ಬಿಜೆಪಿಯನ್ನು ಸೀಳುನಾಯಿಗೆ ಹೋಲಿಸಿದ ಸಿದ್ದುಗೆ ಬಿಜೆಪಿ ನಾಯಕರ ಗುದ್ದು
ಮೈಸೂರು, ಜೂನ್ 10: ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ಬಗ್ಗೆ ಚರ್ಚೆಯಾಗದ ದಿನಗಳಲ್ಲಿ. ಪ್ರತಿದಿನ ಯಾವುದಾದರೊಂದು ವಿಷಯದ ಬಗ್ಗೆ ಮಾತನಾಡುವ ವೇಳೆ ಕೆಲವೊಮ್ಮೆ ನೇರ ಹೇಳಿಕೆ ಕೊಟ್ಟು ಎದುರಾಳಿಗಳ ಕೆಂಗಣ್ಣಿಗೆ ಗುರಿಯಾಗುತ್ತಾರೆ.
Recommended Video
ಇತ್ತೀಚೆಗೆ ಆರ್‌ಎಸ್‌ಎಸ್ ಚಡ್ಡಿಯನ್ನು ಸುಡುವ ಅಭಿಯಾನ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ್ದ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು ಚಡ್ಡಿಗಳನ್ನು ಸಿದ್ದರಾಮಯ್ಯರ ಕಚೇರಿ ಮತ್ತು ಕೆಪಿಸಿಸಿನ ಕಚೇರಿಗೆ ಚಡ್ಡಿಗಳನ್ನು ಪಾರ್ಸಲ್ ಕಳುಹಿಸಿ ತಿರುಗೇಟು ನೀಡಿದ್ದರು.
ಇದೀಗ ಮೈಸೂರಿನಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರದ ವೇಳೆ, ತಮ್ಮ ಮೇಲೆ ಮುಗಿ ಬೀಳುವ ಬಿಜೆಪಿ ನಾಯಕರನ್ನು ನಾಯಿ, ಸೀಳುನಾಯಿ ಎಂದೆಲ್ಲಾ ಹೇಳಿ ಮತ್ತೆ ವಿವಾದಕ್ಕೆ ಗುರಿಯಾಗಿದ್ದು, ಇದಕ್ಕೆ ಮತ್ತೆ ಬಿಜೆಪಿ ನಾಯಕರು ಟೀಕೆ ಶುರು ಮಾಡಲಾರಂಭಿಸಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ, "ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ನಾನೇನಾದರೂ ಮಾತನಾಡಿದರೆ, ಆ ಕಡೆಯಿಂದ 25 ಜನ ಸೀಳುನಾಯಿಯಂತೆ ನನ್ನ ಮೇಲೆ ಮುಗಿ ಬೀಳುತ್ತಾರೆ. ಆದರೆ ನಮ್ಮ ಕಡೆಯಿಂದ ಯಾರೊಬ್ಬರು ನನ್ನ ಪರ ಮಾತನಾಡಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಸಿದ್ದರಾಮಯ್ಯ ಪರ ನಾವಿದ್ದೇವೆ
ಸಿದ್ದರಾಮಯ್ಯ ಬಿಜೆಪಿಯವರ ನನ್ನ ಮೇಲೆ ಒಗ್ಗಟ್ಟಾಗಿ ಮುಗಿಬಿದ್ದರೂ ನಮ್ಮ ಪಕ್ಷದ ಯಾರೊಬ್ಬರು ಮಾತನಾಡುವುದಿಲ್ಲ ಎಂದು ಹೇಳಿದ ನಂತರ ಪ್ರತಿಕ್ರಿಯೆ ನೀಡಿದ ಶಾಸಕ ಕೃಷ್ಣ ಬೈರೇಗೌಡ, "ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಪಕ್ಷದ ಯಾವುದೇ ಮುಖಂಡರ ವಿರುದ್ಧ ಮಾತನಾಡಿದರೂ ನಾವು ಪ್ರತಿಕ್ರಿಯಿಸಿದ್ದೇವೆ. ಕೆಲವೊಮ್ಮೆ ಉತ್ಸಾಹದಿಂದ ಮಾತನಾಡಿದ್ದೇವೆ. ಕೆಲವೊಮ್ಮೆ ಎಚ್ಚರ ತಪ್ಪಿರಬಹುದು, ಆದರೆ ಅದು ಉದ್ದೇಶ ಪೂರ್ವಕವಲ್ಲ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿದಂತೆ ನಮ್ಮೆಲ್ಲಾ ನಾಯಕರ ಪರವಾಗಿದ್ದೇವೆ, ಮುಗಿ ಬೀಳುವುದು ಆ ಪಕ್ಷದವರ ಕೆಲಸ" ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ನಮ್ಮ ಶಕ್ತಿ
"ಸಿದ್ದರಾಮಯ್ಯ ನಮ್ಮ ಪಕ್ಷದ ಹಿರಿಯ ನಾಯಕ, ಅವರು ನಮ್ಮ ಶಕ್ತಿ. ನಾವೆಲ್ಲರೂ ಯಾವಾಗಲೂ ಅವರೊಟ್ಟಿಗಿದ್ದೇವೆ. ನಾವ್ಯಾರು ಅವರ ಸಹಾಯಕ್ಕೆ ಬರಬೇಕಿಲ್ಲ, ಏಕೆಂದರೆ ಅವರಿಗೆ ಎಲ್ಲರನ್ನೂ ಎದುರಿಸುವ ಶಕ್ತಿ ಇದೆ" ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್ ತಿಳಿಸಿದ್ದಾರೆ.
ಬಿಜೆಪಿಗರನ್ನು ಸೀಳುನಾಯಿಗೆ ಹೋಲಿಕೆ ಮಾಡುತ್ತಿದ್ದಂತೆ ಮತ್ತೆ ಕೆಲವು ಬಿಜೆಪಿ ನಾಯಕರು ಸಿದ್ದರಾಮಯ್ಯರ ವಿರುದ್ಧ ನಾಯಕರು ಟೀಕಾಸ್ತ್ರವನ್ನು ಪ್ರಯೋಗಿಸಿದ್ದಾರೆ.

ಮನಸ್ಥಿತಿಗೆ ಹಿಡಿದ ಕೈಗನ್ನಡಿ
ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಪ್ರತಿಕ್ರಿಯಿಸಿ, " ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿದ ಪಕ್ಷಗಳ ಬಗ್ಗೆ ಇರುವ ಭಾವನೆಯನ್ನು ಶಬ್ಧಗಳ ಮೂಲಕ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಅವರನ್ನು ಯಾರು ಪ್ರಶ್ನೆ ಮಾಡಬಾರದು ಎಂದರೆ, ಅದು ಸರ್ವಾಧಿಕಾರಿ ಧೋರಣೆಯಾಗುತ್ತದೆ, ಅವರೇಳಿದ್ದೇ ವೇದ ವಾಕ್ಯ ಎಂದೇ ನಾವೇನಾದರೂ ಭಾವಿಸಬೇಕಾ? ಪ್ರಜಾಪ್ರಭುತ್ವದಲ್ಲಿ ಚರ್ಚೆಯೇ ತಾಕತ್ತು. ಆದರೆ ಪಕ್ಷದ ವಿರುದ್ಧ ಅವರು ಬಳಸಿರುವ ಪದಗಳು ಅವರ ಕೆಟ್ಟ ಮನಸ್ಥಿತಿಗೆ ಹಿಡಿದ ಕೈಗನ್ನಡಿ, ಅದಕ್ಕೆ ನನ್ನ ಧಿಕ್ಕಾರವಿದೆ" ಎಂದು ಕಿಡಿ ಕಾರಿದ್ದರು.

ನಾವು ಕೈಕಟ್ಟಿ ತುಳಿತಿರಲು ಸಾಧ್ಯವಿಲ್ಲ
ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ, "ಸಿದ್ದರಾಮಯ್ಯರ ಇಂತಹ ಮಾತುಗಳನ್ನು ಸೋನಿಯಾ ಗಾಂಧಿ ಮೆಚ್ಚಿಸಲು ಮಾತನಾಡುತ್ತಾರೆ. ಅವರು ವಿರೋಧ ಪಕ್ಷದ ನಾಯಕ. ಅವರ ಬಾಯಲ್ಲಿ ಇಂತಹ ಮಾತುಗಳು ಬರಬಾರದು, ಸಂಘ ಪರಿವಾರ ಭಾರತ ಮಾತೆಯ ಗೌರವ ಉಳಿಸುತ್ತಿರುವ ಸಂಸ್ಥೆಗಳು. ಅವರನ್ನು ಸೀಳುನಾಯಿಗಳು ಅಂತಿದ್ದಾರೆ, ಆದರೆ ನಾಯಿಗೆ ಇರುವ ನಿಯತ್ತು ಯಾರಿಗೂ ಇರಲ್ಲ, ಈ ರೀತಿ ಹಗುರವಾಗಿ ಮಾತನಾಡಿದರೆ ಬಿಜೆಪಿ ಶಾಸಕರು ಕೈಕಟ್ಟಿ ಕುಳಿತಿರಲು ಸಾಧ್ಯವಿಲ್ಲ. ನಾಲಿಗೆ ಇದೆ ಅಂತಾ ಹಗುರವಾಗಿ ಮಾತನಾಡಿದರೆ ಜನ ನಿಮ್ಮನ್ನ ಒಪ್ಪುವುದಿಲ್ಲ" ಎಂದು ತಿಳಿಸಿದ್ದರು.

ಸಿದ್ದರಾಮಯ್ಯ ಮುಗಿಸಲು ಪಕ್ಕದಲ್ಲೆ ಸೀಳುನಾಯಿ ಕಾಯುತ್ತಿವೆ
"ಬಿಜೆಪಿಗರನ್ನು ಸಿದ್ದರಾಮಯ್ಯ ಸೀಳುನಾಯಿಗೆ ಹೋಲಿಸಿದ್ದಾರೆ, ಆದರೆ ಅವರ ಪಕ್ಕದಲ್ಲೇ ಸೀಳುನಾಯಿ ಸೇರಿದಂತೆ ಹುಲಿ, ಸಿಂಹ, ಹಾವು, ಬೆಕ್ಕು ಕಾಯುತ್ತಿವೆ, ಒಂದು ಕ್ಷಣ ಮೈಮರೆತರೆ ಸಾಕು ಆ ಸಾಕು ಸೀಳುನಾಯಿಗಳೇ ಅವರನ್ನು ಮುಗಿಸುತ್ತೇವೆ" ಎಂದು ತೋಟಗಾರಿಕೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಲೇವಡಿ ಮಾಡಿದ್ದಾರೆ.












Click it and Unblock the Notifications