ಸಿದ್ದರಾಮಯ್ಯ ಸರ್ಕಾರಕ್ಕೆ 100 ದಿನ; ಆತ್ಮಹತ್ಯೆ ಮಾಡಿಕೊಂಡ ರೈತರ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಬೆಂಗಳೂರು,ಸೆಪ್ಟೆಂಬರ್‌ 16: ರಾಜ್ಯದಲ್ಲಿ ಈ ವರ್ಷ ವಾಡಿಕೆಯಂತೆ ಮಳೆಯಾಗದೇ ಬರದ ಛಾಯೆ ಉಂಟಾಗಿದೆ, ಇತ್ತ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತವೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು 100 ದಿನ ಪೂರೈಸಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ಕುರಿತು ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದ್ದು, ಇದು ಯಾರು ಬರೆದ ಕಥೆಯೋ, ನಮಗಾಗಿ ಬಂದ ವ್ಯಥೆಯೋ" ಎಂಬಂತಾಗಿದೆ ಅನ್ನದಾತರ ಬದುಕು! ರಾಜ್ಯದಲ್ಲಿ ದಿನನಿತ್ಯ ರೈತರು ನೇಣಿನ ಕುಣಿಕೆಗೆ ಕೊರಳೊಡ್ಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

BJP lashed out at the Congress government regarding farmers suicides

ಅಲ್ಲದೇ 2013 ರಿಂದ 2018ರ ಸಿದ್ದರಾಮಯ್ಯರ ಮೊದಲ ಅವಧಿಯಲ್ಲಿ ಬರೊಬ್ಬರಿ 4,257 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಈಗಾಗಲೇ 150ರ ಗಡಿ ದಾಟಿದೆ! ಸಿದ್ದರಾಮಯ್ಯ ಅವರೇ, ತಮ್ಮ ಅವಧಿಯಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡರು ಎಂಬ ರಕ್ಕಸ ಇತಿಹಾಸವನ್ನು ತಾವು ಬರೆಯುತ್ತಿದ್ದೀರಿ! ಎಂದು ರಾಜ್ಯ ಬಿಜೆಪಿ ಕುಟುಕಿದೆ.


ಆತ್ಮಹತ್ಯೆ ಮಾಡಿಕೊಂಡ ಜಿಲ್ಲಾವಾರು ರೈತರ ಸಂಖ್ಯೆ

ಹಾವೇರಿ - 29

ಬೆಳಗಾವಿ -21

ಶಿವಮೊಗ್ಗ -16

ಯಾದಗಿರು -12

ಚಿಕ್ಕಮಗಳೂರು -12

ಕಲಬುರಗಿ -9

ವಿಜಯನಗರ -8

ಮೈಸೂರು - 8

ಧಾರವಾಡ -7

ಮಂಡ್ಯ -7

ಕೊಪ್ಪಳ- 5

ಚಿತ್ರದುರ್ಗ -5

ಬೀದರ್‌ - 4

ಹಾಸನ -4

ದಾವಣಗೆರೆ -3

ಗದಗ - 3

ವಿಜಯಪುರ -3

ರಾಮನಗರ- 2

ಬಳ್ಳಾರಿ- 2

ರಾಯಚೂರು- 1

ಬಾಗಲಕೋಟೆ-1

ಕೊಡಗು- 1

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+