ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿವ ಈಶ್ವರ್‌ ಖಂಡ್ರೆಯಿಂದ ಅಧಿಕಾರ ದುರ್ಬಳಕೆ: ಭಗವಂತ ಖುಬಾ

By ಬೀದರ್ ಪ್ರತಿನಿಧಿ
|
Google Oneindia Kannada News

ಬೀದರ್, ಏಪ್ರಿಲ್ 03: ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೇ ಅವರು ಮನೆ ಪ್ರಮಾಣ ಪತ್ರವನ್ನು ಸಾಮೂಹಿಕವಾಗಿ ಹಂಚಿಕೆ ಮಾಡುತ್ತಿರುವುದು ಕೇವಲ ಚುನಾವಣೆ ತಂತ್ರ ಅಲ್ಲದೇ ಮತ್ತೇನೂ ಅಲ್ಲಾ ಎಂದು ಸಂಸದ ಭಗವಂತ ಖುಬಾ ಕಿಡಿ ಕಾರಿದ್ದಾರೆ.

ಬೀದರ್ ಜಿಲ್ಲಾ ಬಿಜೆಪಿ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇದೊಂದು ಚುನಾವಣಾ ತಂತ್ರ ಸೋಲಿನ ಭೀತಿಗೆ ಸಿಲುಕಿರುವ ಈಶ್ವರ್ ಖಂಡ್ರೆ ಅವರು ಮತದಾರರನ್ನು ಸೆಳೆಯಲು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.

ಯಾವುದೇ ವಸತಿ ಯೋಜನೆ ಅಡಿ ಫಲಾನುಭವಿಗಳನ್ನು ಅಯ್ಕೆ ಮಾಡುವ ಹಕ್ಕು ಸಂಸದ, ಸಚಿವರಿಗೆ ಜನ ಪ್ರತಿನಿಧಿಗಳಿಗೆ ಇಲ್ಲಾ, ಇದು ಕೇವಲ ಗ್ರಾಮ ಸಭೆ ಮೂಲಕವೇ ಆಗಬೇಕು ಎನ್ನುವ ನಿಯಮವಿದೆ, ಆದರೆ ಭಾಲ್ಕಿಯಲ್ಲಿ ನಿಯಮದಂತೆ ಏನೂ ನಡಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

BJP MP Bhagwanth Khuba lambasted on MLA Eshwar Khandre

ಮನೆ ಹಂಚಿಕೆ ಪ್ರಕರಣಕ್ಕೆ ಸಭಂದಪಟ್ಟಂತೆ ಬಡ ಜನರಿಗಿಂತ ಹೆಚ್ಚು ಮನೆಗಳು ಶ್ರೀಮಂತರಿಗೆ ವಿತರಿಸಲಾಗಿದೆ ಅದಲ್ಲದೆ ಗ್ರಾಮ ಪಂಚಾಯತ್ ಅಧಿಕಾರಕ್ಕೆ ಕನ್ನ ಹಾಕುವುದರ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂದು ಅವರು ದೂರಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೇ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈಶ್ವರ್ ಸಿಂಗ್ ಠಾಕೂರ್ ಇತರರು ಇದ್ದರು.

English summary
BJP MP Bhagwanth Khuba criticized MLA Eshwar Khandre about his distribution of house scheme papers to beneficiaries. He said it is a election stunt. As per the rules only village panchayats have the rights to decide the house scheme beneficiaries, but here MLA deciding that.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X