ಕರ್ನಾಟಕ ಸರ್ಕಾರದಿಂದ 16 ಡಯಾಲಿಸಿಸ್ ಕೇಂದ್ರ ಸ್ಥಗಿತಕ್ಕೆ ಬಿಜೆಪಿ ಆಕ್ರೊಶ

ಬೆಂಗಳೂರು, ಸೆಪ್ಟಂಬರ್ 28: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಬಿಜೆಪಿ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಕರ್ನಾಟಕ ರಾಜ್ಯ ಬಿಜೆಪಿ ಕಟುವಾಗಿ ಟೀಕೆ ಮಾಡಿದೆ. ಜನಪರ ಯೋಜನೆಗಳನ್ನು ನಿಲ್ಲಿಸಿ ಕನ್ನಡಿಗರಿಗೆ ದ್ರೋಹ ಮಾಡುತ್ತಿದೆ ಎಂದು ತಿಳಿಸಿದೆ.

ಈ ಕುರಿತು ಗುರುವಾರ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿಯು ತಾನೇ ಘೋಷಿಸಿದ ಯಾವುದೇ ಗ್ಯಾರಂಟಿಗಳನ್ನೂ ಸರಿಯಾಗಿ ಅನುಷ್ಠಾನ ಮಾಡಿಲ್ಲ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ‌ ನೀಡಿದ ಜನಪರ ಯೋಜನೆಗಳನ್ನೂ ನಿಲ್ಲಿಸಿದೆ. ಆ ಯೋಜನೆಗಳನ್ನು ಕಿತ್ತುಕೊಂಡು ಕನ್ನಡಿಗರಿಗೆ ದ್ರೋಹ‌ ಬಗೆಯುವುದೊಂದೆ ಈ ಕಾಂಗ್ರೆಸ್ ಸರ್ಕಾರದ ಗುರಿಯಾಗಿದೆ ಎಂದು ದೂರಿದೆ.

bjp-outrage-on-congress-govt

ಬಡರೋಗಿಗಳ ಬವಣೆ ನಿವಾರಣೆಗಾಗಿ ಪ್ರಧಾನಿ ಮೋದಿ ಸರ್ಕಾರ ಆರಂಭಿಸಿದ್ದ ಡಯಾಲಿಸಿಸ್ ಕೇಂದ್ರಗಳನ್ನು ಸಿದ್ದರಾಮಯ್ಯರವರ ಸರ್ಕಾರ ನಿರ್ವಹಣೆ ಮಾಡಲಾಗದೆ ರಾಜ್ಯದ ಬಡ ರೋಗಿಗಳ ಪ್ರಾಣಕ್ಕೆ ಕುತ್ತು ತಂದು ಚೆಲ್ಲಾಟವಾಡುತ್ತಿದೆ ಎಂದು ಆರೋಪ ಮಾಡಿದೆ.

ಕೇಂದ್ರದತ್ತ ಬೊಟ್ಟು ಮಾಡುವ ಕಾಂಗ್ರೆಸ್

ಈ ಕಾಂಗ್ರೆಸ್ ಸರ್ಕಾರ ಮಾತೆತ್ತಿದರೆ ಕೇಂದ್ರ ಕೊಡಬೇಕು, ಪ್ರಧಾನಿಗಳು ಮಧ್ಯಪ್ರವೇಶ ಮಾಡಬೇಕು ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಕೊಟ್ಟ ಯೋಜನೆಗಳನ್ನು ಕನ್ನಡಿಗರಿಗೆ ಕನಿಷ್ಠ ಪಕ್ಷ ತಲುಪಿಸಿ ಎಂದು ಬಿಜೆಪಿ ಹೇಳಿದೆ.

bjp-outrage-on-congress-govt

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಸರ್ಕಾರದ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಜಾರಿ ಮಧ್ಯೆ ರೈತರಿಗೆ ಅನುಕೂಲವಾಗಿದ್ದ ಪಿಎಂ ಕಿಸಾನ್ ಯೋಜನೆಯನ್ನು ಸಹ ಸ್ಥಗಿತಗೊಳಿಸಿದೆ. ಕೇಂದ್ರವು ಈ ಯೋಜನೆಯಡಿ 6 ಸಾವಿರ, ರಾಜ್ಯ ಬಿಜೆಪಿ ಸರ್ಕಾರ 4 ಸಾವಿರ ರೂಪಾಯಿ ನೀಡುತ್ತಿತ್ತು. ಆದರೆ ಅದನ್ನು ಈಗಿನ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ.

ಡಯಾಲಿಸಿಸ್ ಸೆಂಟರ್ ಸ್ಥಗಿತ

ಇನ್ನೂ ರೈತರ ಮಕ್ಕಳಿಗೆ ನೀಡುತ್ತಿದ್ದ ಆರ್ಥಿಕ ಸಹಾಯಧನ ವಿದ್ಯಾನಿಧಿಯನ್ನು ಸಹ ಮುಂದುವರಿಸುವಂತೆ ಬಿಜೆಪಿ ಮನವಿ ಮಾಡಿತ್ತು. ಆದರೆ ಅದ್ಯಾವುದು ಮುಂದುವರೆಯುವಂತೆ ಕಾಣುತ್ತಿಲ್ಲ.

ಇದೀಗ ಜಿಲ್ಲಾವಾರು ಆಯಾ ಪ್ರದೇಶ ಜನರಿಗೆ ಅನುಕೂಲವಾಗಲೆಂದು ಡಯಾಲಿಸಿಸ್ ಸೆಂಟರ್ ಸ್ಥಾಪನೆಮಾಡಲಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರ ವಿಜಯಪುರ, ಕಾರವಾರ, ಬೆಳಗಾವಿ, ಯಾದಗಿರಿ, ರಾಯಚೂರು, ಬೀದರ್, ಉಡುಪಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಕೋಲಾರ, ಕೊಡಗು, ಚಿಕ್ಕಮಗಳೂರು, ಹಾಸನ, ಬಳ್ಳಾರಿ ಮತ್ತು ಮೈಸೂರು ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೆಂಟರ್ ಸ್ಥಗಿತಗೊಳಿಸಲಾಗಿದೆ. ಇದರ ವಿರುದ್ದ ಬಿಜೆಪಿ ಕೆಂಡ ಕಾರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+