ಹಳೇ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿರುವ ಬಿಜೆಪಿ: ಸಾಲು ಸಾಲು ಸಚಿವ ಸ್ಥಾನ ಬಂಪರ್
ಎನ್‌ಡಿಎ ಮೈತ್ರಿ ಕೂಟ ಕೇಂದ್ರದಲ್ಲಿ ಸರ್ಕಾರ ನಡೆಸಲಿದೆ. ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೋದಿ ಕ್ಯಾಬಿನೇಟ್‌ನಲ್ಲಿ ಕರ್ನಾಟಕದ ನಾಲ್ವರು ಸಂಸದರಿಗೆ ಸಚಿವ ಸ್ಥಾನ ಲಭಿಸಿದೆ. ಇನ್ನು ರಾಜ್ಯದಿಂದಲೇ ರಾಜ್ಯಸಭೆಗೆ ಆಯ್ಕೆ ಆಗುವ ನಿರ್ಮಲಾ ಸೀತಾರಾಮನ್ ಅವರಿಗೂ ಅದೃಷ್ಟ ಖುಲಾಯಿಸಿದೆ.
ಮೋದಿ 3.0 ಕ್ಯಾಬಿನೇಟ್‌ನಲ್ಲಿ ಅಳೆದು ತೂಗಿ ಎಲ್ಲರಿಗೂ ಮಣೆ ಹಾಕಲಾಗಿದೆ. ಈ ವೇಳೆ ಕರ್ನಾಟಕದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕೂಟ 28 ರಲ್ಲಿ 19 ಸ್ಥಾನಗಳನ್ನು ಗೆದ್ದಿದ್ದರಿಂದ ನಾಲ್ವರು ಸಂಸದರಿಗೆ ಸಚಿವರಾಗುವ ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಕರ್ನಾಟಕದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರಿಗೂ ಈ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಈ ಮೂಲಕ ಬಿಜೆಪಿ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಟಾರ್ಗೆಟ್ ಹಳೆ ಮೈಸೂರು
ಬಿಜೆಪಿ ಕರ್ನಾಟಕದ ಹಳೆ ಮೈಸೂರು ಭಾಗದಲ್ಲಿ ಇನ್ನು ಗಟ್ಟಿಯಾಗಿ ನೇಲೆ ಊರಿಲ್ಲಿ. ಹೀಗಾಗಿ ಇಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿಕೊಳ್ಳಲು ಬಿಜೆಪಿ ಭರ್ಜರಿ ಪ್ಲ್ಯಾನ್ ಮಾಡಿದೆ. ಈ ಮೂಲಕ ನಾಲ್ಕು ಸಚಿವ ಸ್ಥಾನಗಳಲ್ಲಿ ಒಂದು ಉತ್ತರ ಕರ್ನಾಟಕ ಭಾಗದ ಧಾರವಡಕ್ಕೆ ಲಭಿಸಿದರೆ, ಇನ್ನು ಉಳಿದ ಮೂರು ಸ್ಥಾನಗಳು ಇದೇ ಭಾಗಕ್ಕೆ ಸಿಕ್ಕಿವೆ. ಈ ಮೂಲಕ ಮುಂದಿನ ಚುನಾವಣೆಗಳಿಗೆ ಬಿಜೆಪಿ ಈಗಿನಿಂದಲೇ ಪ್ಲ್ಯಾನ್ ರೂಪಿಸಿಕೊಳ್ಳುತ್ತಿದೆ.
ಒಕ್ಕಲಿಗರಿಗೆ ಸಚಿವ ಸ್ಥಾನ
ಹಳೆ ಮೈಸೂರು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಒಕ್ಕಲಿಗ ಸಮುದಾಯಕ್ಕೆ ಮೋದಿ ಕ್ಯಾಬಿನೆಟ್‌ನಲ್ಲಿ ಬಂಪರ್ ಸಿಕ್ಕಿದೆ. ಈ ಬಾರಿ ಮಂಡ್ಯಾ ಲೋಕಸಭಾ ಕ್ಷೇತ್ರದಿಂದ ಗೆದ್ದು, ಸಂಸತ್ ಪ್ರವೇಶಿಸಿರುವ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಲಭಿಸಿದೆ. ಅಲ್ಲದೆ ಬೆಂಗಳೂರು ಉತ್ತರ ಭಾಗದಲ್ಲಿ ಜಯ ಸಾಧಿಸಿರುವ ಶೋಭಾ ಕರಂದ್ಲಾಜೆಗೂ ಸಚಿವ ಸ್ಥಾನ ಸಿಕ್ಕಿದೆ. ಇಬ್ಬರೂ ಕರ್ನಾಟಕದ ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಮೂಲಕ ಈ ಸಮುದಾಯದ ಮನ ವಲಿಸುವ ಕಾರ್ಯಕ್ಕೆ ಬಿಜೆಪಿ ಮುಂದಾಗಿದೆ.

ಲಿಂಗಾಯತರಿಗೂ ಬಂಪರ್
ಇನ್ನು ವಿಧಾನಸಭಾ ಚುನಾವಣೆಗಳಲ್ಲಿ ಸೋಲು ಕಂಡಿದ್ದ ವಿ ಸೋಮಣ್ಣ, ತುಮಕೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿತ್ತು. ಅಲ್ಲದೆ ಈ ಕ್ಷೇತ್ರದಲ್ಲಿ ಸೋಮಣ್ಣ ಜಯ ಸಹ ಸಾಧಿಸಿದ್ದಾರೆ. ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಇವರಿಗೆ ಮೋದಿ ಕ್ಯಾಬಿನೇಟ್‌ನಲ್ಲಿ ಸ್ಥಾನ ನೀಡಲಾಗಿದೆ. ಈ ಮೂಲಕ ಬಿಜೆಪಿ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಡಲು ಮುಂದಾಗಿದೆ.
ಹಳೆ ಮೈಸೂರು ಭಾಗದಲ್ಲಿ ಮೂರು ಸಚಿವ ಸ್ಥಾನವನ್ನು ನೀಡಿರುವ ಬಿಜೆಪಿ ಇಲ್ಲಿ ಜನರ ಪ್ರೀತಿ ಗೆಲ್ಲಲು ಪ್ಲ್ಯಾನ್ ಮಾಡಿಕೊಂಡಿದೆ. ಅಲ್ಲದೆ ಈ ಮೂಲಕ ತನ್ನ ಬೇರುಗಳನ್ನು ಪಸರಿಸಲು ಬ್ಲ್ಯೂ ಪ್ರಿಂಟ್ ಹಾಕಿಕೊಂಡಂತೆ ಕಾಣುತ್ತಿದೆ. ಕಳೆದ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಂತಿದ್ದ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಬೆಂಬಲ ಸೂಚಿಸಿದ್ದ ಬಿಜೆಪಿ, ಈ ಬಾರಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವಿನ ನಿಟ್ಟುಸಿರು ಬಿಟ್ಟಿದೆ. ಬಿಜೆಪಿ ಹಾಕಿಕೊಂಡ ಯೋಜನೆಗಳೆಲ್ಲಾ ಹೇಗೆ ವರ್ಕ್‌ಔಟ್ ಆಗುತ್ತವೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.












Click it and Unblock the Notifications