ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಬಿಜೆಪಿ ಕಾರ್ಯಕಾರಿಣಿ - ವರದಿಗಳು

|
Google Oneindia Kannada News

ಬೆಂಗಳೂರು, ಏ.2 : ರಾಷ್ಟ್ರೀಯ ಪದಾಧಿಕಾರಿಗಳು, ವಿವಿಧ ರಾಜ್ಯಗಳ ಅಧ್ಯಕ್ಷರ ಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಲಲಿತ್ ಅಶೋಕ ಹೋಟೆಲ್‌ಗೆ ಆಗಮಿಸಿದ ಅವರನ್ನು ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಮುಂತಾದವರು ಬರಮಾಡಿಕೊಂಡರು.

modi in hotel

ಸಮಯ 3.30 : 'ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಜೆಯ ಮೇಲೆ ತೆರಳಿರುವುದರಿಂದ ಪಕ್ಷದ ಕಾರ್ಯಕರ್ತರಿಗೂ ರಜೆ ನೀಡಿದಂತಾಗಿದೆ' ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನವಾಜ್ ಹುಸೇನ್ ವ್ಯಂಗ್ಯವಾಡಿದ್ದಾರೆ. [ಬಿಜೆಪಿ ಕಾರ್ಯಕಾರಿಣಿ ಸಭೆ ಚಿತ್ರಗಳು]

ಗುರುವಾರ ಮಧ್ಯಾಹ್ನ ಕ್ಯಾಪಿಟಲ್ ಹೋಟೆಲ್‌ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಹನವಾಜ್ ಹುಸೇನ್, ರಾಹುಲ್‌ ಗಾಂಧಿ ರಜೆ ಮೇಲೆ ತೆರಳಿರುವುದರಿಂದ ಆ ಪಕ್ಷದ ಕಾರ್ಯಕರ್ತರಿಗೂ ರಜೆ ಕೊಟ್ಟಂತಾಗಿದೆ. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬಗ್ಗೆ ಬಿಜೆಪಿ ಕಾರ್ಯಕರ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಲೇವಡಿ ಮಾಡಿದರು.

BJP press meet

ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಎಲ್ಲಾ ರಾಜ್ಯಗಳಿಗೂ ಗುರಿನೀಡಲಾಗಿತ್ತು. ಬಹುತೇಕ ರಾಜ್ಯಗಳು ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿವೆ. ಆದರೆ, ಈಶಾನ್ಯ ಹಾಗೂ ದಕ್ಷಿಣದ ಕೆಲವು ರಾಜ್ಯಗಳಲ್ಲಿ ನಿರೀಕ್ಷೆಯಂತೆ ಅಭಿಯಾನಸಾಗಿಲ್ಲ. ಆದ್ದರಿಂದ ಅಲ್ಲಿ ಸದಸ್ಯತ್ವ ನೋಂದಣಿ ಹೆಚ್ಚಿಸುವ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚಿಸುತ್ತೇವೆ ಎಂದರು.

ಸಮಯ 3 ಗಂಟೆ : ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಎಚ್‌ಎಎಲ್ ಏರ್‌ಪೋರ್ಟ್‌ಗೆ ಆಗಮಿಸಿದ ಅವರು ರಾಜಭವನಕ್ಕೆ ತೆರಳಿದ್ದಾರೆ. 4.50ಕ್ಕೆ ಅವರು ಲಲಿತ್ ಅಶೋಕ್ ಹೋಟೆಲ್‌ಗೆ ಆಗಮಿಸಲಿದ್ದಾರೆ.

ಸಮಯ 12.30 : ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗಾಗಿ ನಗರದಲ್ಲಿ ನೂರಾರು ಬ್ಯಾನರ್ ಹಾಕಲಾಗಿದೆ. ಬಿಬಿಎಂಪಿ ವ್ಯಾಪ್ತಿಯ 'ಎ' ಝೋನ್‍ನಲ್ಲಿ ಬ್ಯಾನರ್ ಹಾಕುವಂತಿಲ್ಲ. ಆದರೆ, ನಿಯಮ ಉಲ್ಲಂಘನೆ ಮಾಡಿ ಬ್ಯಾನರ್ ಹಾಕಲಾಗಿದೆ ಎಂದು ವಕೀಲ ಉಮಾಪತಿ ಎಂಬುವವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉಪ ಲೋಕಾಯುಕ್ತರ ಪತ್ರ : ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಎಷ್ಟು ಜಾಹೀರಾತು ಫಲಕಗಳನ್ನು ಹಾಕಲು ಅನುಮತಿ ನೀಡಿದ್ದೀರಾ? ಎಂಬ ಮಾಹಿತಿ ಕೊಡಿ ಎಂದು ಬಿಬಿಎಂಪಿ ಆಯುಕ್ತರಿಗೆ ಉಪ ಲೋಕಾಯುಕ್ತ ಸುಭಾಷ್ ಆಡಿ ಪತ್ರ ಬರೆದಿದ್ದಾರೆ.

bjp banner

ಸಮಯ 11.30 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಬಿಜೆಪಿಯ ಮಹತ್ವದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿದ್ದು, ಸಂಜೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಗುರುವಾರ ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೀಪ ಬೆಳಗಿಸುವ ಮೂಲಕ ಸಭೆಗೆ ಚಾಲನೆ ನೀಡಿದರು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕರ್ನಾಟಕ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ವೇದಿಕೆಯಲ್ಲಿದ್ದಾರೆ. [ಬಿಜೆಪಿ ಕಾರ್ಯಕಾರಣಿ ಸಭೆ ವಿವರಗಳು]

BJP national executive meeting

ಇಂದು ರಾಷ್ಟ್ರೀಯ ಪದಾಧಿಕಾರಿಗಳು, ವಿವಿಧ ರಾಜ್ಯಗಳ ಅಧ್ಯಕ್ಷರ ಸಭೆ ನಡೆಯತ್ತಿದೆ. ಇಡೀ ದಿನದ ಸಭೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಾಹ್ನ ನಗರಕ್ಕೆ ಆಗಮಿಸಲಿದ್ದು, ಸಂಜೆ 4 ಗಂಟೆಗೆ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. [ಬಿಜೆಪಿ ಕಾರ್ಯಕಾರಿಣಿ, ದಕ್ಷಿಣಭಾರತದತ್ತ ಗಮನ]

national executive meeting

English summary
BJP national executive meeting begins in Hotel Lalit Ashok, Bengaluru on Thursday, April 2, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X