ಕೇಂದ್ರ ಅನುದಾನ ಹಂಚಿಕೆಯ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು: UPA-NDA ಅವಧಿಯ ಲೆಕ್ಕ ಕೊಟ್ಟ ಬಿಜೆಪಿ
ಬೆಂಗಳೂರು, ಅಕ್ಟೋಬರ್ 30: ಕೇಂದ್ರ ಸರ್ಕಾರಕ್ಕೆ ತೆರಿಗೆ ಪಾವತಿಯಲ್ಲಿ ಕರ್ನಾಟಕವೇ ಅಗ್ರಸ್ಥಾನದಲ್ಲಿದೆ. ಹೀಗದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಹಿತ 23 ಇಲಾಖೆಗಳಿಗೆ ನಯಾಪೈಸೆ ಅನುದಾನ ನೀಡಿಲ್ಲ ಎಂದು ಪ್ರಧಾನಿ ಸೇರಿದಂತೆ ಕೇಂದ್ರ ಸರ್ಕಾರವನ್ನು ಸಿಎಂ ಸಿದ್ದರಾಮಯ್ಯ ದೂರಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿಯು ಮುಖ್ಯಮಂತ್ರಿಗಳಿಗೆ ತಿರುಗೇಟು ನೀಡಿದೆ.
12ಕ್ಕೂ ಹೆಚ್ಚು ಬಾರಿ ಕರ್ನಾಟಕದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಯೊಬ್ಬರು ಸಾರ್ವಜನಿಕರ ಹಣಕಾಸಿನ ಬಗ್ಗೆ ತಲೆ ಕೆಡಿಸಿಕೊಂಡಿರುವುದು ಬೇಸರದ ಸಂಗತಿ ಎಂದು ಸೋಮವಾರ ಬೆಳಗ್ಗೆ 'ಎಕ್ಸ್' ಜಾಲತಣದಲ್ಲಿ ಟ್ವೀಟ್ ಮಾಡಿ ಲೇವಡಿ ಮಾಡಿದೆ. ಅಲ್ಲದೇ ಯುಪಿಎ ಸರ್ಕಾರದಲ್ಲಿ ಮತ್ತು ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಬಂದ ಅನುದಾನದ ಲೆಕ್ಕ ನೀಡಿದೆ.

ಹಣಕಾಸಿನ ಈ ಬಗೆಗಿನ ತಿಳುವಳಿಕೆಯೊಂದಿಗೆ ಕಾಂಗ್ರೆಸ್ ಸರ್ಕಾರವು ಎಲ್ಲೆಲ್ಲಿ ಚುಕ್ಕಾಣಿ ಹಿಡಿದಿದ್ದರೂ, ಆರ್ಥಿಕತೆಯು ಮೂರ್ಛೆ ಹೋಗುವುದರಲ್ಲಿ ಆಶ್ಚರ್ಯವಿಲ್ಲ. ಸಿದ್ದರಾಮಯ್ಯನವರೆ ನೀವು ಹೇಳುತ್ತಿರುವ ಅನುದಾನ ಒದಗಿಸುವ ಶಿಫಾರಸು 15ನೇ ಹಣಕಾಸು ಆಯೋಗದ ವರದಿಯ ಭಾಗವಾಗಿರಲಿಲ್ಲ. ಹೀಗಿರುವಾಗ, ಕೇಂದ್ರವು ಇದನ್ನು ಒಪ್ಪಿಕೊಳ್ಳುವುದಾದರೂ ಹೇಗೆ? ನಿಮ್ಮ ವಾದದ ತಳಹದಿಯೇ ದೋಷಪೂರಿತವಾಗಿದೆ ಎಂದು ಬಿಜೆಪಿ ತಿರುಗೇಟು ನೀಡಿತು.
ಸತ್ಯಗಳನ್ನು ಪರಿಶೀಲಿಸದೇ ಕಾಂಗ್ರೆಸ್ ಆರೋಪ
ಕಾಂಗ್ರೆಸ್‌ನ ವಿಶಿಷ್ಟ ತಂತ್ರ ಎಂದರೆ ಅದು ಮೊದಲು ತಮ್ಮ ಸತ್ಯಗಳನ್ನು ಪರಿಶೀಲಿಸದೇ ಛಾವಣಿಯ ಮೇಲಿಂದ ಕೂಗುವುದಾಗಿದೆ. ಕಾಂಗ್ರೆಸ್ ಪಕ್ಷವು, ತಮ್ಮ ಎಂದಿನ ಶೈಲಿಯಲ್ಲಿ, ತಮ್ಮ ಸ್ವಂತ ಕಾರ್ಯಗಳ ಬಗ್ಗೆ ಒಮ್ಮೆ ಪ್ರತಿಬಿಂಬಿಸದೆ ಕೇಂದ್ರದತ್ತ ಬೆರಳು ತೋರಿಸಲು ಸಿದ್ದವಿರುತ್ತದೆ.
ಸಿದ್ದರಾಮಯ್ಯ ಅವರು ರಾಜ್ಯದ ಬಜೆಟ್, ಆರ್ಥಿಕತೆ ಕುರಿತು ಆಲೋಚಿಸದೇ ವಿವಿಧ ಯೋಜನೆಗಳನ್ನು ಜಾರಿ ಬಗ್ಗೆ ಜನರಿಗೆ ಭರವಸೆ ನೀಡಿದರು. ಇದು ಕ್ಲಾಸಿಕ್ ಕಾಂಗ್ರೆಸ್, ಭರವಸೆಗಳು ನೀಡುವುದು, ತಮ್ಮ ಕನಸುಗಳನ್ನು ನಿಜವಾಗಿ ಸಾಧಿಸುವುದು ಹೇಗೆ ಎಂಬುದರ ಕುರಿತು ಕಾಂಗ್ರೆಸ್ ಸಂಪೂರ್ಣ ಶೂನ್ಯವಾಗಿದೆ. ಇವರ ಯೋಜನೆಗಳ ವಾಸ್ತವ ಪರಿಶೀಲಿಸಿದರೆ ಹಣಕಾಸಿನ ಸ್ಪಷ್ಟತೆ ಇಲ್ಲದ್ದ ಕಾಣುತ್ತದೆ. ಆಗ ಕಾಂಗ್ರೆಸ್ ಕೇಂದ್ರದತ್ತ ಬೆರಳು ಮಾಡುತ್ತದೆ ಎಂದು ಟೀಕಿಸಿದೆ.
ತನ್ನ ಭರವಸೆಗಳಿಂದಲೇ ಕಾಂಗ್ರೆಸ್ ಹತಾಶ: ಆರೋಪ
ಇನ್ನೂ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಜಾರಿಗೊಳಿಸುತ್ತಿರುವ ತಮ್ಮ ಅಜಾಗರೂಕ ಭರವಸೆಗಳು, ಸಾರ್ವಜನಿಕ ಹಣಕಾಸಿನ ಅಸಹಜ ನಿರ್ವಹಣೆಯಿಂದ ವಿಮುಖಗೊಂಡು ಹತಾಶವಾಗಿದೆ. ಅದರ ಭಾಗವಾಗಿಯೇ ಮೋದಿ ಸರ್ಕಾರವನ್ನು ದೂಷಿಸುವುದು, ಹಣ ಬಿಡುಗಡೆಯಾಗಿಲ್ಲ ಎಂದು ಬಿಂಬಿಸುವ ಪ್ರಯತ್ನವಾಗಿದೆ. ಇದೆಲ್ಲವು ಕಾಂಗ್ರೆಸ್ ಆಡಳಿತ ವೈಫಲ್ಯಗಳನ್ನೆ ಎತ್ತಿ ತೋರಿಸುತ್ತವೆ ಎಂದು ಕುಟುಕಿದೆ.

ಕೇಂದ್ರ ಸರ್ಕಾರದತ್ತ ಬೆಟ್ಟು ಮಾಡುವ ರಾಜಕೀಯ ರಂಗಭೂಮಿಯಲ್ಲಿ ತೊಡಗುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ತನ್ನ ಹಣಕಾಸನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಬೇಕು. ಆ ಮೂಲಕ ನಾಗರಿಕರ ಅಗತ್ಯಗಳ ಪೂರೈಕೆಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಸಲಹೆ ನೀಡಿದೆ.
UPA ಮತ್ತು NDA ಅವಧಿಯಲ್ಲಿ ಸಿಕ್ಕ ಅನುದಾನ ಇಷ್ಟು
2014 ರಿಂದ ಜುಲೈ 2023 ರವರೆಗೆ ಕರ್ನಾಟಕವು ಕೇಂದ್ರ ಸರ್ಕಾರದಿಂದ 2,66,825 ಕೋಟಿ ರೂ. ಸ್ವೀಕರಿಸಿದೆ. ಇದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2004 ರಿಂದ 2014 ರ ಅವಧಿಗೆ ಹೋಲಿಸಿದರೆ ಬಿಜೆಪಿ ಅವಧಿಯಲ್ಲಿ ಕರ್ನಾಟಕಕ್ಕೆ 3.2 ಪಟ್ಟು ಹೆಚ್ಚು ಹಣ ಪಾವತಿಯಾಗಿದೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.
ಅಷ್ಟೇ ಅಲ್ಲದೇ 2014 ರಿಂದ 2023ರವರೆಗಿನ ಹಣಕಾಸು ವರ್ಷದಲ್ಲಿ 2,08,832 ಕೋಟಿ ರೂಪಾಯಿ ಹಣ ಕರ್ನಾಟಕಕ್ಕೆ ಸಿಕ್ಕಿದೆ. 2004ರಿಂದ 2014ರ ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ 60,779 ಕೋಟಿ ರೂಪಾಯಿ ಸಿಕ್ಕಿದೆ. ಈ ಮೂಲಕ ಬಿಜೆಪಿ ಅವಧಿಯಲ್ಲಿ ಕರ್ನಾಟಕಕ್ಕೆ 3.4 ಪಟ್ಟು ಹೆಚ್ಚು ಹಣ ನೀಡುವ ಮೂಲಕ ಕೇಂದ್ರ ಇಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದು ಬಿಜೆಪಿ ವಿವರಿಸಿದೆ.
ಕರ್ನಾಟಕ ಬಿಜೆಪ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವ ಮೊದಲು ಸ್ವಂತ ಹಣಕಾಸಿನ ದುರುಪಯೋಗವಾಗಿದ್ದನ್ನು ಅರಿಯಬೇಕು ಎಂದು ತಿಳಿಸಿದೆ.












Click it and Unblock the Notifications