ಸಿಎಂ ಸಿದ್ದರಾಮಯ್ಯ ಅವರಿಗೂ ಹನಿಟ್ರ್ಯಾಪ್: ಪ್ರಭಾವಿ ರಾಜಕಾರಣಿ ಗಂಭೀರ ಆರೋಪ
ಹನಿಟ್ರ್ಯಾಪ್ ಪ್ರಕರಣ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಆಡಳಿತ ಪಕ್ಷದ ನಾಯಕರಾದ ಎ.ಎನ್.ರಾಜಣ್ಣ ಅವರು ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ಎರಡು ಬಾರಿ ನಡೆದಿತ್ತು ಎಂದು ಸದನದಲ್ಲೇ ಹೇಳುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಆಹಾರವಾಗಿದ್ದಾರೆ. ಈ ಬಗ್ಗೆ ದಿನಕ್ಕೊಂದು ಸ್ಫೋಟಕ ಮಾಹಿತಿ ಹೊರಬರುತ್ತಿದೆ. 48 ಮಂದಿ ಮೇಲೆ ಹನಿಟ್ರ್ಯಾಪ್ ನಡೆಸಿದೆ ಎಂದು ರಾಜಣ್ಣ ಹೇಳಿದ್ದರು. ಆದರೆ ಇವರೆಲ್ಲ ಯಾರು ಎಂದು ಬಹಿರಂಗಪಡಿಸಿಲ್ಲ. ಈಗ ಹನಿಟ್ರ್ಯಾಪ್ ಜಾಲವು ಸಿಎಂ ಸಿದ್ದರಾಮಯ್ಯ ಅವರ ಕಡೆಗೂ ವಾಲಿದೆ. ಈ ಬಗ್ಗೆ ಕರ್ನಾಟಕದ ಪ್ರಭಾವಿ ರಾಜಕಾರಣಿಯೊಬ್ಬರು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈವರೆಗೆ ರಾಜಣ್ಣ ಅವರು ಬಹಿರಂಗವಾಗಿ ತಮ್ಮ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿರುವುದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ 48 ಮಂದಿ ಮೇಲೂ ಹನಿಟ್ರ್ಯಾಪ್ ನಡೆದಿದೆ ಎಂದು ಸಂಚಲನ ಸೃಷ್ಟಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಮತ್ತೊಬ್ಬ ನಾಯಕರಾದ ಸತೀಶ್ ಜಾರಕಿಹೊಳಿ ಅವರು 400 ಮಂದಿಯ ಹನಿಟ್ರ್ಯಾಪ್ ಆಗಿದೆ ಎಂದು ಸಂಖ್ಯೆಗಳನ್ನು ಹೇಳಿದ್ದಾರೆ. ಆದರೆ ಯಾರೊಬ್ಬರ ಹೆಸರು ಕೂಡ ರಿವೀಲ್ ಮಾಡಿಲ್ಲ. ರಾಜಣ್ಣ ಅವರ ಹೇಳಿಕೆ ಬೆನ್ನಲ್ಲೇ ಬೇರೆ ಯಾರೆಲ್ಲ ನಾಯಕರ ಹನಿಟ್ರ್ಯಾಪ್ ಆಗಿದೆ ಎಂದು ತಲೆಕೆಡಿಸಿಕೊಂಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೂ ಹನಿಟ್ರ್ಯಾಪ್ ಆಗಿರಬಹುದು ಎಂದು ಬಿಜೆಪಿ ನಾಯಕ ಹಾಗೂ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

"ಸಿಎಂ ಸಿದ್ದರಾಮಯ್ಯ ಅವರದ್ದೂ ಹನಿಟ್ರ್ಯಾಪ್ ಆಗಿರುವ ಅನುಮಾನ ಇದೆ. ಹಾಗಾಗಿ ಹನಿಟ್ರ್ಯಾಪ್‌ನ ತನಿಖೆಯಾದರೆ, ಅವರದ್ದೂ ಎಲ್ಲಿ ಗುಟ್ಟು ಹೊರಗೆ ಬರುತ್ತದೆಯೋ ಎಂಬ ಭಯ ಇದೆ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಅವರು ಹನಿಟ್ರ್ಯಾಪ್ ತನಿಖೆಗೆ ಮುಂದಾಗುತ್ತಿಲ್ಲ" ಎಂದು ಆದರೆ ಇವರದ್ದೂ ಎಲ್ಲಿ ಆಚೆ ಬರುತ್ತೋ ಎಂಬ ಭಯ. ಅದಕ್ಕಾಗಿ ಸಿಎಂ ಈ ಬಗ್ಗೆ ತನಿಖೆಗೆ ಸೂಚಿಸುತ್ತಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿ ಎನ್ನುವುದು ಸಂಪೂರ್ಣ ಶೂನ್ಯ. ಕಾನೂನು ಸುವ್ಯವಸ್ಥೆ ಕೂಡ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡದೆ, ಹನಿಟ್ರ್ಯಾಪ್, ಫೋನ್ ಟ್ಯಾಪಿಂಗ್, ಹಣ ಲಪಟಾಯಿಸುವುದು ಇವುಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಹಾಗೇ ನೋಡಿದ್ರೆ ಈ ಸರ್ಕಾರ ಇಲ್ಲಿವರೆಗೆ ಇರಲೇಬಾರದಿತ್ತು. ಇನ್ನು ಹನಿಟ್ರ್ಯಾಪ್‌ನಲ್ಲಿ ನಮ್ಮ ಬಿಜೆಪಿಯ ಯಾವ ನಾಯಕರೂ ಇಲ್ಲ, ಒಂದು ವೇಳೆ ಇದ್ದಿದ್ದರೆ ಇಷ್ಟೊತ್ತಿಗೆ ತನಿಖೆ ನಡೆಸುತ್ತಿತ್ತು ಎಂದು ಬೆನ್ನುತಟ್ಟಿಕೊಂಡಿದ್ದಾರೆ.

ಕಾಂಗ್ರೆಸ್ ಪಕ್ಷದ ಸಚಿವರು, ನಾಯಕರೇ ಹನಿಟ್ರ್ಯಾಪ್ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರೇ ಕಾಂಗ್ರೆಸ್‌ನವರ ಹನಿಟ್ರ್ಯಾಪ್ ಮಾಡುತ್ತಿದ್ದಾರೆ. ಯಾರು ತಮ್ಮ ವಿರುದ್ಧ ಮಾತನಾಡುತ್ತಾರೋ ಅವರ ಹನಿಟ್ರ್ಯಾಪ್ ಮಾಡುವ ಕೆಲಸ ನಡೆಯುತ್ತಿದೆ. ಇಷ್ಟೆಲ್ಲ ಆಗಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಮಾತನಾಡುತ್ತಿಲ್ಲ. ತನಿಖೆ ಮಾಡ್ತೀವಿ ಅನ್ನೋದು ಬಿಟ್ರೆ ಬೇರೆ ಏನೂ ಹೇಳಿಲ್ಲ. ಇದನ್ನೆಲ್ಲ ಗಮನಿಸಿದರೆ, ಸಿದ್ದರಾಮಯ್ಯ ಅವರದ್ದೂ ಹನಿಟ್ರ್ಯಾಪ್ ಆಗಿರುವ ಅನುಮಾನ ಇದೆ. ಒಂದು ವೇಳೆ ತನಿಖೆ ನಡೆದರೆ, ಇವರದ್ದೂ ಎಲ್ಲಿ ಆಚೆ ಬರುತ್ತೋ ಅನ್ನೋ ಭಯ ಇದೆ. ಹೀಗಾಗಿ ತನಿಖೆಗೆ ಮುಂದಾಗುತ್ತಿಲ್ಲ ಎಂದು ಛಲವಾದಿ ದೂರಿದ್ದಾರೆ.












Click it and Unblock the Notifications