ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಎದುರಾಗಿರುವ "ಅಷ್ಟ" ಕಂಟಕಗಳು ಇಲ್ಲಿವೆ!

ಬೆಂಗಳೂರು, ನವೆಂಬರ್‌ 01: 2024 ರ ಲೋಕಸಭಾ ಚುನಾವಣೆಗೆ ಕರ್ನಾಟಕ ಕಾಂಗ್ರೆಸ್‌ ಭರ್ಜರಿ ತಯಾರಿ ನಡೆಸುತ್ತಿದ್ದು, ಕನಿಷ್ಠ 20 ಸ್ಥಾನಗಳನ್ನ ಗೆಲ್ಲಲ್ಲು ಕಾಂಗ್ರೆಸ್ ಸಜ್ಜಾಗಿದೆ. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಅಷ್ಟ ಕಂಟಕಗಳು ಎದುರಾಗಿದೆ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಕಿಡಿಕಾರಿದೆ.

ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ಎದುರಾಗಿರುವ "ಅಷ್ಟ" ಕಂಟಕ

1. ಸಿಎಂ ಕುರ್ಚಿ ಕಂಟಕ
2. ಸಚಿವ ಸ್ಥಾನ ವಂಚಿತರಿಂದ ಕಂಟಕ
3. ಬೆಳಗಾವಿಯಲ್ಲಿ ಲಕ್ಷ್ಮಿ ಕಂಟಕ
4. ಪರಮೇಶ್ವರ್‌ ಮನೆಯಲ್ಲಿ ಡಿನ್ನರ್‌ ಕಂಟಕ
5. ಹೆಚ್ಚುವರಿ ಡಿಸಿಎಂ ಹುದ್ದೆಯ ಕಂಟಕ
6. ನಿಗಮ ಮಂಡಳಿ ಹಂಚಿಕೆಯ ಕಂಟಕ
7. ಅನುದಾನ ಸಿಗದ ಶಾಸಕರಿಂದ ಕಂಟಕ
8. ಪಂಚ ರಾಜ್ಯ ಚುನಾವಣೆಗೆ ಕಲೆಕ್ಷನ್‌ ಕಂಟಕ

BJP Gave The List Eight Thorn Facing The Congress Government Of The State

ರಾಜ್ಯದ ಇತಿಹಾಸದುದ್ದಕ್ಕೂ ಕರ್ನಾಟಕ ಹಾಗೂ ಕನ್ನಡದ ಅಸ್ಮಿತೆಯನ್ನು ಚುನಾವಣೆಗೆ ಬಳಸಿಕೊಂಡ ಏಕೈಕ ರಾಜಕೀಯ ಪಕ್ಷ ನಾಡದ್ರೋಹಿ ಕಾಂಗ್ರೆಸ್‌ ಜನರ ನಡುವೆ ಭಾಷಾ ದ್ವೇಷದ ವಿಷಬೀಜ ಬಿತ್ತಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕಾಂಗ್ರೆಸ್‌ ಪಕ್ಷ ಕರ್ನಾಟಕ ಮತ್ತು ಕನ್ನಡಕ್ಕೆ ಕೊಟ್ಟ ಕೊಡುಗೆ ಮಾತ್ರ ಶೂನ್ಯ. ರಾಜ್ಯದಲ್ಲಿ ಬಹು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನಿಂದ ಕರ್ನಾಟಕ ಹಾಗೂ ಕನ್ನಡಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ಹೇಳಿದೆ.

ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಸಂಭ್ರಮಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್‌ ಈ 50 ವರ್ಷಗಳಲ್ಲಿ ಕರ್ನಾಟಕ ಹಾಗೂ ಕನ್ನಡಕ್ಕೆ ಮಾಡಿದ ಮಹಾನ್ ಮೋಸಗಳ ಪೈಕಿ ಕೆಲವನ್ನಾದರೂ #ಕನ್ನಡರಾಜ್ಯೋತ್ಸವ ದ ಈ ಸಂದರ್ಭ ನೆನಪು ಮಾಡಿಕೊಂಡು ಮತ್ತೆ ಇಂಥ ಅನ್ಯಾಯವಾಗದಂತೆ ತಡೆಯಬೇಕು. ಚುನಾವಣಾ ಸಮಯದಲ್ಲಿ ಮಾತ್ರ ಕನ್ನಡದ ವಿಷಯ ಕೆದಕಿ ಅದರಲ್ಲೂ ರಾಜಕೀಯ ಲಾಭ ಮಾಡಿಕೊಳ್ಳುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಗೋಕಾಕ್‌ ಚಳುವಳಿ ಏಕೆ ನಡೆಯಬೇಕಾಯಿತು ಎಂಬ ಪ್ರಶ್ನೆಯನ್ನು ತಮಗೆ ತಾವೇ ಕೇಳಿಕೊಳ್ಳಬೇಕು. ವಾಸ್ತವದಲ್ಲಿ ಕನ್ನಡದ ಅಸ್ಮಿತೆಗೆ ಮೊದಲ ಕೊಡಲಿ ಪೆಟ್ಟು ನೀಡಿದ್ದೇ ಕಾಂಗ್ರೆಸ್‌!!

ಕನಸಿನಲ್ಲಿಯೂ ಮತ್ತೊಬ್ಬರನ್ನು ದ್ವೇಷಿಸದ ಕನ್ನಡದ ಹೆಮ್ಮೆಯ ವರನಟ ಡಾ. ರಾಜ್‌ ಕುಮಾರ್‌ ಅವರೂ ಸಾಹಿತಿಗಳು-ಕಲಾವಿದರ ಜತೆ ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಿಸಿದ್ದು‌ ದಶಕಗಳ ಕಾಲ ಕರ್ನಾಟಕವನ್ನು ಆಳಿರುವ ಇದೇ ಕಾಂಗ್ರೆಸ್ ಪಕ್ಷ. ಆರು ದಶಕಗಳ ಕಾಲ ಕರ್ನಾಟಕವನ್ನು ಆಳಿದರೂ ಸಹ ಕಾಂಗ್ರೆಸ್‌ಗೆ ಇಂದಿಗೂ ತಾನು ಕನ್ನಡಿಗರಿಗೆ ಉದ್ಯೋಗ ಸೃಷ್ಟಿಸಿಲ್ಲ ಎಂಬ ಪಾಪಪ್ರಜ್ಞೆ ಇಲ್ಲ. ಬದಲಿಗೆ ತನ್ನ ತಪ್ಪನ್ನು ಸದಾ ಇತರರ ಮೇಲೆ ಹೊರೆಸಿ ನುಣುಚಿಕೊಳ್ಳುವುದು ಮಾತ್ರ ಅಭ್ಯಾಸವಾಗಿಬಿಟ್ಟಿದೆ. ಕರ್ನಾಟಕದ ರೈಲ್ವೆಯನ್ನು ಮದ್ರಾಸಿಗೆ ಕೊಟ್ಟು, ಕನ್ನಡಿಗರ ಉದ್ಯೋಗಾವಕಾಶಗಳನ್ನು ಕಿತ್ತುಕೊಂಡ ಕಾಂಗ್ರೆಸ್‌ ಕನಿಷ್ಟ ಕ್ಷಮೆಗೂ ಸಹ ಅನರ್ಹ.

BJP Gave The List Eight Thorn Facing The Congress Government Of The State

ಪ್ರಸ್ತುತ ಈಗಿನ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರವಂತೂ ಕನ್ನಡಿಗರ ಹಾಗೂ ಕರ್ನಾಟಕದ ಪಾಲಿಗೆ ಒಂದು ರೀತಿಯ ಮರಣ ಶಾಸನ. ಜೀವನದಿ ಕಾವೇರಿಯಿಂದ ಹಿಡಿದು, ಕರ್ನಾಟಕ ರಾಜ್ಯೋತ್ಸವದ ಅನುದಾನದವರೆಗೂ ಈ ಸರ್ಕಾರದಲ್ಲಿ ಕರ್ನಾಟಕ ಮತ್ತು ಕನ್ನಡಿಗರಿಗೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ.

ಸಚಿವರಿಗೆ ದುಬಾರಿ ಕಾರು ಕೊಳ್ಳಲು ಭರಪೂರ ಅನುದಾನ ಒದಗಿಸುವ ಕಾಂಗ್ರೆಸ್‌ ಸರ್ಕಾರಕ್ಕೆ ಕನ್ನಡದ ಅಸ್ಮಿತೆಯಾಗಿರುವ ಮೈಸೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲು ಹಣವಿಲ್ಲ, ಕನ್ನಡದ ಇತಿಹಾಸವನ್ನು ಮೇಳೈಸುವ ಹಂಪಿ ಉತ್ಸವ ಆಚರಣೆಯನ್ನೇ ರದ್ದುಗೊಳಿಸಿದೆ. ಅರ್ಧ ವರ್ಷ ಕಳೆದರೂ ಕನ್ನಡದ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಸಿಕ್ಕಿಲ್ಲ, ಶಿಕ್ಷಕರಿಗೆ ಸಂಬಳವೂ ಸರಿಯಾಗಿ ಬಂದಿಲ್ಲ. ನಾಡದೇವಿ ಭುವನೇಶ್ವರಿ ಪ್ರತಿಮೆಗೂ ಸಹ ಹಣ ನೀಡದೆ ಕಾಂಗ್ರೆಸ್‌ ಸರ್ಕಾರ ತನ್ನ ನಾಡದ್ರೋಹಿ ಬುದ್ದಿಯನ್ನು ತೋರಿದೆ.

ಕೆಲವೇ ತಿಂಗಳ ಹಿಂದೆ ಹೂಡಿಕೆ ಆಕರ್ಷಣೆಯ ಉತ್ತುಂಗದಲ್ಲಿದ್ದ ಕರ್ನಾಟಕವನ್ನು ಈಗಿನ ಸರ್ಕಾರ ಹಾಳುಗೆಡವಿದೆ. ಕೈಗಾರಿಕೋದ್ಯಮ ಹಾಗೂ ವಾಣಿಜ್ಯೋದ್ಯಮಗಳ ಸ್ಥಿರ ವಹಿವಾಟಿಗೆ ವಿದ್ಯುತ್‌ ಬೇಕೇ ಬೇಕು. ಆದರೆ ವಿದ್ಯುತ್‌ ವಿಭಾಗವನ್ನು ನಿರ್ವಹಿಸದೇ ಹಾಳುಗೆಡವಿ ಈಗ ಕರ್ನಾಟಕದಲ್ಲಿ ವಿದ್ಯುತ್‌ ಅಭಾವ ಸೃಷ್ಟಿಯಾಗಿದೆ. ರಾತ್ರಿ ನಿದ್ದೆ ಬಿಟ್ಟು ಎದ್ದು ಹೊಲದಲ್ಲಿ ಚೇಳು-ಹಾವು ಕಡಿತಕ್ಕೊಳಗಾಗುವ ಸ್ಥಿತಿ ತಂದೊಡ್ಡಿರುವುದು ಕನ್ನಡದ ಮಣ್ಣಿನ ಮಕ್ಕಳಿಗೆ ಕಾಂಗ್ರೆಸ್‌ ನೀಡಿರುವ ಉಡುಗೊರೆ.

ಕ್ಷೇತ್ರಗಳಿಗೆ ಯಾವುದೇ ಅನುದಾನಗಳನ್ನು ನೀಡದೆ ತನ್ನ ಅವಧಿಯುದ್ದಕ್ಕೂ ಕರ್ನಾಟಕದ ಮೂಲಸೌಕರ್ಯವನ್ನು ಹಾಳುಗೆಡಹುವುದೇ ಧ್ಯೇಯವಾಗಿರುವ ಕಾಂಗ್ರೆಸ್‌ನ ಆಡಳಿತಕ್ಕೆ ಕರ್ನಾಟಕ ಮೋಸದಿಂದ ಒಳಗಾಗಿರುವುದು ದುರಾದೃಷ್ಟಕರ ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+