ಸಿದ್ದರಾಮಯ್ಯ ಸರ್ಕಾರದ ಮೋಜು ಮಸ್ತಿಗಳ ಪಟ್ಟಿ!
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ಟೀಕೆ ಮುಂದುವರೆದಿದೆ. ಕರ್ನಾಟಕದಲ್ಲಿ ಬರ ಪರಿಸ್ಥಿತಿ ಇದ್ದರೂ ರಾಜ್ಯ ಸರ್ಕಾರ ಪರಿಹಾರ ಕಂಡು ಹಿಡಿಯುವ ಬದಲು ಮೋಜು ಮಸ್ತಿಯಲ್ಲಿ ಮುಳುಗಿದೆ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಬಿಜೆಪಿ ಟೀಕಿಸಿದೆ.
ಕರ್ನಾಟಕ ಬಿಜೆಪಿ ಅಧಿಕೃತ ಎಕ್ಸ್ (ಟ್ವಿಟರ್) ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರನ್ನು ಮಜವಾದಿ ಎಂದು ಕರೆದಿದ್ದು, ಮಜವಾದಿ ಸರ್ಕಾರ ಮೋಜು ಮಸ್ತಿ ಮಾಡುತ್ತಿದೆ ಎಂದು ಅವುಗಳ ಪಟ್ಟಿಯನ್ನು ನೀಡಿದೆ.

ಬಿಜೆಪಿ ಟ್ವೀಟ್‌ನಲ್ಲಿ ಏನಿದೆ?
"ಮಜವಾದಿ ಸಿದ್ದರಾಮಯ್ಯ ಅವರ ಸರ್ಕಾರದ ಮೋಜು ಮಸ್ತಿಗಳ ಪಟ್ಟಿ:
ಮುಖ್ಯಮಂತ್ರಿ ಮನೆಗೆ ಐಷಾರಾಮಿ ಟಚ್.
ಸಚಿವರುಗಳಿಗೆ ಐಷಾರಾಮಿ ಕಾರ್ ಗಿಫ್ಟ್.
ಮಂತ್ರಿಗಳ ಕಚೇರಿ, ಮನೆಗೆ ಏಷ್ಯಾನ್ ಪೇಂಟ್ಸ್.
ತೆಲಂಗಾಣದಲ್ಲಿ ರಾಜ್ಯದ ಕಾಂಗ್ರೆಸ್ಸಿಗರ ಪಾರ್ಟಿ ಫಿಕ್ಸ್.
ದುಬೈಗೆ ಸತೀಶ್ ಜಾರಕಿಹೊಳಿ ಟೂರ್ ಕನ್ಫರ್ಮ್.
ಗೃಹ ಸಚಿವ ಪರಮೇಶ್ವರ್ ಫಾರಿನ್ ಟೂರ್ ಸಕ್ಸಸ್.
ಕರುನಾಡನ್ನು ಉದ್ಧಾರ ಮಾಡುವ ಬದಲು ಲೂಟಿ ಹೊಡೆದು ಕತ್ತಲು ನೀಡಿ ಮಜಾ ಉಡಾಯಿಸುತ್ತಿದೆ ಕಾಂಗ್ರೆಸ್..!" ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿ ಕಾರಿದೆ.
ಮಜವಾದಿ @siddaramaiah ಅವರ ಸರ್ಕಾರದ ಮೋಜು ಮಸ್ತಿಗಳ ಪಟ್ಟಿ:
— BJP Karnataka (@BJP4Karnataka) November 10, 2023
▪️ಮುಖ್ಯಮಂತ್ರಿ ಮನೆಗೆ ಐಷಾರಾಮಿ ಟಚ್
▪️ಸಚಿವರುಗಳಿಗೆ ಐಷಾರಾಮಿ ಕಾರ್ ಗಿಫ್ಟ್
▪️ಮಂತ್ರಿಗಳ ಕಚೇರಿ, ಮನೆಗೆ ಏಷ್ಯಾನ್ ಪೇಂಟ್ಸ್
▪️ತೆಲಂಗಾಣದಲ್ಲಿ ರಾಜ್ಯದ ಕಾಂಗ್ರೆಸ್ಸಿಗರ ಪಾರ್ಟಿ ಫಿಕ್ಸ್
▪️ದುಬೈಗೆ ಸತೀಶ್ ಜಾರಕಿಹೊಳಿ ಟೂರ್ ಕನ್ಫರ್ಮ್
▪️ಗೃಹ ಸಚಿವ ಪರಮೇಶ್ವರ್…
ಪ್ರಿಯಾಂಕ್ ಖರ್ಗೆ ವಿರುದ್ಧ ಗಂಭೀರ ಆರೋಪ
ಕೆಇಎ ಪರೀಕ್ಷೆಯಲ್ಲಿ ಅಕ್ರಮ ಆರೋಪದ ಬಗ್ಗೆ ಮಾಡಿರುವ ಬಗ್ಗೆ ಬಿಜೆಪಿ, ಪ್ರಿಯಾಂಕ್ ಖರ್ಗೆ ಅವರ ಪಾತ್ರವಿದೆ ಎಂದು ಆರೋಪಿಸಿದೆ. "ಕೆಇಎ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾದವರ ಬ್ಯಾಂಕ್ ಖಾತೆಗಳಲ್ಲಿ ಕೋಟಿ ಕೋಟಿ ಪತ್ತೆಯಾಗಿದೆ. ಆದರೆ ಪ್ರಕರಣದ ಮೂಲ, ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬ ವಿತಂಡವಾದದಲ್ಲಿ ಮುಳುಗಿದ್ದಾರೆ.
ಪ್ರಿಯಾಂಕ್ ಖರ್ಗೆಯವರೇ, ಕೆ.ಇ.ಎ. ಪರೀಕ್ಷೆಯಲ್ಲಿ ಅಕ್ರಮ ನಡೆಯತ್ತದೆ ಎಂದು ಮೊದಲೇ ನಿಮಗೆ ದೂರು ಸಲ್ಲಿಸಿದರೂ ನೀವು ಸುಮ್ಮನಿದ್ದದ್ದೇಕೆ? ಈಗ ಪರೀಕ್ಷಾ ಅಕ್ರಮದ ತನಿಖೆಯನ್ನು ಸಿಬಿಐ ಗೆ ಒಪ್ಪಿಸಲು ನಿಮ್ಮ ವಿರೋಧ ಏಕೆ?, ಕೆಇಎ ಪರೀಕ್ಷಾ ಅಕ್ರಮದಲ್ಲಿ ಆರ್. ಡಿ. ಪಾಟೀಲ್ ಮಾಡಿರುವ ಕಲೆಕ್ಷನ್‌ನಲ್ಲಿ ನಿಮ್ಮ ಪಾಲೆಷ್ಟು..?" ಎಂದು ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನೆ ಮಾಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಪಿಎಸ್‌ಐ ನೇಮಕಾತಿ ಹಗರಣ ಭಾರಿ ಸದ್ದು ಮಾಡಿತ್ತು, ಬಿಜೆಪಿ ಚುನಾವಣೆಯಲ್ಲಿ ಸೋಲಲು ಇದೂ ಕೂಡ ಒಂದು ಕಾರಣ ಎಂದು ಹೇಳಲಾಗಿತ್ತು, ಅಂದು ವಿಪಕ್ಷ ಸ್ಥಾನದಲ್ಲಿದ್ದ ಕಾಂಗ್ರೆಸ್ ಪರೀಕ್ಷೆ ಅಕ್ರಮದ ಬಗ್ಗೆ ಭಾರಿ ಹೋರಾಟ ಮಾಡಿತ್ತು, ಈಗ ತಾನೇ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೂಡ ಕೆಇಎ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಅಲ್ಲದೆ ಪ್ರಮುಖ ಆರೋಪಿಗೆ ಪೊಲೀಸರೇ ರಕ್ಷಣೆ ನೀಡಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೂಡ ಕೇಳಿಬಂದಿವೆ.












Click it and Unblock the Notifications