ಇಂತಹ ಹ... ಕೆಲಸವನ್ನು ಫಯಾಜ್, ಸಲೀಂ, ಸಲ್ಮಾನೇ ಮಾಡೋದು: ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?
ವಿಜಯಪುರ, ಏಪ್ರಿಲ್ 26: ಹುಬ್ಬಳ್ಳಿಯ ಖಾಸಗಿ ಕಾಲೇಜಿನ ಕ್ಯಾಂಪಸ್‌ನಲ್ಲಿ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹಾಳನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಕೊಲೆ ಪ್ರಕರಣದ ಸಂಬಂಧ ಆರೋಪಿ ಫಯಾಜ್ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನೇಹಾ ತಾಯಿಯ ಎದುರಿಗೆ ಫಯಾಜ್ ಚಾಕುವಿನಿಂದ ಇರಿದು ನೇಹಾಳನ್ನು ಕೊಲೆ ಮಾಡಿದ್ದಾನೆ. ಇಂಥ ಕೆಲಸವನ್ನು ಫಯಾಜ್, ಸಲಿಂ, ಸಲ್ಮಾನ್ ಇಂಥವರೇ ಮಾಡೋದು, ಕಲ್ಲಪ್ಪ, ಮಲ್ಲಪ್ಪ ಇಂಥ ಹಲಕಾ ಕೆಲಸ ಮಾಡಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ನೇಹಾ ಹಿರೇಮಠ ಕೊಲೆ ವೈಯಕ್ತಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ, ನೇಹಾ - ಫಯಾಜ್ ನಡುವೆ ಲವ್ ಅಫೇರ್ ಇತ್ತು ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ನೇಹಾ ಕೊಲೆಯನ್ನು ಆಕಸ್ಮಿಕ ಘಟನೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದು, ನಿನ್ನ ಮಗಳಿಗೆ ಆಗಿದ್ದರೆ ಆಕಸ್ಮಿಕ ಘಟನೆ ಎನ್ನುತ್ತಿದ್ಯಾ? ಎಂದುಯತ್ನಾಳ್ ಪ್ರಶ್ನಿಸಿದ್ದು, ನಿನ್ನ ಮನೆಯಲ್ಲಿ ಪೂಜೆಯನ್ನು ಮಾಡ್ತಿ, ರೋಜಾನೂ ಮಾಡ್ತಿ, ಯಾಕಂದ್ರೆ ಶೇ.75ರಷ್ಟು ಆ ಕಡೆ ಹೋಗಿಬಿಟ್ಟೇ ಎಂದು ವಾಗ್ದಾಳಿ ನಡೆಸಿದರು.
ಇನ್ನೂ ಇನ್ನೊಬ್ಬ ನಮ್ಮ ಜಿಲ್ಲೆಯ ಸಚಿವ ಇದ್ದಾನೆ ಯಾರು ಅಂತ ಗೊತ್ತಾಯ್ತಲ್ಲ. ಆತ ಸಿಂದಗಿಯಲ್ಲಿ ಪಂಚಮಸಾಲಿ ಸಮಾಜದ ಮೀಟಿಂಗ್ ಮಾಡಿ ಕಾಂಗ್ರೆಸ್‌ಗೆ ಪಂಚಮಸಾಲಿ ಮತ ಹಾಕಬೇಕೆಂದು ಹೇಳಿದ್ದಾನೆ. ಪಂಚಮಸಾಲಿಗಳ ಮತ ಕೇಳಲು ನಿನಗೆ ಏನು ನೈತಿಕತೆ ಇದೆ ಎಂದು ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಾನಂದ ಪಾಟೀಲ್ ವ್ಯಾಪಾರ ಮಾಡುತ್ತಿದ್ದಾರೆ.
ಸಿಂದಗಿ ಕ್ಷೇತ್ರದಲ್ಲಿ ನಿಲ್ಲುತ್ತೇನೆಂದು ಮನಗೂಳಿ ಅವರ ಬಳಿ ಸೂಟಕೇಸ್ ಒಯ್ಯೋದು, ಮುದ್ದೇಬಿಹಾಳ ಕ್ಷೇತ್ರದಲ್ಲಿ ನಿಲ್ಲುತ್ತೇನೆಂದು ಅಲ್ಲಿ ಸೂಟ್ ಕೇಸ್ ಒಯ್ಯೋದು, ಬಬಲೇಶ್ವರ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಹೇಳುವುದು, ಅದಕ್ಕೆ ಎಂಬಿ ಪಾಟೀಲ್ ಥರ ಥರ ನಡುಗಿ ಅವರ ಬಳಿ ಹಣ ಕೀಳೋದು, 2018ರಲ್ಲಿ ನನಗೂ ಅಂದಿದ್ದ ನಾನು ವಿಜಯಪುರ ನಗರದಲ್ಲಿ ಸ್ಪರ್ಧೆ ಮಾಡಲು ಚಿಂತನೆ ಮಾಡುತ್ತೇನೆಂದಿದ್ದ, ಯಾವ ಯಾವ ಹನುಮಂತಗಳು ಇದ್ದೀರಿ ಬಂದು ನಿಂತುಬಿಡಿ ಎಂದು ನಾನು ಹೇಳಿದ್ದೆ ಎಂದು ತಿಳಿಸಿದರು.












Click it and Unblock the Notifications