ಕಾಂಗ್ರೆಸ್ ಸರ್ಕಾರದ 100 ದಿನದ 'ರಿಪೋರ್ಟ್ ಕಾರ್ಡ್' ಬಿಡುಗಡೆಗೊಳಿಸಿದ ಬಿಜೆಪಿ
ಬೆಂಗಳೂರು, ಆಗಸ್ಟ್ 29: ಚುನಾವಣೆಗೂ ಜನಪ್ರಿಯ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ತಂದ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸಿದೆ. ನಮ್ಮ ಯೋಜನೆಗಳಿಗೆ ಸರ್ಕಾರ ಸ್ಪಂದಿಸುತ್ತಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ಸರ್ಕಾರ ರಿಪೋರ್ಟ್ ಕಾರ್ಡ್ ಅನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಜೊತೆ ಜೊತೆಗೆ ಲೋಕಸಭಾ ಚುನಾವಣೆಗೆ ರಣತಂತ್ರ ಹೆಣೆಯುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಿಪೋರ್ಟ್ ಕಾರ್ಡ್ ಅಸ್ತ್ರ ಬಳಸಿದೆ. ಕಳೆದ ಮೂರುವರೆ ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಘಟನೆಗಳನ್ನು ವಿವರಿಸಿದ ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ಕೆಂಡ ಕಾರಿದೆ.

ಈ ಮೂರು ತಿಂಗಳಲ್ಲಿ ಸರ್ಕಾರದ ಬಗ್ಗೆ ನೂರು ರೀತಿಯ ಅಸಮಾಧಾನ ವ್ಯಕ್ತವಾಗಿದೆ. ಸರ್ಕಾರವೊಂದು ಆಡಳಿತಕ್ಕೆ ಬಂದು ಮೂರು ತಿಂಗಳೊಳಗೆ ರಾಜ್ಯಾದ್ಯಂತ ಭಾರಿ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು ಎಂದು ಕರ್ನಾಟಕ ಬಿಜೆಪಿ ದೂರಿದೆ.
ಬೀಕರ ಬರಗಾಲ, ರೈತರಿಗೆ ಸಂಕಷ್ಟ, ಭ್ರಷ್ಟಾಚಾರ, ಶಾಸಕರ ಅಸಮಾನತೆ ಸೇರಿದಂತೆ ಹಲವು ಅಂಶಗಳನ್ನು ಪ್ರಸ್ತಾಪಿಸಿ ಬಿಜೆಪಿಯು ರಾಜ್ಯ ಸರ್ಕಾರಕ್ಕೆ ಟಾಂಗ್ ನೀಡಿದೆ.
ಕಾಂಗ್ರೆಸ್ ಸರ್ಕಾರದ 100 ದಿನಗಳ ರಿಪೋರ್ಟ್ ಕಾರ್ಡ್.
— BJP Karnataka (@BJP4Karnataka) August 29, 2023
📂 ವರ್ಗಾವಣೆ ದಂಧೆ.
🚰 ಕಲುಷಿತ ನೀರು ಸೇವನೆಯಿಂದ ರಾಜ್ಯದಲ್ಲಿ ಅಪಾರ ಸಾವು-ನೋವು.
🍚 ಮೋದಿ ಸರ್ಕಾರ ಉಚಿತವಾಗಿ ನೀಡುತ್ತಿದ್ದ 05 ಕೆಜಿ ಅಕ್ಕಿಗೂ ಕನ್ನ, ಜನತೆಗೆ ನಂಬಿಕೆ ದ್ರೋಹ.
🚍 ರಾಜ್ಯದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕ, ನಿರ್ವಾಹಕರಿಗೆ ನಿರುದ್ಯೋಗ ಭಾಗ್ಯ.
👨🌾 ನೂರು…
ಬಿಜೆಪಿ ತಿಳಿಸಿದ 100 ದಿನಗಳ ರಿಪೋರ್ಟ್ ಕಾರ್ಡ್ ವಿವರ
* ವರ್ಗಾವಣೆ ದಂಧೆ ನಡೆದಿದೆ.
* ಕಲುಷಿತ ನೀರು ಸೇವನೆಯಿಂದ ರಾಜ್ಯದಲ್ಲಿ ಅಪಾರ ಸಾವು-ನೋವು ಸಂಭವಿಸಿದೆ.
* ಮೋದಿ ಸರ್ಕಾರ ಉಚಿತವಾಗಿ ನೀಡುತ್ತಿದ್ದ 05 ಕೆಜಿ ಅಕ್ಕಿಗೂ ಕನ್ನ, ಜನತೆಗೆ ನಂಬಿಕೆ ದ್ರೋಹ ಉಂಟಾಗಿದೆ.
* ರಾಜ್ಯದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕ, ನಿರ್ವಾಹಕರಿಗೆ ನಿರುದ್ಯೋಗ ಭಾಗ್ಯ.
* ನೂರು ದಿನಗಳಲ್ಲಿ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
* ರಾಜ್ಯದಲ್ಲಿ ಕಂಡು ಕೇಳರಿಯದಂತಹ ಭೀಕರ ಬರ ಸೃಷ್ಟಿಯಾಗಿದೆ.
* ಉಗ್ರರಿಗೆ, ಸಮಾಜಘಾತುಕ ಶಕ್ತಿಗಳಿಗೆ ರಾಜ್ಯ ಈಗ ಸುರಕ್ಷಿತ ಸ್ಥಳವಾಗಿದೆ.
* ಮರಳು ಮಾಫಿಯಾಕ್ಕೆ ಪೊಲೀಸರನ್ನೆ ಬಲಿಕೊಟ್ಟ ದುರ್ಬಲ ಆಡಳಿತ ನೀಡಿದ್ದಾರೆ.
* ಗರ್ಭಿಣಿ, ಬಾಣಂತಿಯರಿಗೆ ಕಳಪೆ ಮೊಟ್ಟೆ ವಿತರಿಸಲಾಗಿದೆ.
* ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿ, ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಹೊರ ರಾಜ್ಯಗಳಿಗೆ ಶಿಫ್ಟ್ ಆಗುವ ಭಾಗ್ಯ.
* ಶಾಸಕರ ಮನೆಗೆ ಹಾಗೂ ಪೊಲೀಸ್ ಸ್ಟೇಶನ್‌ಗೆ ಬೆಂಕಿಯಿಟ್ಟ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಬ್ರದರ್ಸ್‌ಗೆ ಬಿಡುಗಡೆಯ ಭಾಗ್ಯ.
* ಸರ್ಕಾರಿ ಅಧಿಕಾರಿಗಳಿಗೆ ಹಣ ನೀಡುವಂತೆ ಕಿರುಕುಳ /ಆತ್ಮಹತ್ಯೆ ಭಾಗ್ಯ.
* ಸಚಿವರ ಲಂಚಗುಳಿತನ ವಿರೋಧಿಸಿ, ಕಾಂಗ್ರೆಸ್ ಶಾಸಕರಿಂದಲೇ ದೂರು-ದುಮ್ಮಾನ ವ್ಯಕ್ತವಾಗಿದೆ.
* ಕರ್ನಾಟಕದ ಜನತೆಯ ಕಿವಿ ಮೇಲೆ ಹೂವು ಇಟ್ಟಿದೆ ಎಂದು ಬಿಜೆಪಿ ಆರೋಪಿಸಿದೆ.












Click it and Unblock the Notifications