ಕಾಂಗ್ರೆಸ್ ಕಂಡು ಕೇಳರಿಯದಂತಹ ರೀತಿಯಲ್ಲಿ ಮುಗ್ಗರಿಸಿದೆ
ಬೆಂಗಳೂರು, ಡಿಸೆಂಬರ್ 04: ಪಂಚ ರಾಜ್ಯಗಳ ಚುನಾವಣೆಯನ್ನು ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಮಾಧ್ಯಮಗಳು ಸೇರಿದಂತೆ ಕಾಂಗ್ರೆಸ್‌ನ ಹಲವರು ಬಿಂಬಿಸಿದ್ದರು. ಸೆಮಿಫೈನಲ್ ಚುನಾವಣೆಯಲ್ಲಿ ಕಾಂಗ್ರೆಸ್ ಕಂಡು ಕೇಳರಿಯದಂತಹ ರೀತಿಯಲ್ಲಿ ಮುಗ್ಗರಿಸಿದೆ ಎಂದು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿದ ಅವರು, ಸೆಮಿಫೈನಲ್‌ನಲ್ಲಿ ಬಿಜೆಪಿ ಅರ್ಹವಾಗಿ ದಿಗ್ವಿಜಯ ಸಾಧಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹ್ಯಾಟ್ರಿಕ್ ಸಾಧಿಸುವುದು ಖಚಿತ ಹಾಗೂ ನಿಶ್ಚಿತ ಎಂದು ರಾಜ್ಯ ಬಿಜೆಪಿ ಹೇಳಿದೆ.

ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢದಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆ ಅತ್ಯದ್ಭುತ. ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ, ದಕ್ಷ ಹಾಗೂ ಸದೃಢ ನಾಯಕತ್ವವನ್ನು ಮೂರು ರಾಜ್ಯಗಳ ಮತದಾರ ಮನಃಪೂರ್ವಕ ಒಪ್ಪಿಕೊಂಡಿದ್ದಾರೆ ಎಂಬುದಕ್ಕೆ ಮತದಾರ ನೀಡಿದ ಆಶೀರ್ವಾದ ಹಾಗೂ ದೊರೆತ ಅದ್ಭುತ ಫಲಿತಾಂಶವೇ ಸಾಕ್ಷಿ. ಸಮಾಜದಲ್ಲಿ ಜಾತಿಯ ವಿಷಬೀಜ ಬಿತ್ತಿ, ಸುಳ್ಳು, ಕುಹಕ, ಅಪಪ್ರಚಾರ ನಿಂದನೆಗಳನ್ನೇ ವೈಭವೀಕರಿಸುತ್ತಿದ್ದ ಕಾಂಗ್ರೆಸ್ ಗೆ ಮೂರು ರಾಜ್ಯಗಳ ಮತದಾರರ ಗಂಭೀರ ಕಪಾಳಮೋಕ್ಷ ಅತ್ಯಂತ ಸಮಯೋಚಿತ ನಿರ್ಧಾರ.
ಕಾಂಗ್ರೆಸ್ ಒಡ್ಡಿದ ಆಸೆ-ಆಮಿಷದ ಗ್ಯಾರಂಟಿಗಳನ್ನು ಸ್ಪಷ್ಟವಾಗಿ ತಿರಸ್ಕರಿಸಿ, "ಮೋದಿ" ಎಂಬ ಅಸಲಿ ಗ್ಯಾರಂಟಿಯನ್ನು 'ಮಹಿಳೆಯರು, ಯುವಕರು, ರೈತರು ಹಾಗೂ ಬಡವರು' ಸೇರಿದಂತೆ ಪ್ರತಿಯೊಬ್ಬರು ಅಪ್ಪಿ-ಒಪ್ಪಿಕೊಂಡಿರುವುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟ.
ಪಂಚ ರಾಜ್ಯಗಳ ಚುನಾವಣೆಯನ್ನು ಮುಂಬರುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಮಾಧ್ಯಮಗಳು ಸೇರಿದಂತೆ ಕಾಂಗ್ರೆಸ್‌ನ ಹಲವರು ಬಿಂಬಿಸಿದ್ದರು. ಸೆಮಿಫೈನಲ್ ಚುನಾವಣೆಯಲ್ಲಿ ಕಾಂಗ್ರೆಸ್ ಕಂಡು ಕೇಳರಿಯದಂತಹ ರೀತಿಯಲ್ಲಿ ಮುಗ್ಗರಿಸಿದೆ. ಸೆಮಿಫೈನಲ್‌ನಲ್ಲಿ ಬಿಜೆಪಿ ಅರ್ಹವಾಗಿ ದಿಗ್ವಿಜಯ ಸಾಧಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ…
— BJP Karnataka (@BJP4Karnataka) December 4, 2023
ಜಾತಿ-ಧರ್ಮಗಳನ್ನು ನೋಡದೇ, ದೇಶದ ಬಡವರಿಗಾಗಿ ಪ್ರಧಾನಿ ಮೋದಿ ಸರ್ಕಾರ ಜಾರಿಗೆ ತಂದಿದ್ದ ಪಿಎಂ ಆವಾಸ್ ಯೋಜನೆ, ವಂದೇ ಭಾರತ್ ರೈಲು, ಜಲಜೀವನ್ ಮಿಷನ್, ಆಯುಷ್ಮಾನ್ ಭಾರತ್ ಸೇರಿದಂತೆ ಅನೇಕ ಯೋಜನೆಗಳನ್ನು ಕೀಳು ಮಟ್ಟದಲ್ಲಿ ಅಪಹಾಸ್ಯ ಮಾಡಿದ ಕಾಂಗ್ರೆಸ್‌ನ ನಾಯಕರಿಗೆ ಈಗ ಅದೇ ಬಡವರು ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.
ಜಾತಿ, ಧರ್ಮಗಳಿಗಿಂತಲೂ ದೇಶ ದೊಡ್ಡದು, ದೇಶದ ಅಭಿವೃದ್ಧಿ ದೊಡ್ಡದು ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್‌ಗೆ ಮತದಾರರು ಈ ಚುನಾವಣೆಯಲ್ಲಿ ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪರಿಕಲ್ಪನೆಯ ಪ್ರಕಾರ, ಪ್ರಸ್ತುತ ದೇಶದಲ್ಲಿ ಇರುವ ನಾಲ್ಕು ಪ್ರಮುಖ ಜಾತಿಗಳಾದ ನಾರಿಶಕ್ತಿ, ಯುವಶಕ್ತಿ, ಬಡವರು ಮತ್ತು ರೈತರ ಸರ್ವತೋಮುಖ ಅಭಿವೃದ್ಧಿಗೆ ಅಹರ್ನಿಶಿಯಾಗಿ ಶ್ರಮಿಸುತ್ತಿರುವ ಭಾರತೀಯ ಜನತಾ ಪಕ್ಷಕ್ಕೆ ಹಾಗೂ ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಸಂದ ಜಯ ಇದು.

ಜಾತಿ ವಿಭಜನೆಯಲ್ಲಿ ನಿರತವಾಗಿದ್ದ ಕಾಂಗ್ರೆಸ್‌ಗೆ ದೇಶದ ಪ್ರಮುಖ ಜಾತಿಗಳಾದ ನಾರಿಶಕ್ತಿ, ಯುವಶಕ್ತಿ, ಬಡವರು ಮತ್ತು ರೈತರು ಸರಿಯಾದ ಉತ್ತರವನ್ನೇ ನೀಡಿರುವುದು ವಿಶೇಷ. ಈ ಮೂರು ರಾಜ್ಯಗಳಲ್ಲಿ ದೊರೆತ ಸ್ಪಷ್ಟ ಬಹುಮತದ ಫಲಿತಾಂಶ ಕೇವಲ ಮೂರು ರಾಜ್ಯಗಳಲ್ಲಿ ಮಾತ್ರವಲ್ಲದೇ, ಜಗತ್ತಿನಾದ್ಯಂತ ಪ್ರತಿಧ್ವನಿಸಲಿದೆ.
ಜನತೆ ಕಿಚಡಿ ಸರ್ಕಾರಕ್ಕಿಂತಲೂ ಪೂರ್ಣ ಬಹುಮತದ ಸರ್ಕಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಾರೆ ಎಂಬ ಸಂದೇಶ ಎಲ್ಲೆಡೆ ಮೊಳಗುತ್ತಿದೆ. ರಾಜ್ಯಗಳ ಹಾಗೂ ದೇಶದ ಸುಸ್ಥಿರ ಅಭಿವೃದ್ಧಿಗೆ ಪೂರ್ಣ ಬಹುಮತದ ಬಿಜೆಪಿ ಸರ್ಕಾರಗಳನ್ನು ಅಧಿಕಾರಕ್ಕೆ ತಂದಿರುವ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ಮತದಾರರು ನಿಜಕ್ಕೂ ಅಭಿನಂದನಾರ್ಹರು.












Click it and Unblock the Notifications