BJP Manifesto 2023: ಬಿಜೆಪಿಯ ಚುನಾವಣಾ ಪ್ರಣಾಳಿಕೆಯ 16 ಪ್ರಮುಖ ಭರವಸೆಗಳನ್ನು ತಿಳಿಯಿರಿ

ಬೆಂಗಳೂರು, ಮೇ 01: ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ, ಬಿಜೆಪಿಯು 16 ಪ್ರಮುಖ ಭರವಸೆಗಳನ್ನು ಬಿಡುಗಡೆ ಮಾಡಲಾಯಿತು.

ಬಿಜೆಪಿ ಚುನಾವಣಾ ಪ್ರಣಾಳಿಕೆಯ 16 ಪ್ರಮುಖ ಭರವಸೆಗಳು

1- ಯುಗಾದಿ, ಗಣೇಶ ಚತುರ್ಥು ಮತ್ತು ದೀಪಾವಳಿ ತಿಂಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು.

2- ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುವುದು

BJP Election Manifesto For Karnataka Assembly Poll 2023: Key Promises- What are those

3- ರಾಜ್ಯದಾದ್ಯಂತ ಕೈಗೆಟುಕುವ ಮತ್ತು ಗುಣಮಟ್ಟದ ಆಹಾರವನ್ನು ಒದಗಿಸಲು ಪ್ರತಿ ಮುನ್ಸಿಪಲ್ ಕಾರ್ಪೊರೇಷನ್‌ನ ಪ್ರತಿ ವಾರ್ಡ್‌ನಲ್ಲಿ ಅಟಲ್ ಆಹಾರ ಕೇಂದ್ರ ಸ್ಥಾಪನೆ.

4- ಸರ್ವರಿಗೂ ಸೂರು ಯೋಜನೆ ಅಡಿಯಲ್ಲಿ ವಸತಿ ರಹಿತರಿಗೆ 10 ಲಕ್ಷ ಮನೆ ನೀಡಲಾಗುವುದು

5- ಒನಕೆ ಓಬವ್ವ ಸಾಮಾಜಿಕ ನ್ಯಾಯ ನಿಧಿ ಯೋಜನೆಯಡಿಯಲ್ಲಿ ಎಸ್‌ಸಿ/ಎಸ್‌ಟಿ ಮಹಿಳೆಯರು ಮಾಡಿದ ಐದು ವರ್ಷಗಳ ಸ್ಥಿರ ಠೇವಣಿಗಳ ಮೇಲೆ ರೂ 10,000 ವರೆಗೆ ಹೊಂದಾಣಿಕೆಯ ಠೇವಣಿ ನೀಡಲಾಗುವುದು.

6- ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ, 1972 ಅನ್ನು ಸುಧಾರಿಸಲು ಮತ್ತು ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಆಧುನೀಕರಿಸಲು ಕರ್ನಾಟಕ ನಿವಾಸಿಗಳ ಕಲ್ಯಾಣ ಸಮಾಲೋಚನಾ ಸಮಿತಿಯನ್ನು ರಚಿಸಲಾಗುವುದು

7- ವಿಶ್ವೇಶ್ವರಯ್ಯ ವಿದ್ಯಾ ಯೋಜನೆ ಅಡಿಯಲ್ಲಿ ಸರ್ಕಾರಿ ಶಾಲೆಗಳ ಸಮಗ್ರ ಉನ್ನತೀಕರಣಕ್ಕಾಗಿ ಸರ್ಕಾರವು ಪ್ರಸಿದ್ಧ ವ್ಯಕ್ತಿಗಳು ಮತ್ತು ಸಂಸ್ಥೆಗಳೊಂದಿಗೆ ಪಾಲುದಾರಿಕೆ ಹೊಂದಲಿದೆ.

8- ಐಎಎಸ್/ಕೆಎಎಸ್/ಬ್ಯಾಂಕಿಂಗ್/ಸರ್ಕಾರಿ ಉದ್ಯೋಗಗಳಿಗೆ ತರಬೇತಿ ಪಡೆಯಲು ಯುವಕರಿಗೆ ಆರ್ಥಿಕ ಪ್ರೋತ್ಸಾಹ ಧನ ನೀಡಲಾಗುವುದು.

9- ಹಿರಿಯ ನಾಗರಿಕರಿಗೆ ಉಚಿತ ವಾರ್ಷಿಕ ಮಾಸ್ಟರ್ ಆರೋಗ್ಯ ತಪಾಸಣೆ

BJP Election Manifesto For Karnataka Assembly Poll 2023: Key Promises- What are those

10- 'ರಾಜ್ಯ ರಾಜಧಾನಿ ಪ್ರದೇಶ' ಎಂದು ಗೊತ್ತುಪಡಿಸುವ ಮೂಲಕ ಬೆಂಗಳೂರನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಸಮಗ್ರ, ತಂತ್ರಜ್ಞಾನ-ನೇತೃತ್ವದ ನಗರ ಅಭಿವೃದ್ಧಿ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುವುದು.

11- ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಮೂಲಕ, 1,000 ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲಾಗುವುದು.

12- ಬಿಎಂಟಿಸಿ ಬಸ್‌ಗಳನ್ನು ಸಂಪೂರ್ಣ ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತಿಸಲಾಗುವುದು. ಬೆಂಗಳೂರಿನ ಹೊರವಲಯದಲ್ಲಿ 'ಇವಿ ಸಿಟಿ' ರಚಿಸುವ ಮೂಲಕ ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳ ಪ್ರಧಾನ ಕೇಂದ್ರವಾಗಿ ಪರಿವರ್ತಿಸುತ್ತದೆ.

13- ರೂ 30,000 ಕೋಟಿ ಕೆ-ಅಗ್ರಿ ಫಂಡ್ ಮೈಕ್ರೋ-ಕೋಲ್ಡ್ ಸ್ಟೋರೇಜ್ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು. ಎಲ್ಲಾ ಜಿಪಿಗಳಲ್ಲಿ ಕೃಷಿ ಸಂಸ್ಕರಣಾ ಘಟಕಗಳು, ಐದು ಹೊಸ ಕೃಷಿ-ಕೈಗಾರಿಕೆ ಕ್ಲಸ್ಟರ್‌ಗಳನ್ನು ಮತ್ತು ಮೂರು ಹೊಸ ಆಹಾರ ಸಂಸ್ಕರಣಾ ಪಾರ್ಕ್‌ಗಳನ್ನು ಸ್ಥಾಪಿಸಲು.

14- ಅತ್ಯಾದುನಿಕ ಸೌಲಭ್ಯಗಳನ್ನು ಒದಗಿಸಿ ಕರ್ನಾಟಕವನ್ನು ಪ್ರಮುಖ ಪ್ರವಾಸಿ ಕೇಂದ್ರವನ್ನಾಗಿ ಮಾಡಲಾಗುವುದು. ಕಲ್ಯಾಣ ಸರ್ಕ್ಯೂಟ್‌, ಬನವಾಸಿ ಸರ್ಕ್ಯೂಟ್‌, ಪರಶುರಾಮ ಸರ್ಕ್ಯೂಟ್‌ ಮತ್ತು ಗಾಣಿಗಾಪುರ ಸರ್ಕ್ಯೂಟ್‌ ಅನ್ನು ಅಭಿವೃದ್ದಿಪಡಿಸಲು 1500 ಕೋಟಿ ರೂಪಾಯಿಗಳನ್ನು ನೀಡಲಾಗುವುದು.

15- ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು. ಇವುಗಳನ್ನು ಬೆಂಗಳೂರಿನಾಚೆಗೆ ಲಾಜಿಸ್ಟಿಕ್‌, ಕೈಗಾರಿಕಾ ಕ್ಲಸ್ಟರ್‌ಗಳಿಗೆ ಸಂಯೋಜಿಸಿ 'ಉತ್ಪಾದನಾ ವಲಯ ಆಧಾರಿತ ಪ್ರೋತ್ಸಾಹ' ಯೋಜನೆಯ ವ್ಯಾಪ್ತಿಯನ್ನು ವಿಸ್ತಿರಿಸಲಾಗುವುದು.

16- 'ಮಿಷನ್‌ ಸ್ವಾಸ್ಥ್ಯ ಕರ್ನಾಟಕದ ಅಡಿ' ಸರ್ಕಾರ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿನ ಮೂಲಸೌಕರ್ಯಗಳನ್ನು ಸುಧಾರಿಸಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+