ಬಿಜೆಪಿ ಪಟ್ಟಿ ನಾಳೆ ಫೈನಲ್; ಏ.10ಕ್ಕೆ 100 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ?: ಟಿಕೆಟ್ ಯಾರಿಗುಂಟು ಯಾರಿಗಿಲ್ಲ!?
ಬೆಂಗಳೂರು,ಏಪ್ರಿಲ್ 8: ವಿಧಾನಸಭಾ ಚುನಾವಣಾಗೆ ಭರ್ಜರಿ ತಯಾರಿ ನಡೆಸುತ್ತಿರುವ ರಾಜಕೀಯ ಪಕ್ಷಗಳ ನಡುವೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲಿಯೂ ಟೀಕೆ ಟಿಪ್ಪಣಿಗಳು ಜೋರಾಗಿವೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ನಾಯಕತ್ವದ ಕೊರತೆ ಎಂದು ಕಾಂಗ್ರೆಸ್ ಪಕ್ಷವೂ ಬಿಜೆಪಿ ನಾಯಕರ ವಿರುದ್ದ ವ್ಯಂಗ್ಯವಾಡಿದ್ದು, ಕೊನೆಗೂ ಆಡಳಿತರೂಢ ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಭಾನುವಾರ ರಾತ್ರಿ ಅಂತಿಮಗೊಳ್ಳಲಿದೆ.

ಇನ್ನೂ ವಿವಿಧ ಕಾರ್ಯಕ್ರಮಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ಪ್ರವಾಸದಲ್ಲಿರುವುದರಿಂದ ಭಾನುವಾರ ಸಂಜೆ ದೆಹಲಿಗೆ ವಾಪಸಾಗಲಿದ್ದಾರೆ. ಹೀಗಾಗಿ, ಭಾನುವಾರ ರಾತ್ರಿ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸಭೆ ನಡೆದು ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸಲಾಗುತ್ತದೆ. ಸೋಮವಾರ ಪಟ್ಟಿಪ್ರಕಟಗೊಳಿಸುವ ಸಂಭವವಿದೆ ಎಂದು ಉನ್ನತ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
2018 ರಲ್ಲಿ ನಾಲ್ಕು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದ ಬಿಜೆಪಿ ಈ ಬಾರಿ ಮೂರು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಲು ಚಿಂತನೆ ನಡೆಸಿದದ್ದು, ಮೊದಲ ಪಟ್ಟಿಯಲ್ಲಿ 100 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನ ಬಿಡುಗಡೆ ಮಾಡಲಿದೆ. ಇನ್ನೂ ಮೊದಲ ಪಟ್ಟಿಯಲ್ಲಿ ಹಾಲಿ ಶಾಸಕರಿಗೆ ಮಣೆ ಹಾಕುವಂತಹ ಸಾಧ್ಯತೆ ಹೆಚ್ಚಾಗಿದೆ.

ಈ ನಡುವೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಸೇರಿದಂತೆ ಹಲವು ರಾಜ್ಯ ನಾಯಕರು ಶುಕ್ರವಾರ ಸಂಜೆ ದೆಹಲಿ ತಲುಪಿದರು. ಅದರ ಬೆನ್ನಲ್ಲೇ ಕೆಲಹೊತ್ತು ಪಕ್ಷದ ರಾಷ್ಟ್ರೀಯ ನಾಯಕರೊಂದಿಗೆ ಸಮಾಲೋಚನೆಯನ್ನೂ ನಡೆಸಿದರು.
ಶನಿವಾರ ಹಾಗೂ ಭಾನುವಾರದ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಸರಣಿ ಸಭೆಗಳು ನಡೆಯಲಿದ್ದು, ಈ ವೇಳೆ 75 ವರ್ಷ ವಯಸ್ಸಾದವರಿಗೆ ಟಿಕೆಟ್ ನೀಡಬೇಕೆ ಅಥವಾ ಬೇಡವೆ? ಮೂರು ಅಥವಾ ಅದಕ್ಕೂ ಹೆಚ್ಚು ಬಾರಿ ಶಾಸಕರಾದವರನ್ನು ಕೈಬಿಟ್ಟು ಹೊಸ ಮುಖಗಳಿಗೆ ಅವಕಾಶ ನೀಡಬೇಕೆ ಅಥವಾ ಬೇಡವೆ ಎಂಬಿತ್ಯಾದಿ ಅಂಶಗಳ ಬಗ್ಗೆ ಚರ್ಚೆ ನಡೆದು ಸ್ಪಷ್ಟನಿಲುವು ಕೈಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ
ನಿಪ್ಪಾಣಿ: ಶಶಿಕಲಾ ಜೊಲ್ಲೆ
ಕುಡಚಿ (SC): ಪಿ.ರಾಜೀವ್
ರಾಯಬಾಗ (SC): ದುರ್ಯೋಧನ ಮಹಾಲಿಂಗಪ್ಪ ಐಹೊಳೆ
ಅರಭಾವಿ:ಬಾಲಚಂದ್ರ ಜಾರಕಿಹೊಳಿ
ಗೋಕಾಕ್: ರಮೇಶ್ ಜಾರಕಿಹೊಳಿ
ಬೆಳಗಾವಿ ಉತ್ತರ : ಅನಿಲ್ ಎಸ್ ಬೆನಕೆ
ಬೆಳಗಾವಿ ದಕ್ಷಿಣ : ಅಭಯ ಪಾಟೀಲ
ಕಿತ್ತೂರು: ಮಹಾಂತೇಶ್ ದೊಡ್ಡಗೌಡರ್
ರಾಮದುರ್ಗ: ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ
ಮುಧೋಳ (SC): ಗೋವಿಂದ ಎಂ. ಕಾರಜೋಳ
ತೇರದಾಳ: ಸಿದ್ದು ಸವದಿ
ಬಿಳಗಿ : ಮುರುಗೇಶ್ ನಿರಾಣಿ
ಬಾಗಲಕೋಟೆ : ವೀರಣ್ಣ ಚರಂತಿಮಠ
ಹುನಗುಂದ: ದೊಡ್ಡನಗೌಡ ಪಾಟೀಲ
ಮುದ್ದೇಬಿಹಾಳ: ಎ.ಎಸ್ ಪಾಟೀಲ್ ನಡಹಳ್ಳಿ
ದೇವರ ಹಿಪ್ಪರಗಿ: ಸೋಮನಗೌಡ ಬಿ ಪಾಟೀಲ್ ಸಾಸನೂರ
ಬಿಜಾಪುರ ನಗರ: ಬಸನಗೌಡ ಪಾಟೀಲ್ ಯತ್ನಾಳ್
ಸಿಂದಗಿ: ರಮೇಶ ಭೂಸನೂರು
ಸುರಪುರ (ST): ರಾಜುಗೌಡ
ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್
ಸೇಡಂ: ರಾಜಕುಮಾರ್ ಪಾಟೀಲ್
ಗುಲ್ಬರ್ಗ ಗ್ರಾಮಾಂತರ (SC): ಬಸವರಾಜ ಮತ್ತಿಮೂಡ್
ಗುಲ್ಬರ್ಗ ದಕ್ಷಿಣ: ದತ್ತಾತ್ರೇಯ ಸಿ.ಪಾಟೀಲ
ಆಳಂದ: ಸುಭಾಷ್ ಗುತ್ತೇದಾರ್
ಔರಾದ್ (SC) : ಪ್ರಭು ಚೌಹಾಣ್
ರಾಯಚೂರು: ಡಾ.ಶಿವರಾಜ್ ಪಾಟೀಲ್
ದೇವದುರ್ಗ (ಎಸ್‌ಟಿ): ಶಿವನಗೌಡ ನಾಯಕ್
ಗಂಗಾವತಿ: ಪರಣ್ಣ ಮುನವಳ್ಳಿ
ಯಲಬುರ್ಗಾ: ಹಾಲಪ್ಪ ಆಚಾರ್
ಶಿರಹಟ್ಟಿ (SC): ರಾಮಪ್ಪ ಲಮಾಣಿ
ರೋಣ: ಕಳಕಪ್ಪ ಬಂಡಿ
ನರಗುಂದ: ಸಿಸಿ ಪಾಟೀಲ್
ನವಲಗುಂದ: ಶಂಕರ ಪಾಟೀಲ ಮುನೇನಕೊಪ್ಪ
ಧಾರವಾಡ: ಅಮೃತ್ ದೇಸಾಯಿ
ಹುಬ್ಬಳ್ಳಿ-ಧಾರವಾಡ ಕೇಂದ್ರ: ಜಗದೀಶ್ ಶೆಟ್ಟರ್
ಹುಬ್ಬಳ್ಳಿ-ಧಾರವಾಡ ಪಶ್ಚಿಮ: ಅರವಿಂದ ಬೆಲ್ಲದ್
ಕಲಘಟಗಿ : ಸಿಎಂ ನಿಂಬಣ್ಣನವರ್
ಕಾರವಾರ : ರೂಪಾಲಿ ನಾಯ್ಕ್
ಕುಮಟಾ: ದಿನಕರ ಶೆಟ್ಟಿ
ಭಟ್ಕಳ : ಸುನೀಲ್ ನಾಯ್ಕ
ಸಿರ್ಸಿ : ವಿಶ್ವೇಶ್ವರ ಹೆಗಡೆ ಕಾಗೇರಿ
ಶಿಗ್ಗಾಂವ್ : ಬಸವರಾಜ ಬೊಮ್ಮಾಯಿ
ಬ್ಯಾಡಗಿ : ವಿರೂಪಾಕ್ಷಪ್ಪ ಬಳ್ಳಾರಿ
ಹಿರೇಕೆರೂರು : ಬಿ.ಸಿ ಪಾಟೀಲ್ -
ವಿಜಯನಗರ : ಆನಂದ್ ಸಿಂಗ್
ಸಿರುಗುಪ್ಪ (ಎಸ್‌ಟಿ) : ಎಂ.ಎಸ್.ಸೋಮಲಿಂಗಪ್ಪ
ಬಳ್ಳಾರಿ ನಗರ : ಜಿ.ಸೋಮಶೇಖರ ರೆಡ್ಡಿ
ಚಿತ್ರದುರ್ಗ : ಜಿ.ಎಚ್.ತಿಪ್ಪಾರೆಡ್ಡಿ
ಹೊಸದುರ್ಗ: ಗೂಳಿಹಟ್ಟಿ ಡಿ.ಶೇಖರ್
ಜಗಳೂರು (ಎಸ್‌ಟಿ) : ಎಸ್ ವಿ ರಾಮಚಂದ್ರ
ಹೊನ್ನಾಳಿ : ಎಂ.ಪಿ.ರೇಣುಕಾಚಾರ್ಯ
ಶಿವಮೊಗ್ಗ ಗ್ರಾಮಾಂತರ (SC) : ಕೆ ಬಿ ಅಶೋಕ್ ನಾಯ್ಕ್
ತೀರ್ಥಹಳ್ಳಿ : ಆರಗ ಜ್ಞಾನೇಂದ್ರ
ಶಿಕಾರಿಪುರ : ಬಿ.ವೈ.ವಿಜಯೇಂದ್ರ
ಸೊರಬ : ಕುಮಾರ್ ಬಂಗಾರಪ್ಪ
ಕಾರ್ಕಳ : ವಿ.ಸುನೀಲ್ ಕುಮಾರ್
ತರೀಕೆರೆ : ಡಿ.ಎಸ್ ಸುರೇಶ್
ಕಡೂರು : ಬೆಳ್ಳಿಪ್ರಕಾಶ್
ಚಿಕ್ಕನಾಯಕನಹಳ್ಳಿ : ಜೆಸಿ ಮಾಧುಸ್ವಾಮಿ
ತಿಪಟೂರು : ಬಿ.ಸಿ.ನಾಗೇಶ್
ತುರುವೇಕೆರೆ : ಎಎಸ್ ಜಯರಾಮ್
ತುಮಕೂರು ನಗರ: ಜಿಬಿ ಜ್ಯೋತಿ ಗಣೇಶ್
ಚಿಕ್ಕಬಳ್ಳಾಪುರ : ಡಾ.ಕೆ.ಸುಧಾಕರ್
ಯಲಹಂಕ : ಎಸ್ ಆರ್ ವಿಶ್ವನಾಥ್
ಕೃಷ್ಣರಾಜಪುರಂ : ಬೈರತಿ ಬಸವರಾಜ
ಯಶವಂತಪುರ : ಎಸ್ ಟಿ ಸೋಮಶೇಖರ್
ರಾಜರಾಜೇಶ್ವರಿನಗರ : ಮುನಿರತ್ನ
ಮಹಾಲಕ್ಷ್ಮಿ ಲೇಔಟ್ : ಕೆ.ಗೋಪಾಲಯ್ಯ
ಮಲ್ಲೇಶ್ವರಂ : ಡಾ.ಸಿ.ಎನ್.ಅಶ್ವಥ್ ನಾರಾಯಣ
ಸಿವಿ ರಾಮನ್ ನಗರ (SC) : ಎಸ್.ರಘು
ರಾಜಾಜಿ ನಗರ : ಎಸ್.ಸುರೇಶ್ ಕುಮಾರ್
ಬಸವನಗುಡಿ : LA ರವಿ ಸುಬ್ರಹ್ಮಣ್ಯ
ಪದ್ಮನಾಭನಗರ : ಆರ್.ಅಶೋಕ
ಮಹದೇವಪುರ (SC) : ಅರವಿಂದ ಲಿಂಬಾವಳಿ
ಬೊಮ್ಮನಹಳ್ಳಿ : ಎಂ ಸತೀಶ್ ರೆಡ್ಡಿ
ಬೆಂಗಳೂರು ದಕ್ಷಿಣ: ಎಂ.ಕೃಷ್ಣಪ್ಪ
ಕೆ.ಆರ್ ಪೇಟೆ: ನಾರಾಯಣ ಗೌಡ
ಹಾಸನ : ಪ್ರೀತಂ ಜೆ.ಗೌಡ
ಬೆಳ್ತಂಗಡಿ : ಹರೀಶ್ ಪೂಂಜಾ
ಮಂಗಳೂರು ನಗರ ಉತ್ತರ : ಭರತ್ ಶೆಟ್ಟಿ
ಮಂಗಳೂರು ನಗರ ದಕ್ಷಿಣ : ಡಿ.ವೇದವ್ಯಾಸ್ ಕಾಮತ್
ಬಂಟ್ವಾಳ :ರಾಜೇಶ್ ನಾಯ್ಕ್
ಮಡಿಕೇರಿ : ಅಪ್ಪಚ್ಚು ರಂಜನ್
ವಿರಾಜಪೇಟೆ : ಕೆ ಜಿ ಬೋಪಯ್ಯ
ನಂಜನಗೂಡು (ಎಸ್‌ಸಿ) :ಹರ್ಷವರ್ಧನ್ ಬಿ.
ಕೃಷ್ಣರಾಜ :ಎಸ್.ಎ.ರಾಮದಾಸ್












Click it and Unblock the Notifications