I.N.D.I. ಮೈತ್ರಿಕೂಟಕ್ಕೆ ಕೊಟ್ಟಿರುವ ಎಚ್ಚರಿಕೆಗಳು ಇಲ್ಲಿವೆ
ಬೆಂಗಳೂರು, ಡಿಸೆಂಬರ್ 05: ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವು ಕಂಡಿದ್ದು, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿದ್ದು, I.N.D.I. ಮೈತ್ರಿಕೂಟಕ್ಕೆ ಕೊಟ್ಟಿರುವ ಎಚ್ಚರಿಕೆಗಳು ಎಂದು ರಾಜ್ಯ ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದೆ.
I.N.D.I. ಮೈತ್ರಿಕೂಟಕ್ಕೆ ಕೊಟ್ಟಿರುವ ಎಚ್ಚರಿಕೆಗಳು ಇಲ್ಲಿವೆ
▪ ಸುಳ್ಳು ಗ್ಯಾರಂಟಿಗಳಿಗೆ ತಲೆಬಾಗುವುದಿಲ್ಲ..!
▪ ಕಿವಿ ಮೇಲೆ ಹೂ ಇಡಿಸಿಕೊಳ್ಳುವುದಿಲ್ಲ..!
▪ ತುಷ್ಟೀಕರಣ ರಾಜಕೀಯ ಒಪ್ಪುವುದಿಲ್ಲ..!
▪ ದೇಶ ಒಡೆಯುವ ಕೆಲಸಕ್ಕೆ ಬೆಂಬಲಿಸುವುದಿಲ್ಲ..!
▪ ಒಡೆದು ಆಳುವ ರಾಜಕೀಯಕ್ಕೆ ಸೊಪ್ಪು ಹಾಕುವುದಿಲ್ಲ..!

ದೇಶದ ಜನತೆಗೆ ಅಭಿವೃದ್ಧಿಯೊಂದಿಗೆ ಭಾರತದ ಕೀರ್ತಿ ಪತಾಕೆ ಹಾರಿಸುವವರು ಬೇಕಾಗಿದ್ದಾರೆ. ಭಾರತ್ ತೋಡೋ ಮಾಡುವವರು ಬೇಕಿಲ್ಲ..! ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಸಲಿ ಗ್ಯಾರಂಟಿ ಎದುರು ಚೆಲ್ಲಾಪಿಲ್ಲಿ ಯಾದ I.N.D.I. ಮೈತ್ರಿಕೂಟ ಎಂದು ಕಾಂಗ್ರೆಸ್ ವಿರುದ್ದ ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದೆ.
ಇನ್ನೋಂದು ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಕಾಂಗ್ರೆಸ್ ದ ದಲಿತ ವಿರೋಧಿ ದರ್ಬಾರ್ ಮಿತಿ ಮೀರಿದೆ. ಬಿಜೆಪಿ ಎಸ್‌ಸಿ ಮೋರ್ಚಾದ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಚನ್ನರಾಜ್ ಹಟ್ಟಿಹೊಳಿ ಆಪ್ತರ ಪಡೆ ಹಲ್ಲೆ ನಡೆಸಿರುವುದು ಕಾಂಗ್ರೆಸ್‌ನ ದಲಿತ ವಿರೋಧಿ ನೀತಿಯ ಮುಂದುವರಿದ ಭಾಗ. ಪೊಲೀಸರು ಸುದೀರ್ಘ ಅವಧಿಯವರೆಗೆ ಪ್ರಕರಣ ದಾಖಲಿಸದಿರುವುದು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ತೋರಿಸುತ್ತದೆ.

ಹಲ್ಲೆ ನಡೆಸಲು ಆಜ್ಞೆ ನೀಡಿದ್ದಲ್ಲದೇ, ಹಲ್ಲೆ ನಡೆಯುವಾಗ ಪೃಥ್ವಿ ಸಿಂಗ್ ಮನೆ ಎದುರು ಓಡಾಡಿ ವಿಘ್ನ ಸಂತೋಷ ಮೆರೆದ ಚನ್ನರಾಜ್ ಹಟ್ಟಿಹೊಳಿಗೆ ಕಾಂಗ್ರೆಸ್ ಸರ್ಕಾರ ರಾಜ ರಕ್ಷಣೆ ನೀಡುತ್ತಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಯ ಶೋಚನೀಯ ಸ್ಥಿತಿಗೆ ನಿದರ್ಶನ ಎಂದು ಬಿಜೆಪಿ ಹೇಳಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕರೇ ತಪರಾಕಿ ನೀಡುತ್ತಿದ್ದಾರೆ. ಸ್ವಪಕ್ಷೀಯ ಶಾಸಕರು ತಮ್ಮದೇ ಸರ್ಕಾರದ ತುಘಲಕ್ ನೀತಿಗಳನ್ನು ಈ ಪರಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಸಚಿವ ಕೃಷ್ಣಬೈರೇಗೌಡ ಅವರೇ, ನೀವು ಕಾಟಾಚಾರಕ್ಕೆ ಬರ ಸಮೀಕ್ಷೆ ನಡೆಸಿದ್ದೀರಿ ಎಂಬುದನ್ನು ಮೊದಲು ಒಪ್ಪಿಕೊಳ್ಳಿ, ನಂತರ ಬೇರೆಯವರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿ ಎಂದು ಬಿಜೆಪಿ ಟ್ವೀಟ್ ಮೂಲಕ ಕುಟುಕಿದೆ.












Click it and Unblock the Notifications