Get Updates
Get notified of breaking news, exclusive insights, and must-see stories!

Breaking: ಕುಮಾರಸ್ವಾಮಿ ಕಣ್ಣೀರಿಗೆ ಬಿಜೆಪಿ ವ್ಯಂಗ್ಯ, ಜೆಡಿಎಸ್ ತರಾಟೆ

ಬೆಂಗಳೂರು, ಆಗಸ್ಟ್ 01: ಜೆಡಿಎಸ್ ವರಿಷ್ಠ ಎಚ್‌. ಡಿ. ದೇವೇಗೌಡರ ಆರೋಗ್ಯ ಸ್ಥಿತಿಯನ್ನು ನೆನೆದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿರುವುದನ್ನು ವ್ಯಂಗ್ಯವಾಡಿದ ಬಿಜೆಪಿಗೆ ಜೆಡಿಎಸ್ ತಿರುಗೇಟು ನೀಡಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ವರಿಷ್ಠ ಎಚ್‌. ಡಿ. ದೇವೇಗೌಡರ ಆರೋಗ್ಯ ಸ್ಥಿತಿಯನ್ನು ನೆನೆದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಎಚ್. ಡಿ ರೇವಣ್ಣ ಕಣ್ಣೀರು ಹಾಕಿದ್ದರು.

ಈ ಘಟನೆಯ ಸುದ್ದಿಯನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ, ' ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಶುಭಾಶಯಗಳು. ನಿಮ್ಮ ಜನತಾ ಜಲಧಾರೆ ಕಾರ್ಯಕ್ರಮವನ್ನು ಮೀರಿಸುವ ರೀತಿ ಇನ್ನೊಂದು ಯೋಜನೆ ರೂಪಿಸಿದ್ದೀರಿ. ಜೆಡಿಎಸ್ ಕಣ್ಣೀರಧಾರೆ ಯಶಸ್ವಿಯಾಗಲಿ!' ಎಂದು ವ್ಯಂಗ್ಯವಾಡಿದೆ. ಜೊತೆಗೆ ಜೆಡಿಎಸ್‌ ಕಣ್ಣೀರೋತ್ಸವ ಎಂದು ಹ್ಯಾಶ್‌ಟ್ಯಾಗ್ ಬಳಸಿದೆ.

 BJP Tweet Against HD Kumaraswamy and HDK Reaction

'ಒಂದೆಡೆ ಜನತಾ ಜಲಧಾರೆ. ಮತ್ತೊಂದೆಡೆ ಕಣ್ಣೀರಧಾರೆ. ಒಟ್ಟಿನಲ್ಲಿ ನೀರೋ, ನೀರು! ಮುಂದಿನ ಚುನಾವಣೆಯ ನಂತರ ಜೆಡಿಎಸ್‌ ಪಕ್ಷ ಮುಳುಗಲಿದೆ ಎಂಬುದರ ಸೂಚನೆಯಿದು. ಜೆಡಿಎಸ್ ದೋಣಿಯಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳಷ್ಟೇ ದಡ ಸೇರಬಹುದು, ಮಿಕ್ಕವರು ಮುಳುಗುವುದು ಪಕ್ಕಾ!. ಎಂದಿದೆ.

"ಮುಂದಿನ ಚುನಾವಣೆಯಲ್ಲಿ ಕಣ್ಣೀರಿನ ಮೂಲಕವಾದರೂ ಇರುವ 30 ಉಳಿಸಿಕೊಳ್ಳಲು ಜೆಡಿಎಸ್‌ ಹೆಣಗಾಡುತ್ತಿದೆ. ಹವಾಮಾನ ಇಲಾಖೆ ನೀಡುವ ಮಳೆಯ ಲೆಕ್ಕವಾದರೂ ತಪ್ಪಬಹುದು ಆದರೆ ಚುನಾವಣೆ ಹತ್ತಿರದಲ್ಲಿರುವಾಗ ಜೆಡಿಎಸ್‌ ನಾಯಕರ ಕಣ್ಣೀರಿನ ಮಳೆಯ ಲೆಕ್ಕ ಎಂದಿಗೂ ತಪ್ಪದು. ಇಲ್ಲದ ಕಣ್ಣೀರು ಒತ್ತರಿಸಿ ಬರುವುದು ಇಲ್ಲಿ ಸಾಮಾನ್ಯ!' ಎಂದು ವ್ಯಂಗ್ಯವಾಡಿದೆ.

ಇದಕ್ಕೆ ಕೆಂಡಕಾರಿರುವ ಜಾತ್ಯಾತೀತ ಜನತಾದಳದ ಅಧಿಕೃತ ಟ್ವಿಟರ್‌ಖಾತೆಯಿಂದ ಕರ್ನಾಟಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

"ಅರವತ್ತು ವರ್ಷಗಳಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದ ತಂದೆಯ ವಯೋಸಹಜ ಅನಾರೋಗ್ಯ ಕಂಡು ಯಾವುದೇ ಮಕ್ಕಳಿಗೂ ನೋವಾಗದೇ ಇರದು, ಇಂತಹ‌ ಸನ್ನಿವೇಶದಲ್ಲಿ ಕುಮಾರಸ್ವಾಮಿ ಅವರು ಒಂದೆರಡು ಹನಿ ಕಣ್ಣೀರು ಹಾಕಿದ್ದಾರೆ, ಇದರಲ್ಲಿ ವ್ಯಂಗ್ಯ ಮಾಡುವಂತದ್ದೇನೂ ಇಲ್ಲ. ಆದರೆ ಎಲ್ಲದಕ್ಕೂ ವ್ಯಂಗ್ಯ ಮಾಡೋದು ಈ ಮಾನಗೆಟ್ಟ ಕರ್ನಾಟಕ ಬಿಜೆಪಿಗೆ ಹೊಸದೇನೂ ಅಲ್ಲ" ಎಂದಿದೆ.

"ಕುಮಾರಸ್ವಾಮಿ ಅವರು ತಂದೆಯ ಸ್ಥಿತಿ ನೆನೆದು ತಾವು ಕಣ್ಣೀರು ಹಾಕಿದ್ದಾರೆಯೇ ಹೊರತು ಕಂಡವರ ಮಕ್ಕಳನ್ನು ಕೊಮುದಳ್ಳುರಿಗೆ ತಳ್ಳಿ ಪ್ರಾಣ ತೆಗೆದು ಅವರ ಕುಟುಂಬದವರ ಬಳಿ ಕಣ್ಣೀರು ಹಾಕಿಸಿಲ್ಲ, ನಿಮ್ಮದೇ ಶಾಸಕ ರೇಣುಕಾಚಾರ್ಯ ಹೇಳಿದಂತೆ ಪ್ರವೀಣ್ ನೆಟ್ಟೂರ ಹತ್ಯೆಯನ್ನು ನೋಡಿ ಅಸಹಾಯಕತೆಯಿಂದ ಬೊಮ್ಮಾಯಿಯಂತೆ ಕಛೇರಿಯಲ್ಲಿ ಕೂತು ಕಣ್ಣೀರು ಹಾಕಿಲ್ಲ" ಎಂದು ಆಕ್ರೋಶ ಹೊರಹಾಕಿದೆ.

Recommended Video

      ಬದ್ಧ ವೈರಿ ಪಾಕಿಸ್ತಾನವನ್ನ ಬಗ್ಗುಬಡಿದ ಟೀಮ್ ಇಂಡಿಯಾ ವನಿತೆಯರು | *Cricket | Oneindia Kannada

      ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಸೋಮನಹಳ್ಳಿಯಲ್ಲಿ ಜಾತ್ಯಾತೀತ ಜನತಾದಳದ ಬೃಹತ್ ಸಮಾವೇಶ ನಡೆಯಿತು. ಅನಾರೋಗ್ಯದ ಕಾರಣ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು ಭಾಗವಹಿಸಿರಲಿಲ್ಲ. ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದ ದೇವೇಗೌಡರನ್ನು ಪರದೆ ಮೇಲೆ ತೋರಿಸಲಾಗುತ್ತಿತ್ತು. ಇದನ್ನು ನೋಡಿ ತಮ್ಮ ತಂದೆಯ ಅನಾರೋಗ್ಯ ನೆನೆದು ಇಬ್ಬರು ಅಣ್ಣತಮ್ಮಂದಿರು ಭಾವುಕರಾಗಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+