ಬಿಜೆಪಿ ಟಿಕೆಟ್ ವಂಚನೆ: ಬಾಡಿಗೆ ಭಾಷಣಕಾರರು, ಖಾವಿ ವೇಷದಾರಿ ವಂಚಕರ ಬಗ್ಗೆ ಕಾಂಗ್ರೆಸ್‌ ಟ್ವೀಟ್‌

ಬೆಂಗಳೂರು, ಸೆಪ್ಟೆಂಬರ್‌ 19: ಹಿಂದುತ್ವಪರ ಹೋರಾಟಗಾರ್ತಿ ಚೈತ್ರಾ ಕುಂದಾಪುರ ವಂಚನೆ ಪ್ರಕರಣವು ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿದೆ. ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿಯೊಬ್ಬರಿಗೆ ಚೈತ್ರಾ ಕುಂದಾಪುರ ಹಾಗೂ ಆಕೆಯ ಸಹಚರರು 5 ಕೋಟಿ ರೂಪಾಯಿ ಹಣವನ್ನು ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಕರ್ನಾಟಕ ಕಾಂಗ್ರೆಸ್‌, 'ಬಿಜೆಪಿಯ ಟಿಕೆಟ್ ಹಗರಣದಲ್ಲಿ ಹಲವು ತಿಮಿಂಗಿಲಗಳ ಹೆಸರು ಬಹಿರಂಗವಾಗುತ್ತಿದೆ. ಬಿಜೆಪಿಯ ಬಾಡಿಗೆ ಭಾಷಣಕಾರರು, ಖಾವಿ ವೇಷದಾರಿ ವಂಚಕರು ಇದರಲ್ಲಿ ತಳುಕು ಹಾಕಿಕೊಂಡಿದ್ದಾರೆ' ಎಂದು ವಾಗ್ದಾಳಿ ನಡೆಸಿದೆ.

ಮಾಜಿ ಸಚಿವ ಸುನೀಲ್‌ ಕುಮಾರ್‌ ಹೆಸರು ಬಹಿರಂಗವಾದ ನಂತರ ಸಿಟಿ ರವಿ ಅವರಿಗೆ ಈ ವಂಚನೆಯ ಸಂಗತಿ ಮೊದಲೇ ಗೊತ್ತಿತ್ತು. ಬಿಜೆಪಿಗೂ ಪಕ್ಷಕ್ಕೂ ಗೊತ್ತಿತ್ತು ಎಂಬ ಸತ್ಯ ಹೊರಬಿದ್ದಿದೆ ಎಂದು ಕಾಂಗ್ರೆಸ್‌ ಹೇಳಿದೆ.

bjp-mla-ticket-scam

'ಹಣದ ಅಕ್ರಮ ವಹಿವಾಟು ನಡೆದಿದ್ದು, ಪಕ್ಷದ ಹೆಸರಲ್ಲಿ ಅಕ್ರಮ ನಡೆದಿದ್ದರೂ, ಹಣದ ವಂಚನೆ ನಡೆದಿದ್ದರೂ ಸಿ ಟಿ ರವಿ ಸುಮ್ಮನಿದ್ದಿದ್ದು ಏಕೆ? ಆ ಮೌನದಲ್ಲಿ ಇನ್ನೂ ಹೆಚ್ಚಿನ ನಿಗೂಢತೆ ಇದೆಯೇ?' ಕಾಂಗ್ರೆಸ್‌ ಪ್ರಶ್ನಿಸಿದೆ.

'ಎಲ್ಲಾ ಅಕ್ರಮಗಳೂ ಬಿಜೆಪಿ ಹೆಸರಲ್ಲೇ ನಡೆಯುವುದೇಕೆ? ಎಲ್ಲಾ ಭ್ರಷ್ಟರು, ವಂಚಕರಿಗೆ ಬಿಜೆಪಿಯೇ ಪ್ರಿಯವಾಗುವುದೇಕೆ? ಬಿಜೆಪಿಯ ಕೇಂದ್ರ ಸಮೀಕ್ಷೆ ತಂಡ ಎಂದುಕೊಂಡು ಮತ್ತೊಬ್ಬ ಟಿಕೆಟ್ ಅಕ್ಷಾಂಕ್ಷಿಗೆ ವಂಚಿಸಿದ್ದು ಬೆಳಕಿದೆ ಬಂದಿದೆ. ಇಷ್ಟೆಲ್ಲಾ ವಂಚನೆಯ ಹಗರಣಗಳು ಹೊರಬರುತ್ತಿದ್ದರೂ ಬಿಜೆಪಿ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳದಿರುವುದೇಕೆ? ಇವೆಲ್ಲದರ ಹಿಂದೆ ದೊಡ್ಡ ಕುಳಗಳು ಇದ್ದಾರೆಯೇ?' ಎಂದು ಕೇಳಿದೆ.

'ಬಿಜೆಪಿಯ ಟಿಕೆಟ್ ಹಗರಣದಲ್ಲಿ ದಿನಕ್ಕೊಂದೊಂದು ಹೆಸರು ಹೊರಬರುತ್ತಿವೆ. ಚೈನ್ ಚೈತ್ರಳ ಆಡಿಯೋದಲ್ಲಿ ಮಾಜಿ ಸಚಿವ ಸುನಿಲ್ ಕುಮಾರ್ ಅವರ ಹೆಸರು ಪ್ರಸ್ತಾಪವಾಗಿದೆ. ಸುನಿಲ್ ಕುಮಾರ್ ಅವರಿಗೂ ಚೈತ್ರಳಿಗೂ ಈ ಹಗರಣದಲ್ಲಿ ಇರುವ ಸಂಬಂಧವೇನು ಎಂಬುದು ಇನ್ನೂ ನಿಗೂಢ. ಬಿಜೆಪಿ ನಾಯಕರ ಹೆಸರುಗಳು ಕೇಳಿಬಂದರೂ ಬಿಜೆಪಿ ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುತ್ತಿರುವುದೇಕೆ? ಪಕ್ಷದ ಹೆಸರಲ್ಲೇ ವಂಚನೆ ನಡೆದಿದ್ದರೂ ಬಿಜೆಪಿ ದೂರು ದಾಖಲಿಸದೆ ಸುಮ್ಮನಿರುವುದೇಕೆ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.

ಬಿಎಸ್‌ವೈಗೆ ಚಾಟಿ ಬೀಸಿದ ಕೆಪಿಸಿಸಿ

'ವಿಧಾನ ಸಭೆಯ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಬಿಜೆಪಿ ಅಧ್ಯಕ್ಷನ ಆಯ್ಕೆಯಾಗಿಲ್ಲ. ಟಿಕೆಟ್ ಮಾರಾಟದ ಹಗರಣಗಳು ಹೊರಬರುತ್ತಿವೆ. ಆಂತರಿಕ ಕಿತ್ತಾಟ ತಾರಕಕ್ಕೇರಿದೆ. ಹೈಕಮಾಂಡ್ ನಾಯಕರು ತಿರುಗಿಯೂ ನೋಡ್ತಿಲ್ಲ. ಬಿಎಸ್‌ ಯಡಿಯೂರಪ್ಪ ಅವರೇ, ತಾವು ಈ ಇಳಿವಯಸ್ಸಲ್ಲಿ ಸರ್ಕಾರದ ವಿರುದ್ಧ ಹೋರಾಡುತ್ತೇನೆ ಎಂದು ಪ್ರವಾಸ ಹೊರಡುವ ಬದಲು ಮುಳುಗುತ್ತಿರುವ ನಿಮ್ಮ ಪಕ್ಷವನ್ನು ಎತ್ತಿ ನಿಲ್ಲಿಸಲು ಪ್ರಯತ್ನಿಸುವುದು ಒಳ್ಳೆಯದು' ಎಂದು ಕಾಂಗ್ರೆಸ್‌ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+