BJP President: ಬಿ.ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ವಿಳಂಬ! ಒಂದು ತಿಂಗಳವರೆಗೆ ಯಥಾ ಸ್ಥಿತಿ
ಬೆಂಗಳೂರು, ಫೆಬ್ರವರಿ 26: ಕರ್ನಾಟಕ ರಾಜಕಾರಣದಲ್ಲಿ ಇತ್ತೀಚಿನ ಬೆಳವಣಿಗೆ ಪೈಕಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ ಹೆಚ್ಚು ಹೈಪ್ ಪಡೆದಿತ್ತು. ಇನ್ನೇನು ಚುನಾವಣೆ ನಡೆಸಿ ಹೊಸ ರಾಜ್ಯಾಧ್ಯಕ್ಷರ ಆಯ್ಕೆ ಮಾಡಬೇಕು ಎನ್ನುವಷ್ಟರದಲ್ಲಿ ಮತ್ತೆ ಆಯ್ಕೆ ತಡವಾಗಬಹುದು ಎಂದು ಹೇಳಲಾಗುತ್ತಿದೆ. ಇತ್ತ ಬಿವೈ ವಿಜಯೇಂದ್ರ ಅವರೇ ಮುಂದುವರೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿರೋಧಿ ಬಣದವರು ವಿಜಯೇಂದ್ರರನ್ನು ಬದಲಾಯಿಸುವಂತೆ ಪಟ್ಟು ಹಿಡಿದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಅವರು ಆಯ್ಕೆ ಆದಾಗಿನಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತವರ ಬಣ ವಿರೋಧಿಸುತ್ತಲೇ ಬಂದಿದೆ. ಅದು ತಾರಕಕ್ಕೆ ಏರುತ್ತಿದ್ದಂತೆ ಬಣ ಬಡಿದಾಟು ಶುರುವಾಗಿತ್ತು. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕೇಂದ್ರ ವರಿಷ್ಠರು ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆಗೆ ಮೂಲಕ ಆಯ್ಕೆ ಮಾಡುವುದಾಗಿ ತಿಳಿಸಿತು.

ಈ ನಿರ್ಧಾರದ ಬಳಿಕ ಮಹತ್ವದ ಬೆಳವಣಿಗೆಗಳು ನಡೆದವು. ಅದರ ಬೆನ್ನಲ್ಲೆ ಇನ್ನೇನು ಬದಲಾಗುತ್ತಾರೆ ಹಾಲಿ ರಾಜ್ಯಾಧ್ಯಕ್ಷರು ಎನ್ನವಾಗಲೇ ಇನ್ನೂ ಸುಮಾರು ಒಂದು ಇಲ್ಲವೇ ಒಂದೂವರೆ ತಿಂಗಳು ಅವರೇ ಮುಂದುವರಿಯಲಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನ ವಿಚಾರದಲ್ಲಿ ಯಥಾ ಸ್ಥಿತಿ ಕಾಯ್ದುಕೊಳ್ಳಲು ಬಿಜೆಪಿ ತಿರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ರಾಜ್ಯಾಧ್ಯಕ್ಷ: ಯಥಾಸ್ಥಿತಿ ಮುಂದುವರೆಸಲು ಕಾರಣ?
ವಿಪಕ್ಷ ಸ್ಥಾನದಲ್ಲಿರುವ ಬಿಜೆಪಿಯು ಹೊಸ ಕಿರಿ ಕಿರಿ, ಅಪಮಾನಕ್ಕೀಡಾಗಬಾರದು ಎಂಬ ಕಾರಣಕ್ಕೆ ಹೀಗೆ ನಿರ್ಧರಿಸಿದೆ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಬಜೆಟ್ ಮಂಡನೆ ಆಗಲಿದೆ. ಈ ಸಂಬಂಧ ಮಾರ್ಚ್ 03ರಿಂದ ಬಜೆಟ್ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಕುರಿತು ಯಾವ ನಿರ್ಧಾರ ಪ್ರಕಟಿಸಿದರೆ ಅದರಿಂದ ಪಕ್ಷಕ್ಕೆ ಹಿನ್ನಡೆ ಆಗಬಹುದು. ಹೊಸ ಕಿರಿ ಕಿರಿ ಉಂಟಾಗುವ ಜೊತೆಗೆ ಸದನದಲ್ಲಿ ಪ್ರಶ್ನೆ ಮಾಡುವ ವಿಪಕ್ಷ ನಾಯಕರಿಗೆ ಮುಜುಗರ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಯಥಾ ಸ್ಥಿತಿಯನ್ನು ಕಾಯ್ದುಕೊಳ್ಳಲಾಗುತ್ತದೆ.

ಮಾರ್ಚ್ 3 ರಿಂದ ಬಜೆಟ್ ಅಧಿವೇಶನ ಆರಂಭವಾಗಿ, ಮಾರ್ಚ್ ಮೂರನೇವಾರದವರೆಗೆ ಮುಂದುವರಿಯಲಿದೆ. ಇದರಿಂದಾಗಿ ಮುಂದಿನ ಒಂದು, ಒಂದೂವರೆ ತಿಂಗಳ ಕಾಲ ಯಾವ ನಿರ್ಧಾರ ಪ್ರಕಟಿಸದಿರಲು ವಿಪಕ್ಷ ಬಿಜೆಪಿ ನಿರ್ಧಾರಿಸಿದೆ. ಅಲ್ಲಿಯವರೆಗೆ ಬಿವೈ ವಿಜಯೇಂದ್ರ ಅವರೇ ಮುಂದುವರಿಯಲಿದ್ದಾರೆ. ನಂತರ ಚುನಾವಣೆಯ ಅಪ್ಡೇಟ್ ಸಿಗಲಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಮಹತ್ವದ ಸಭೆ
ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಹುದ್ದೆ ಇಳಿಸಬೇಕು ಎಂಬ ವಿರೋಧಿ ಬಣದ ಪ್ರಮುಖ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಟ್ಟು ಸಡಿಲಿಸಿಲ್ಲ. ತಮ್ಮ ಬಣದಿಂದಲೇ ರಾಜ್ಯಾಧ್ಯಕ್ಷ ಚುನಾವಣೆಗೆ ಒಬ್ಬ ಅಭ್ಯರ್ಥಿ ನಿಲ್ಲುವುದು ಫಿಕ್ಸ್ ಎಂದು ಅವರು ಎಲ್ಲ ಸಿದ್ಧತೆ ನಡೆಸಿದ್ದಾರೆ.
ಈ ಸಿದ್ಧತೆ ಮುಂದುವರಿದ ಭಾಗವಾಗಿ ಮಂಗಳವಾರ ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದರು. ಕಡಿಮೆ ಸಂಖ್ಯೆಯಲ್ಲಿ ಮುಖಂಡರು ಪಾಲ್ಗೊಂಡಿದ್ದರಿಂದ ಒಂದು ಹಂತದಲ್ಲಿ ಸಭೆ ಯಶಸ್ವಿ ಆಗಿಲ್ಲ ಎನ್ನಲಾಗಿದೆ. ಸಮುದಾಯದ ಎಲ್ಲ ಮುಖಂಡರು ವಿಜಯೇಂದ್ರ ಪರವಾಗಿಲ್ಲ. ಆದ್ದರಿಂದ ನಿಮ್ಮ ಅನಿಸಿಕೆ, ಅಭಿಪ್ರಾಯ, ಪಕ್ಷಕ್ಕೆ ವೀರಶೈವರ ಬೆಂಬಲ ವ್ಯಕ್ತಪಡಿಸಲು ಹಾಗೂ ಸೂಕ್ತ ನಾಯಕರ ಆಯ್ಕೆಗಾಗಿ ನಿಮ್ಮ ಸಲಹೆ-ಸೂಚನೆ ನೀಡುವಂತೆ ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮನವಿ ಮಾಡಿದರು. ಇದರಲ್ಲಿ ಭಯಪಡುವ ಅಗತ್ಯವಿಲ್ಲ ಎಂದ ಅವರು, ರಾಜ್ಯಾಧ್ಯಕ್ಷ ಸ್ಥಾನ ಶೀಘ್ರವೇ ಬದಲಾಗಬೇಕು ಎಂದು ಆಗ್ರಹಿಸಿದರು.












Click it and Unblock the Notifications