ಟ್ರೋಲ್ ಮಿನಿಸ್ಟರ್ ಬಳಿ ಹಿಂಸಾಚಾರಗಳ ಫ್ಯಾಕ್ಟ್ ಚೆಕ್ ಮಾಡಿಕೊಳ್ಳಿ: ಸಿದ್ದರಾಮಯ್ಯಗೆ ಬಿಜೆಪಿ ಗುನ್ನ

ಬೆಂಗಳೂರು, ಸೆಪ್ಟಂಬರ್ 13: ಕರ್ನಾಟಕದಲ್ಲಿ ಕಳೆದ 15 ತಿಂಗಳಲ್ಲಿ ಗಲಾಟೆ, ಗಲಭೆಗಳು ನಡೆದೇ ಇಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯ ಬಿಜೆಪಿ ಟಾಂಗ್ ನೀಡಿದೆ. ನಿಮ್ಮ ಹೆಸರನ್ನು ಸುಳ್ಳುರಾಮಯ್ಯ ಎಂದು ಬದಲಾಯಿಸಿಕೊಳ್ಳಿ ಎಂದು ಕಾಲೆಳೆದ ಬಿಜೆಪಿಯು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿನ ನಡೆದ ಗಲಭೆ, ಹತ್ಯೆ, ಅಹಿತರ ಘಟನೆಗಳ ಪಟ್ಟಿ ಬಿಡುಗಡೆ ಮಾಡಿದೆ.

ಮಂಡ್ಯದ ನಾಗಮಂಗಲದಲ್ಲಿ ಬುಧವಾರ ರಾತ್ರಿ ಗಣೇಶೋತ್ಸವ ವಿಸರ್ಜನೆ ವೇಳೆ ಎರಡು ಕೋಮಿನ ನಡುವೆ ಗಲಾಟೆ ನಡೆದಿದೆ. ಬೈಕುಗಳಿಗೆ ಬೆಂಕಿ ಹಚ್ಚಿ, ಗಣೇಶ ವಿಗ್ರಹ ಮೇಲೆ ಕಲ್ಲು ತೂರಾಟ, ಚಪ್ಪಲಿ ಎಸೆದು ಒಂದು ಕೋಮಿನವರು ದಾಂಧಲೆ ಮಾಡಿದ್ದಾರೆ. ಇದನ್ನು ಬಿಜೆಪಿ ಖಂಡಿಸಿದ್ದಲ್ಲದೇ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಎಡವಿದೆ ಎಂದು ಜರಿಯಿತು.

BJP Responds CM Siddaramaiah s lies about Karnataka Riots and Violence

ಅದರ ಬೆನ್ನಲ್ಲೆ ಘಟನೆ ಕುರಿತು ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ ಮೂಲಕ ಪ್ರತಿಕ್ರಿಯಿಸಿದ್ದು, ''ಕಳೆದ ಒಂದೂವರೆಗೆ ವರ್ಷಗಳಿಂದ ಯಾವುದೇ ಗಲಭೆ, ಗಲಾಟೆ, ಹಿಂಸಾಚಾರ ನಡೆಯದೇ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ನಾಡನ್ನು, ಧಾಮಿರ್ಕ ನೆಲೆಟ್ಟಿನಲ್ಲಿ ವಿಭಜಿಸಲು ಯತ್ನಿಸುವ ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದ್ದರು.

ಪ್ರಮಾಣವಚನ ಸ್ವೀಕರಿಸಿದ ನಂತರ ಅರಾಜಕತೆ: ಬಿಜೆಪಿ

ಸದ್ಯದ ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಗಲಾಟೆ ಆಗಿಲ್ಲ ಎಂದಿರುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಗರಂ ಆಗಿರುವ ಬಿಜೆಪಿಯು ಪ್ರತಿಕ್ರಿಯಿಸಿ ಶುಕ್ರವಾರ ಟ್ವಿಟ್ ಮಾಡಿದೆ. ''ನಿಮ್ಮ ಹೆಸರನ್ನು ಸುಳ್ಳುರಾಮಯ್ಯ ಎಂದು ಬದಲಾಯಿಸಿಕೊಳ್ಳುವುದು ಉತ್ತಮ ಎಂದೆನಿಸುತ್ತದೆ. ಯಾವ ಬಾಯಲ್ಲಿ ಕರ್ನಾಟಕದಲ್ಲಿ ಕಳೆದ 15 ತಿಂಗಳಿನಲ್ಲಿ ಗಲಭೆ, ಹಿಂಸಾಚಾರ ನಡೆದೇ ಇಲ್ಲ ಎಂದು ಹೇಳುತ್ತಿದ್ದೀರಿ..? ಎಂದು ಪ್ರಶ್ನೆ ಮಾಡಿದೆ.

ನೀವು ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮರುಕ್ಷಣದಿಂದಲೇ ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿಗೆ ಹೆಸರಾಗಿದ್ದ ಕರುನಾಡು ಅರಾಜಕತೆಯ ಬೀಡಾಯಿತು.

ಬಹುಶಃ ರಾಜೀನಾಮೆ ಪತ್ರ ಬರೆಯುವ ಟೆನ್ಷನ್‌ನಲ್ಲಿ ನೀವು ನಿಮ್ಮ 15 ತಿಂಗಳ ದುರಾಡಳಿತದಲ್ಲಿ ನಡೆದಿರುವುದನ್ನು ಮರೆತಿರಬಹುದು, ಚಿಂತಿಸಬೇಡಿ, ನಾವು ಅದನ್ನು ನಿಮಗೆ ನೆನಪಿಸುತ್ತೇವೆ ಎಂದು ಬಿಜೆಪಿಯು ಹಳೆಯ ಅಹಿತಕರ ಘಟನೆಗಳ ಪಟ್ಟಿಯನ್ನು ಬಿಚ್ಚಿಟ್ಟಿದೆ.

15 ತಿಂಗಳಲ್ಲಿ ನಡೆದ ಘಟನೆಗಳ ಪಟ್ಟಿ

* ಟಿ.ನರಸೀಪುರದಲ್ಲಿ ಯುವ ಬ್ರಿಗೇಡ್‌ ಕಾರ್ಯಕರ್ತ ವೇಣುಗೋಪಾಲ ಹತ್ಯೆಯಿಂದ ನರಸೀಪುರ ಉದ್ವಿಗ್ನ

* ಕೋಲಾರದಲ್ಲಿ ತಲ್ವಾರ್‌ ಮಾದರಿ ಪ್ರಚೋದನಕಾರಿ ಕಟೌಟ್‌

* ಶಿವಮೊಗ್ಗದಲ್ಲಿ ಔರಂಗಜೇಬನ ಹಾಗೂ ತಲ್ವಾರ್‌ ಮಾದರಿ ಕಟೌಟ್‌

* ಶಿವಮೊಗ್ಗದಲ್ಲಿ ಮತಾಂಧ ಜಿಹಾದಿಗಳಿಂದ ಬಡ ಹಿಂದೂಗಳ ಮನೆಗೆ ಬೆಂಕಿ, ಕಲ್ಲು ತೂರಾಟ

* ಉಡುಪಿಯ ಕಾಲೇಜಿನ ಶೌಚಾಲಯದಲ್ಲಿ ಹಿಂದೂ ಹೆಣ್ಣು ಮಕ್ಕಳು ಬಟ್ಟೆ ಬದಲಿಸುವ ವಿಡಿಯೋವನ್ನು ಕದ್ದು ಶೂಟ್‌ ಮಾಡಿದ್ದು.

* ಬೆಳಗಾವಿಯಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಬೆತ್ತಲುಗೊಳಿಸಿ ಹಲ್ಲೆ ನಡೆಯಿತು.

* ಹಾನಗಲ್ ನಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ.

* ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಲಾಯಿತು.

* ಕಲಬುರಗಿಯಲ್ಲಿ ಪೊಲೀಸ್‌ ಪೇದೆ ಮೇಲೆ ಮರಳು ಟ್ರಾಕ್ಟರ್‌ ಹರಿಸಿ ಕೊಲೆ ಮಾಡಲಾಯಿತು.

* ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹಾಗೂ ಅಂಜಲಿ ಹತ್ಯೆ ನಡೆಯಿತು.

* ಪ್ರತಿನಿತ್ಯ ಬೆಂಗಳೂರಿನಲ್ಲಿ ವರದಿಯಾಗುತ್ತಿರುವ ರೋಡ್‌ರೇಜ್‌ ಪ್ರಕರಣಗಳು

ಇವಿಷ್ಟು ಕೇವಲ ನಿಮ್ಮ 15 ತಿಂಗಳ ಅರಾಜಕತೆಯ ಆಡಳಿತದ ಹೈಲೈಟ್ಸ್‌ಗಳು. ಈ ಬಗ್ಗೆ ನಿಮಗೆ ಅನುಮಾನವಿದ್ದರೆ ನೀವು #TrollMinister ಪ್ರಿಯಾಂಕ್ ಖರ್ಗೆ ಅವರ ಬಳಿಕ ಒಮ್ಮೆ ಒಮ್ಮೆ ಫ್ಯಾಕ್ಟ್‌ಚೆಕ್‌ ಮಾಡಿಸಿಕೊಳ್ಳಿದೆ ಎಂದು ಬಿಜೆಪಿ ಕಿರಿ ಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+