ಗುರುರಾಯರ ಸನ್ನಿಧಿಗೆ ಆಗಮಿಸಿದ ಈಶ್ವರಪ್ಪ
ಈಶ್ವರಪ್ಪ ಅವರ ಮಂತ್ರಾಲಯ ಪ್ರವಾಸ ಸಹಜ ಎಂದೆನಿಸಿದ್ದರೂ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಮುಸುಕಿನ ಯುದ್ಧ ನಡೆಸುತ್ತಿರುವ ಈ ದಿನಗಳಲ್ಲಿ ಅವರು ಇಲ್ಲಿಗೆ ಆಗಮಿಸಿರುವುದು ಕುತೂಹಲ ಕೆರಳಿಸಿದೆ.
ರಾಯಚೂರು, ಮೇ 2: ಬಿಜೆಪಿಯ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಅವರು ಮಂಗಳವಾರ ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರುಶನ ಪಡೆದರು.
ಮಂಗಳವಾರ ಮುಂಜಾನೆಯೇ ಪರಿಶುಭ್ರರಾಗಿ, ಮಠ ಪ್ರವೇಶಿಸಿದ ಈಶ್ವರಪ್ಪ ಅವರನ್ನು ಮಠದ ಆಡಳಿತ ಮಂಡಳಿಯ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು. ರಾಯರ ದರುಶನ ಪಡೆದ ನಂತರ, ಮಂತ್ರಾಲಯ ಪೀಠಾಧ್ಯಕ್ಷರಾದ ಶ್ರೀ ಯತಿಮಹಾರಾಜರ ದರ್ಶನ ಪಡೆದು ಕೆಲಕಾಲ ಅವರೊಂದಿಗೆ ಮಾತುಕತೆ ನಡೆಸಿದರು.[ಯಡಿಯೂರಪ್ಪಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ]

ಈಶ್ವರಪ್ಪ ಅವರ ಮಂತ್ರಾಲಯ ಪ್ರವಾಸ ಸಹಜ ಎಂದೆನಿಸಿದ್ದರೂ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರೊಂದಿಗೆ ಮುಸುಕಿನ ಯುದ್ಧ ನಡೆಸುತ್ತಿರುವ ಈ ದಿನಗಳಲ್ಲಿ ಅವರು ಇಲ್ಲಿಗೆ ಆಗಮಿಸಿರುವುದು ಎಲ್ಲರ ಗಮನ ಸೆಳೆದಿದೆ. ತಮ್ಮೆಲ್ಲಾ ಸಂಕಟಗಳನ್ನು ರಾಯರ ಮಡಿಲಿಗೆ ಹಾಕಲು ಬಂದಿದ್ದಾರೆಯೇ ಎಂಬ ಕುತೂಹಲವೂ ಮನೆಮಾಡಿದೆ.












Click it and Unblock the Notifications