ರಾಜ್ಯದ ಸಂದಿಗ್ಧ ಸ್ಥಿತಿಯಲ್ಲಿ ಸೂಪರ್ ಬಜೆಟ್: ನಳಿನ್ ಕುಮಾರ್ ಕಟೀಲ್

ಬೆಂಗಳೂರು, ಮಾರ್ಚ್.08: ಕರ್ನಾಟಕದ 2021-22ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಬಗ್ಗೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

"ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ನೆರೆ, ಪ್ರಾಕೃತಿಕ ವಿಕೋಪ, ಕೊವಿಡ್-19 ಸಂಕಷ್ಟದ ನಂತರ ತೆರಿಗೆ ಹೆಚ್ಚಳ ಇಲ್ಲದ ಅತ್ಯುತ್ತಮ ಬಜೆಟ್ ಅನ್ನು ಮಂಡಿಸಿದ್ದಾರೆ. ಮಹಿಳಾ ದಿನಾಚರಣೆಯಂದೇ ಈ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ಮಹಿಳೆಯರಿಗಾಗಿ ವಿಶೇಷ ಅನುದಾನವನ್ನು ನೀಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ 2021-22ನೇ ಸಾಲಿನ ಬಜೆಟ್ ಒಟ್ಟು ಗಾತ್ರ 2,46,207 ಕೋಟಿ ರೂಪಾಯಿ ಆಗಿದೆ. ಸರ್ಕಾರದ ನಿರೀಕ್ಷಿತ ಆದಾಯ 2.43 ಲಕ್ಷ ಕೋಟಿ ರೂಪಾಯಿ ಆಗಿದೆ. ಒಟ್ಟು ವೆಚ್ಚ 2.46 ಲಕ್ಷ ರೂಪಾಯಿ ತಗಲುತ್ತದೆ. ಬಜೆಟ್ ನ ಒಟ್ಟು ಕೊರತೆ 15,134 ಕೋಟಿ ರೂಪಾಯಿ ಆಗುತ್ತದೆ.

BJP State President Nalin Kumar Kateel reaction on Karnataka Budget 2021

ಸರ್ಕಾರಕ್ಕೆ ಬರುವ ಒಟ್ಟು ಆದಾಯ 100 ರೂಪಾಯಿ ಆಗಿದ್ದರೆ ಅದರಲ್ಲಿ ರಾಜ್ಯ ತೆರಿಗೆ ಮೂಲಕ 50 ರೂಪಾಯಿ, ಸಾಲದ ಮೂಲಕ 29 ರೂಪಾಯಿ, ಕೇಂದ್ರ ತೆರಿಗೆ ಮೂಲಕ 10 ರೂಪಾಯಿ, ಕೇಂದ್ರ ಸರ್ಕಾರದ ಸಹಾಯ ಅನುದಾನದ ಅಡಿ 6 ರೂಪಾಯಿ, ರಾಜ್ಯದ ತೆರಿಗೇತರ ರಾಜಸ್ವ 3 ರೂಪಾಯಿ ಮತ್ತು ಸಾರ್ವಜನಿಕ ಲೆಕ್ಕ ನಿವ್ವಳ 2 ರೂಪಾಯಿ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+