ಡಿಕೆಶಿ ಆರೋಪದ ಬಗ್ಗೆ ಅರವಿಂದ ಲಿಂಬಾವಳಿ ಸ್ಪಷ್ಟನೆ
ಬೆಂಗಳೂರು, ಜುಲೈ 08 : 'ಬಿಜೆಪಿ ನಾಯಕರು ಪಕ್ಷೇತರ ಶಾಸಕರನ್ನು ಹೈಜಾಕ್ ಮಾಡಿದ್ದಾರೆ' ಎಂಬ ಡಿ.ಕೆ.ಶಿವಕುಮಾರ್ ಆರೋಪವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಳ್ಳಿಹಾಕಿದರು.
ಸೋಮವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, 'ಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರವನ್ನು ರಾಜ್ಯ ಪಾಲರು ಕೂಡಲೇ ವಜಾ ಮಾಡಬೇಕು. ಎಚ್.ಡಿ.ಕುಮಾರಸ್ವಾಮಿ ಅವರು ನೈತಿಕತೆ ಕಳೆದುಕೊಂಡ ಮೇಲೂ ಅಧಿಕಾರಕ್ಕೆ ಅಂಟಿ ಕುಳಿತು ಕೊಂಡಿದ್ದಾರೆ' ಎಂದು ಆರೋಪಿಸಿದರು.

'ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ರಾಜೀನಾಮೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್ ಅನಗತ್ಯವಾಗಿ ಬಿಜೆಪಿ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಶಾಸಕರನ್ನು ಬೆದರಿಸುವ ಕೆಲಸವನ್ನು ಶಿವಕುಮಾರ್ ಮಾಡಿದ್ದಾರೆ' ಎಂದು ದೂರಿದರು.
ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, 'ನಾಗೇಶ್ ನನಗೆ ಬೇರೆಯವರ ಕೈಯಲ್ಲಿ ಕರೆ ಮಾಡಿಸಿದ್ದರು. ಸಂತೋಷ್ (ಯಡಿಯೂರಪ್ಪ ಆಪ್ತ ಸಹಾಕಯಕ) ನಮ್ಮನ್ನು ಕಿಡ್ನಾಪ್ ಮಾಡಿಸಿ ಮುಂಬೈಗೆ ಕರೆದುಕೊಂಡು ಹೋಗ್ತಿದ್ದಾರೆ' ಎಂದು ಹೇಳಿದರು.
'1 ಗಂಟೆಯೊಳಗೆ ವಿಮಾನ ನಿಲ್ದಾಣಕ್ಕೆ ಬನ್ನಿ ಎಂದು ಕಣ್ಣೀರು ಹಾಕಿದ್ದರು. ಆದರೆ, 1 ಗಂಟೆ ಇದ್ದ ವಿಮಾನ ಬೇಗ ಟೇಕ್ ಆಫ್ ಮಾಡಿಸಿದ್ದಾರೆ. ಇದು ಖಂಡನೀಯ ನಮ್ಮ ಪ್ರಯತ್ನ ಮಾಡುತ್ತೇವೆ' ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.












Click it and Unblock the Notifications