಳ ವಿದ್ಯುತ್ ಬಿಲ್ ನಲ್ಲಿ ಯೂನಿಟ್ ಗೆ ಮತ್ತೊಮ್ಮೆ ₹85 ಪೈಸೆ ಹೆಚ್ಚಿಸಿ, ಬರದಿಂದ ಹೈರಾಣಾಗಿರುವ ಜನತೆಗೆ ಬೇಲೆಯೇರಿಕೆಯ ಬರೆ ಎಳೆದಿದೆ. ಸಿಎಂ @siddaramaiah ಅವರೇ, ಬೆಲೆಯೇರಿಕೆ, ಭ್ರಷ್ಟಾಚಾರ, ಅರಾಜಕತೆಯನ್ನು ಹೊರತುಪಡಿಸಿ ನಿಮ್ಮ ಸರ್ಕಾರ ಮಾಡಿರುವ ಘನಂದಾರಿ ಕೆಲಸ ಯಾವುದೆಂದು ಎದೆ ಮುಟ್ಟಿಕೊಂಡು ಹೇಳಬಲ್ಲಿರಾ..!!??' ಎಂದು ಸವಾಲು ಹಾಕಿದೆ.
ತುಘಲಕ್ ಆಡಳಿತದಿಂದ ಕರ್ನಾಟಕವನ್ನು ಸಂಪೂರ್ಣ ಕತ್ತಲಾಗಿರಿಸಿರುವ @INCKarnataka ಸರ್ಕಾರ, ಈಗ ಕರ್ನಾಟಕದ ಜನತೆಯ ದೀಪಾವಳಿ ಸಂಭ್ರಮಕ್ಕೂ ತಣ್ಣೀರೆರಚಿದೆ.
— BJP Karnataka (@BJP4Karnataka) November 14, 2023
ಡಿಸೆಂಬರ್ ತಿಂಗಳ ವಿದ್ಯುತ್ ಬಿಲ್ ನಲ್ಲಿ ಯೂನಿಟ್ ಗೆ ಮತ್ತೊಮ್ಮೆ ₹85 ಪೈಸೆ ಹೆಚ್ಚಿಸಿ, ಬರದಿಂದ ಹೈರಾಣಾಗಿರುವ ಜನತೆಗೆ ಬೇಲೆಯೇರಿಕೆಯ ಬರೆ ಎಳೆದಿದೆ.
ಸಿಎಂ @siddaramaiah ಅವರೇ,… pic.twitter.com/TrrwXjVxPQ
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರಲು, ಗ್ಯಾರಂಟಿ ಘೋಷಣೆ ಕೊಡುಗೆ ಕೂಡ ದೊಡ್ಡದಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ 'ಗ್ಯಾರಂಟಿ ವಾರ್' ಕೂಡ ಜೋರಾಗಿ ನಡೆದಿದೆ. ಇದರ ಜೊತೆಗೆ ಮತ್ತೊಂದು ಕಡೆ ಕರ್ನಾಟಕದಲ್ಲಿ ಇನ್ನೊಮ್ಮೆ ವಿದ್ಯುತ್ ದರ ಏರಿಕೆ ಮಾಡುತ್ತಿರುವ ಆರೋಪ ಕೂಡ ಕೇಳಿಬಂದಿದೆ. ಈ ಆರೋಪಕ್ಕೆ ಕಾಂಗ್ರೆಸ್ ಸರ್ಕಾರ & ಕಾಂಗ್ರೆಸ್ ನಾಯಕರು ಹೇಗೆ ಉತ್ತರ ನೀಡಬಹುದು? ಅನ್ನೋ ಕುತೂಹಲ ಹೆಚ್ಚಾಗಿದೆ.
ಒಟ್ನಲ್ಲಿ ರಾಜ್ಯ ರಾಜಕೀಯದಲ್ಲಿ 'ಗ್ಯಾರಂಟಿ ವಾರ್' ಬಿರುಗಾಳಿ ಎಬ್ಬಿಸಿದೆ. ಒಂದು ಕಡೆ ಬಿಜೆಪಿ ಮತ್ತು ಜೆಡಿಎಸ್ ದೋಸ್ತಿ ಮಾತುಕತೆ ಜೋರಾಗುತ್ತಿದೆ. ಇದೇ ವೇಳೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಒಟ್ಟಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಈ ಸಮಯದಲ್ಲಿ ಕಾಂಗ್ರೆಸ್ ಕೂಡ ಇಬ್ಬರ ಆರೋಪಕ್ಕೆ ಪ್ರತ್ಯಾರೋಪ ಮಾಡುತ್ತಿದೆ. ಹೀಗೆ ಇಬ್ಬರ ನಡುವೆ ಕಿರಿಕ್ ಬಲು ಜೋರಾಗಿದೆ.












Click it and Unblock the Notifications