Munirathna :ಮುನಿರತ್ನ ಆಪ್ತರಿಗೆ, ಜೊತೆಗಾರರಿಗೆ HIV ಟೆಸ್ಟ್? 'ಮುನಿರತ್ನಂಗೆ ಕುಮಾರಸ್ವಾಮಿ, ಅಶೋಕ್, ಸಿಟಿ ರವಿ ಕುಮ್ಮಕ್ಕು'

ಬೆಂಗಳೂರು, ಸೆಪ್ಟೆಂಬರ್‌ 20: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಜೈಲುಪಾಲಾಗಿರುವ ಬಿಜೆಪಿ ಶಾಸಕ ಮುನಿರತ್ನ ಅಕ್ರಮಗಳಿಗೆ ಸಂಬಂಧಿಸಿದ ಒಂದೊಂದೇ ವಿಚಾರಗಳು ಈಗ ಬಯಲಾಗುತ್ತಿವೆ. ಅತ್ಯಾಚಾರ ಪ್ರಕರಣದಲ್ಲಿ ಶಾಸಕ ಮುನಿರತ್ನ ಅವರನ್ನ ಪೊಲೀಸರು ಮತ್ತೆ ಅರೆಸ್ಟ್‌ ಮಾಡಿದ್ದು, ಸದ್ಯ ರಾಜ್ಯ ರಾಜಕೀಯದಲ್ಲಿ ಏಡ್ಸ್‌ ಹನಿಟ್ರ್ಯಾಪ್‌ ಸಾಕಷ್ಟು ಸದ್ದು ಮಾಡುತ್ತಿದೆ.

ಈ ಕುರಿತು ಶಾಸಕ ಕುಣಿಗಲ್ ರಂಗನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭೇಟಿ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ಹೆಚ್ಐವಿ ಹರಡಿಸುವ ಮುನಿರತ್ನ ಪ್ರಯತ್ನ ನಿಜಕ್ಕೂ ಆಘಾತ ಕಾರಿ. ಇದರಲ್ಲಿ ಮುನಿರತ್ನ ಒಬ್ನರೇ ಇಲ್ಲ, ಸಿಟಿ ರವಿ, ವಿರೋಧ ಪಕ್ಷದ ನಾಯಕರಾದ ಅಶೋಕ್, ಹೆಚ್‌ ಡಿ ಕುಮಾರಸ್ವಾಮಿ ಕುಮ್ಮಕ್ಕಿನಿಂದಲೇ ನಡೆದಿದೆ ಎಂದು ಸ್ಟೋಟಕ ಹೇಳಿಕೆಯನ್ನ ನೀಡಿದ್ದಾರೆ.

BJP Leaders Should Test HIV Says MLA Ranganath

ರಾಜರಾಜೇಶ್ವರಿ ನಗರ ಸೇರಿ ಹಲವು ಕಡೆ ಸೋಂಕಿತರು ಇದ್ದಾರೆ. ಹೀಗಾಗಿ ಇದರ‌ ಬಗ್ಗೆ ಸಮಗ್ರ ತನಿಖೆ ಮಾಡಬೇಕು. ಕೂಡಲೇ ಒಕ್ಕಲಿಗ ಹಾಗೂ ದಲಿತ ಶಾಸಕರಿಂದ ಗವರ್ನರ್ ಭೇಟಿ ಮಾಡುತ್ತೇವೆ. ಬಹಳಷ್ಟು ಬಿಜೆಪಿ ನಾಯಕರಿಗೆ ಹೆಚ್ಐವಿ ಇನ್ಪೆಕ್ಸನ್ ಆಗಿರಬಹುದು, ಮುನಿರತ್ನ ಜೊತೆ ಯಾರು ಯಾರು ಓಡಾಡಿದ್ರೋ ಅವರ ಎಲ್ಲರು ಹೆಚ್ಐವಿ ಟೆಸ್ಟ್ ಮಾಡಿಸಿಕೊಳ್ಳಬೇಕು. ಚೀಫ್ ಮಿನಿಸ್ಟರ್ ಶೀಘ್ರದಲ್ಲೇ ಗೃಹ ಸಚಿವರಾದ ಪರಮೇಶ್ವರ್‌ ಅವರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ ಎಂದರು.

ಜಾತಿ ನಿಂದನೆ ಕುರಿತು ಮುನಿರತ್ನ ಮಾತಾಡಿದ ಹೇಳಿಕೆಗಳ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇವೆ. ನಿನ್ನೆ ಸಮುದಾಯದ ಸಭೆ ಮಾಡಿ, ಇಂದು ಸಿಎಂ ಭೇಟಿ ಮಾಡಿದ್ದೇವೆ. ಎಸ್ಐಟಿ ತನಿಖೆ ಮಾಡುವಂತೆ ಸಿಎಂಗೆ ಒತ್ತಡ ಹಾಕಿದ್ದೇವೆ ಎಂದು ಶಾಸಕ ಕುಣಿಗಲ್ ರಂಗನಾಥ್ ಹೇಳಿದರು.

ಬಿಜೆಪಿ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಸಹಕರಿಸಿ: ಕಾಂಗ್ರೆಸ್

ಮುನಿರತ್ನರ ದ್ವೇಷದ ರಾಜಕೀಯಕ್ಕೆ, ಭ್ರಷ್ಟಾಚಾರಕ್ಕೆ ಗುರಿಯಾದವರಲ್ಲಿ ಬಿಜೆಪಿ ನಾಯಕರೂ ಹೊರತಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಸ್ವತಃ ಬಿಜೆಪಿ ನಾಯಕ ಅಶೋಕ್ ಅವರಿಗೆ ಏಡ್ಸ್ ಸೋಂಕು ತಗುಲಿಸಲು ಪ್ರಯತ್ನಿಸಿದ್ದ ಅಘಾತಕಾರಿ ಸಂಗತಿ ಹೊರಬಂದಿದೆ. ಇಂತಹ ವಿಕೃತರತ್ನನನ್ನು ತಲೆ ಮೇಲೆ ಹೊತ್ತು ಮೆರೆಸುವ ಬಿಜೆಪಿ ಪಕ್ಷದ ನಾಯಕರು HIV ಪರೀಕ್ಷೆ ಮಾಡಿಸಿಕೊಂಡು ಏಡ್ಸ್ ನಿಯಂತ್ರಣದ ಅಭಿಯಾನಕ್ಕೆ ಸಹಕರಿಸಬೇಕು ಎಂದು ಕಾಂಗ್ರೆಸ್​​ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+