Puneeth Kerehalli: ಪುನೀತ್‌ ಕೆರೆಹಳ್ಳಿ ಭೇಟಿ ಮಾಡಿದ ಬಿಜೆಪಿ ನಿಯೋಗ!

ಕರ್ನಾಟಕ ರಾಜಕೀಯದಲ್ಲಿ ಶಿವಮೊಗ್ಗ ಘಟನೆ ವ್ಯತಿರಿಕ್ತ ಬೆಳವಣಿಗೆ ಹಾಗೂ ರಾಜಕೀಯ ಕಿತ್ತಾಟಕ್ಕೆ ದಾರಿ ಮಾಡಿಕೊಟ್ಟಿದೆ. ಒಂದು ಕಡೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಈ ವಿಚಾರ ಇಟ್ಟುಕೊಂಡು ಬಿಜೆಪಿ ಆರೋಪ ಮಾಡುತ್ತಿದ್ದರೆ, ಮತ್ತೊಂದ್ಕಡೆ ಕಾಂಗ್ರೆಸ್ ಪಕ್ಷದ ನಾಯಕರು ಕೂಡ ತಿರುಗೇಟು ನೀಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಬಿಜೆಪಿ ಹೊಸ ಅಸ್ತ್ರ ಪ್ರಯೋಗ ಮಾಡಿದೆ.

ಹೌದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಹಿಂದೂಗಳಿಗೆ ಭದ್ರತೆಯೇ ಇಲ್ಲ & ಕಾಂಗ್ರೆಸ್ ಸರ್ಕಾರ ಕೋಮು ಗಲಭೆ ನಿಯಂತ್ರಣ ಮಾಡ್ತಿಲ್ಲ ಎಂದು ಬಿಜೆಪಿ ಆರೋಪ ಮಾಡುತ್ತಿದೆ. ಈ ಮಧ್ಯೆ ಎರಡೂ ಪಕ್ಷಗಳ ನಡುವೆ ಇದೇ ವಿಚಾರಕ್ಕೆ ತಿಕ್ಕಾಟ ಜೋರಾದ ಸಮಯದಲ್ಲೇ, ಪುನೀತ್‌ ಕೆರೆಹಳ್ಳಿ ಭೇಟಿ ಮಾಡಿದೆ ಬಿಜೆಪಿ ನಿಯೋಗ. ಹಾಗಾದರೆ ಪುನೀತ್‌ ಕೆರೆಹಳ್ಳಿ ಭೇಟಿ ಬಗ್ಗೆ ಬಿಜೆಪಿ ಹೇಳಿದ್ದೇನು? ಪುನೀತ್‌ ಕೆರೆಹಳ್ಳಿ ಭೇಟಿ ಮೂಲಕ ಬಿಜೆಪಿಯ ನಾಯಕರು ಹೆಣೆದಿರುವ ತಂತ್ರ ಏನು?

BJP Leaders met Puneeth Kerehalli in hospital

ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ...

ಬಿಜೆಪಿ ನಿಯೋಗ ಪುನೀತ್‌ ಕೆರೆಹಳ್ಳಿ ಭೇಟಿ ಮಾಡಿರುವ ಬಗ್ಗೆ ರಾಜ್ಯ ಬಿಜೆಪಿ ಘಟಕ ಟ್ವೀಟ್ ಮಾಡಿದ್ದು, 'ಸಮಾಜಘಾತುಕ ಜಿಹಾದಿಗಳನ್ನು ಅಮಾಯಕರೆಂದು ಬಿಡುಗಡೆ ಮಾಡುವ
ಕರ್ನಾಟಕ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ, ನಕಲಿ ಪ್ರಕರಣಗಳನ್ನು ದಾಖಲಿಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದೆ. ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಮೇಲಿನ ಆರೋಪಗಳು ಸಾಬೀತಾಗದಿದ್ದರೂ ಆತನ ವಿರುದ್ಧ ಬೇರೆ ಪ್ರಕರಣಗಳಲ್ಲಿ ಸಿಲುಕಿಸಿ ಸರ್ಕಾರ ಹತ್ತಿಕ್ಕುವ ಕೃತ್ಯವೆಸಗುತ್ತಿದೆ.' ಎಂದು ಆರೋಪ ಮಾಡಿದೆ.

BJP Leaders met Puneeth Kerehalli in hospital

ಹಾಗೇ, 'ಸಿದ್ದರಾಮಯ್ಯ ಅವರ ಸರ್ಕಾರ ನ್ಯಾಯ ಒದಗಿಸಬೇಕೆಂದು ಅನಿರ್ದಿಷ್ಟಾವಧಿಯವರೆಗೂ ಉಪವಾಸ ಕೈಗೊಂಡು ಆಸ್ಪತ್ರೆಗೆ ದಾಖಲಾಗಿರುವ ಪುನೀತ್‌ರನ್ನು ಬಿಜೆಪಿಯ ಶಾಸಕರುಗಳಾದ ಶ್ರೀ ಎಂ. ಟೆಂಗಿನಕಾಯಿ , ಕು. @BJPBhagirathi, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿದ್ದರಾಜು, ಪರಿಷತ್‌ ಸದಸ್ಯರಾದ ಶ್ರೀ ಚಲವಾದಿ ನಾರಾಯಣ ಸ್ವಾಮಿ, ಪ್ರಮುಖರಾದ ಶ್ರೀ ಭಾಸ್ಕರ್ ರಾವ್ ಅವರು ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದರು.' ಎಂದು ತಿಳಿಸಿದೆ. ಈ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೊಸ ಅಸ್ತ್ರ ಪ್ರಯೋಗ ಮಾಡಿದೆ ಬಿಜೆಪಿ.

ಒಟ್ನಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಕಿತ್ತಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಅದ್ರಲ್ಲೂ ಇಷ್ಟುದಿನ ಗ್ಯಾರಂಟಿ ವಿಚಾರಕ್ಕೆ ನಡೆಯುತ್ತಿದ್ದ ಕದನ ಈಗ ಬೇರೆ ಕಡೆಗೆ ತಿರುಗಿದೆ ಅಂತಾ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಹಾಗೇ ಬಿಜೆಪಿ ಮಾಡುತ್ತಿರುವ ಆರೋಪಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಶಿವಮೊಗ್ಗ ಘಟನೆ ಕಿಚ್ಚು ಹೊತ್ತಿಸಿದ್ದು, ಲೋಕಸಭೆ ಚುನಾವಣೆಗೆ ಮೊದಲು ಇನ್ನಷ್ಟು ದೊಡ್ಡದಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+