ಮೋದಿ ಸರ್ಕಾರದಲ್ಲಿ ಹಳೇ ಖದರ್ ಇರಲ್ಲ.. ಇವರ ಮಾತೇ ಶಾಸನ!
ಪ್ರಧಾನಿ ಮೋದಿ ಅವರು 3ನೇ ಬಾರಿಗೆ ಭಾರತದ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಹೀಗಿದ್ದಾಗ ಪ್ರಧಾನಿ ಮೋದಿ ಈ ಹಿಂದೆ ನಡೆಸಿದ ಸರ್ಕಾರಕ್ಕೂ & ಈಗ ನಡೆಸುತ್ತಿರುವ ಸರ್ಕಾರಕ್ಕೂ ಭಾರಿ ವ್ಯತ್ಯಾಸ ಇದೆ. ಅದರಲ್ಲೂ ನಿತೀಶ್ & ನಾಯ್ಡು ಅವರ ಮಾತು ಮೀರಿ ಮೋದಿ ಸರ್ಕಾರ ಬೇರೆ ಏನನ್ನೂ ಮಾಡಲು ಆಗಲ್ಲ ಎನ್ನುವ ಸ್ಥಿತಿ, ಇದೀಗ ನಿರ್ಮಾಣ ಆಗಿದೆ.
ಅದರಲ್ಲೂ ಈಗಿನ ಪರಿಸ್ಥಿತಿ ನೋಡಿದರೆ, ಮುಂದಿನ ದಿನಗಳಲ್ಲಿ ನಿತೀಶ್ ಮತ್ತು ನಾಯ್ಡು ಮೇಲೆ ಮೋದಿ ಸರ್ಕಾರ ಸಂಪೂರ್ಣ ಅವಲಂಬಿತ ಆಗುವ ಸಾಧ್ಯತೆ ದಟ್ಟವಾಗಿದೆ. ಕಳೆದ 2 ಅವಧಿಯಲ್ಲಿ ಮೋದಿ ಸರ್ಕಾರ ಭರ್ಜರಿ ಅಧಿಕಾರ ಅನುಭವಿಸಿತ್ತು. ಆದರೆ ಈ ಬಾರಿ ಸ್ಥಿತಿ ಉಲ್ಟಾ ಆಗಿದೆ, ಕೇಂದ್ರದಲ್ಲಿ ಮತ್ತೊಮ್ಮೆ ಸಮ್ಮಿಶ್ರ ಸರ್ಕಾರ ಬಂದಿದೆ. ಹೀಗಾಗಿಯೇ ಭಾರಿ ಕುತೂಹಲ ಮೂಡಿದ್ದು, ಸರ್ಕಾರದಲ್ಲಿ ಯಾವುದೇ ಕಿರಿಕ್ ಶುರುವಾಗದ ರೀತಿ ಬಿಜೆಪಿ ಈಗ ಮುನ್ನೆಚ್ಚರಿಕೆ ಕೈಗೊಂಡಿದೆ. ಆದರೆ ಸಚಿವ ಸ್ಥಾನಕ್ಕೆ ಒಂದಷ್ಟು ಕಿರಿಕ್ ನಡೆಯುವ ಆತಂಕ ಈಗಲೂ ಇದೆ.

ಸಚಿವ ಸ್ಥಾನಕ್ಕೆ ಕಿರಿಕ್ ಗ್ಯಾರಂಟಿ?
ಹೌದು, ಈಗಿನ ಪರಿಸ್ಥಿತಿ ಅವಲೋಕನ ಮಾಡಿ ಹೇಳುವುದಾದರೆ ಮುಂದಿನ ದಿನಗಳಲ್ಲಿ ಈ ಸರ್ಕಾರದಲ್ಲಿ ಭರ್ಜರಿ ತಿಕ್ಕಾಟ ನಡೆಯುವ ಆತಂಕ ಇದೆ. ಯಾಕಂದ್ರೆ? ಈಗಾಗಲೇ ಸಚಿವ ಸ್ಥಾನಕ್ಕೆ ಬಿಜೆಪಿ ಮಿತ್ರ ಪಕ್ಷಗಳು ಭರ್ಜರಿ ಡಿಮ್ಯಾಂಡ್ ಇಟ್ಟಿವೆ. ಅದರಲ್ಲೂ ಪ್ರಮುಖವಾದ ಖಾತೆಗಳನ್ನೇ ಕೇಳುತ್ತಿವೆ. ಹೀಗಾಗಿ ಅದನ್ನೆಲ್ಲಾ ನಿಭಾಯಿಸುವುದು ಮೋದಿ ಸರ್ಕಾರಕ್ಕೆ ಭಾರಿ ದೊಡ್ಡ ಸವಾಲು ಆಗಲಿದೆ. ಮುಂದಿನ ಪರಿಸ್ಥಿತಿಯಲ್ಲಿ ಇದು ಇನ್ನಷ್ಟು ವಿಕೋಪಕ್ಕೆ ಕೂಡ ಹೋಗುವ ಸಾಧ್ಯತೆ ದಟ್ಟವಾಗಿದೆ.
400 ಸ್ಥಾನಗಳ ಗುರಿ ಹೊಂದಿತ್ತು!
ಬಿಜೆಪಿ 400 ಸ್ಥಾನಗಳಲ್ಲಿ ಗೆದ್ದು ಬೀಗುವ ವಿಶ್ವಾಸ ಹೊಂದಿತ್ತು ಕೇವಲ 2 ತಿಂಗಳ ಹಿಂದೆ 2024ರ ಲೋಕಸಭೆ ಚುನಾವಣೆ ಶುರುವಾದ ಸಮಯದಲ್ಲಿ, ಬಿಜೆಪಿಗೆ ಧೈರ್ಯ ಇತ್ತು. ಈ ಬಾರಿ ಹೊಸ ದಾಖಲೆ ನಿರ್ಮಾಣ ಮಾಡಿ 400 ಸ್ಥಾನಗಳಲ್ಲಿ ಜಯ ಸಾಧಿಸುವ ಗುರಿ ಇಟ್ಟುಕೊಂಡಿದ್ದರು ಬಿಜೆಪಿ ನಾಯಕರು. ಆದ್ರೆ ಈಗ ಆಗಿರುವುದೇ ಬೇರೆ, ಬಿಜೆಪಿ 400 ಸ್ಥಾನಗಳನ್ನು ಗೆಲ್ಲುವುದು ಬಿಡಿ ಈಗಿನ ಸ್ಥಿತಿ ನೋಡಿದರೆ ಸ್ವತಂತ್ರ ಸರ್ಕಾರ ರಚನೆ ಮಾಡುವುದು ಕಷ್ಟವಾಗಿದೆ. ಹೀಗಿದ್ದಾಗ, ಎನ್‌ಡಿಎ ಕೂಟದ ಮಿತ್ರ ಪಕ್ಷಗಳನ್ನ ನಿಭಾಯಿಸುವುದು ಕೂಡ ಕಷ್ಟವಾಗುತ್ತಿದೆ.












Click it and Unblock the Notifications