ಸರ್ಕಾರ ಕಲುಷಿತ ನೀರು ಪೂರೈಕೆಯಿಂದ ಅಮಾಯಕರ ಜೀವ ಬಲಿ: ಮೃತಪಟ್ಟವರ ಮಾಹಿತಿ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು, ಆಗಸ್ಟ್‌ 02: ರಾಜ್ಯದಲ್ಲಿ ಜನರನ್ನು ಬಲಿಪಡೆಯಲೆಂದೇ ಕಾಂಗ್ರೆಸ್‌ ನ ತುಘಲಕ್ ಸರ್ಕಾರ, ಕಲುಷಿತ ನೀರು ಪೂರೈಕೆ ಮಾಡಿ ಅಮಾಯಕರ ಜೀವಗಳನ್ನು ತೆಗೆಯುತ್ತಲೇ ಇದೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್‌ ಸರ್ಕಾರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದೆ.

ಇನ್ನೂ ರಾಜ್ಯದಲ್ಲಿ ಕಲುಷಿತ ನೀರು ಕುಡಿದು ಸಾವನ್ನಪ್ಪಿಸದವರ ಸಂಖ್ಯೆಯನ್ನ ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಬಿಡುಗಡೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಆಗಸ್ಟ್‌ 1 ರಂದು ಚಿತ್ರದುರ್ಗ ಜಿಲ್ಲೆಯ ಕವಾಡಿಡರಹಟ್ಪಿ ಬಡಾವಣೆಯಲ್ಲಿ ಕಲುಷಿತ ನೀರು ಕುಡಿದು ಓರ್ವ ಮಹಿಳೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು ,20ಕ್ಕೂ ಹೆಚ್ಚು ಮಂದಿ ಅಸ್ವಸ್ಥ ಗೊಂಡಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

BJP Outraged That The Tughlaq Government Came To Sacrifice People In The State

ಜುಲೈ 30 ರಂದು ಬೀದರ್‌ ಜಿಲ್ಲೆಯ ಬರೀದಾಬಾದ್ ಕಲುಷಿತ ನೀರು ಕುಡಿದು 14ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಜುಲೈ 17 ರಂದು ತುಮಕೂರಿನ ತಾತಯ್ಯನ ಗುಡಿಯಲ್ಲಿ 10 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಜುಲೈ 03 ರಂದು ಬಳ್ಳಾರಿಯ ಸಿದ್ದಾಪುರದಲ್ಲಿ 45ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಇನ್ನೂ ಜುಲೈ 02 ರಂದು ಕಲುಷಿತ ನೀರು ಸೇವನೆಯಿಂದ ವಿಜಯನಗರದ ಬಡೀಲಡಕು ಗೊಲ್ಲರಹಟ್ಟಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದು, ಜೂನ್ 27 ರಂದು ಯಾದಗಿರಿಯ ಗುರುಮಠಕಲ್ ನಲ್ಲಿ 54ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೂನ್ 20 ರಂದು ಬೀದರ್‌ನ ಔರಾದ್ 20ಕ್ಕೂ ಹೆಚ್ಚು ಜನ ಗಂಭೀರ ಅಸ್ವಸ್ಥಗೊಂಡಿದ್ದು, ಜೂನ್ 19 ರಂದು ಕಲಬುರ್ಗಿಯ ಸೇಡಂನಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ, ಇನ್ನೂ ಜೂನ್‌ 8 ರಂದು ಬೆಂಗಳೂರಿನ ಇಲೆಕ್ಟ್ರಾನಿಕ್ಸ್ ಸಿಟಿಯಲ್ಲಿ 118 ಜನ ಅಸ್ವಸ್ಥಗೊಂಡಿದ್ದು, ಜೂನ್ 8 ರಂದು ಕೊಪ್ಪಳದ ಕುಷ್ಟಗಿಯಲ್ಲಿ 10 ವರ್ಷದ ಬಾಲಕಿ ಸಾವಿಗೀಡಾಗಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಇನ್ನೂ ಮೇ 28 ರಂದು ರಾಯಚೂರಿನ ದೇವದುರ್ಗದಲ್ಲಿ 30 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿದ್ದು, ಮೇ 26 : ರಾಯಚೂರಿನ ದೇವದುರ್ಗದಲ್ಲಿ 50 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದು, 5 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಬಿಜೆಪಿ ಟ್ವೀಟ್‌ ಮೂಲಕ ತಿಳಿಸಿದೆ.

ಟ್ರೋಲ್‌ ಮಿನಿಸ್ಟರ್‌ ಪ್ರಿಯಾಂಕ್‌ ಖರ್ಗೆ ಅವರೇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಬುದೊಂದಿದೆ. ಅದು ನಿಮ್ಮ ಸಚಿವಾಲಯಕ್ಕೆ ಸಂಬಂಧಪಟ್ಟಿದ್ದು. ಬೇರೆ ಇಲಾಖೆಗಳಲ್ಲಿ ಮೂಗು ತೂರಿಸುವುದನ್ನು ಬಿಟ್ಟು ಮೊದಲು ಶುದ್ಧ ಕುಡಿಯುವ ನೀರು ಪೂರೈಕೆ, ಬಲಿಯಾಗುತ್ತಿರುವ ಅಮಾಯಕ ಜೀವಗಳ ಬಗ್ಗೆ ಸೊಲ್ಲೆತ್ತಲು ಸಮಯ ಕೊಡಿ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+