ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕವನ್ನು ದಿವಾಳಿ ಮಾಡಿರುವುದಾಗಿ ಬಿಜೆಪಿಯೇ ಒಪ್ಪಿಕೊಂಡಿತಾ? ಕಾಂಗ್ರೆಸ್ ಹೇಳಿದ್ದೇನು?

|
Google Oneindia Kannada News

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ವಿರೋಧ ಪಕ್ಷವಾಗಿ ಭಾರಿ ಆಕ್ಟಿವ್ ಆಗಿದೆ. ಕಾಂಗ್ರೆಸ್‌ನ ಉಚಿತ ಗ್ಯಾರಂಟಿಗಳಿಗೆ ಷರತ್ತು ವಿಧಿಸಿರುವುದಕ್ಕೆ ಬಿಜೆಪಿ ಭಾರಿ ವಿರೋಧ ವ್ಯಕ್ತಪಡಿಸಿದೆ, ಉಚಿತ ಗ್ಯಾರಂಟಿಗಳನ್ನು ನೀಡಲು ಬೆಲೆ ಏರಿಕೆ ಮಾಡುತ್ತಿದ್ದು, ಕರ್ನಾಟಕವನ್ನು ಆರ್ಥಿಕವಾಗಿ ದಿವಾಳಿ ಮಾಡುತ್ತಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್ ಎಲ್ಲಾ ಇಲಾಖೆಗಳಿಗೆ ಕೈ ಹಾಕಿ ದಿವಾಳಿ ಎಬ್ಬಿಸುತ್ತಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. "ರಾಜ್ಯದಲ್ಲಿ ಅವಾಸ್ತವಿಕ ಗ್ಯಾರಂಟಿಗಳ ಅನುಷ್ಠಾನಕ್ಕೆ ಪತರುಗುಟ್ಟುತ್ತಿರುವ ಸಿದ್ದರಾಮಯ್ಯ, ಸರ್ಕಾರ ಸಿಕ್ಕ ಸಿಕ್ಕ ಇಲಾಖೆಗೆ 'ಕೈ' ಹಾಕಿ ಆರ್ಥಿಕ ದಿವಾಳಿ ಎಬ್ಬಿಸುತ್ತಿದೆ." ಎಂದು ಆರೋಪಿಸಿದೆ.

BJP Explained How They Destroyed The Karnataka Economy: Congress Slams BJP

"ಬಿಎಂಟಿಸಿ- ಆರ್ಥಿಕ ಇಂಧನವಿಲ್ಲ, ಜಲಮಂಡಳಿ- ಹಣಕಾಸಿನ ಹಾಹಾಕಾರ, ಕೆಎಸ್‌ಆರ್‌ಟಿಸಿ - ನಷ್ಟದ ಹೆದ್ದಾರಿಯಲ್ಲಿ, ವಿದ್ಯುತ್ ಸರಬರಾಜು ಕಂಪೆನಿಗಳು - ಮುಳುಗುವ ಹಾದಿಯಲ್ಲಿ, ಇನ್ನು ಹಲವು ಇಲಾಖೆಗಳ ಸಂಸ್ಥೆಗಳು ಅಧಃಪತನದ ಪಟ್ಟಿಯಲ್ಲಿದ್ದು, 'ಅರ್ಥ'ವಿಲ್ಲದ ಎಟಿಎಂ ಸರ್ಕಾರ ಸೃಷ್ಟಿಸಿರುವ ಅರಾಜಕತೆಗೆ ಬಲಿಯಾಗಲು 'ಸಿದ್ದ'ವಾಗಿವೆ" ಎಂದು ಟ್ವೀಟ್ ಮೂಲಕ ಆರೋಪ ಮಾಡಿತ್ತು.

ರಾಜ್ಯವನ್ನು ದಿವಾಳಿ ಮಾಡಿರುವುದಾಗಿ ಬಿಜೆಪಿ ಒಪ್ಪಿಕೊಂಡಿದೆ

ಬಿಜೆಪಿಯ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್ "ಬಿಜೆಪಿ ಸರ್ಕಾರ ರಾಜ್ಯವನ್ನು ಹೇಗೆಲ್ಲಾ ದಿವಾಳಿ ಮಾಡಿದೆ ಎನ್ನುವುದನ್ನು ಸವಿವರಾಗಿ ಹೇಗೆಲ್ಲಾ ದಿವಾಳಿ ಮಾಡಿದೆ ಎನ್ನುವುದನ್ನು ತಿಳಿಸಿದೆ. ತಮ್ಮ ದುರಾಡಳಿತವನ್ನು ರಾಜ್ಯದ ಜನತೆಗೆ ವಿವರಿಸಿದ್ದಕ್ಕೆ ಧನ್ಯವಾದಗಳು!!" ಎಂದು ಟ್ವೀಟ್ ಮಾಡಿದೆ.

ಬಿಜೆಪಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ನ ಮನ್ಸೂರ್ ಖಾನ್, "ಬಿಜೆಪಿ ತನ್ನ ಆಡಳಿತಾವಧಿಯಲ್ಲಿನ ದುರಾಡಳಿತ ಹಾಗೂ ತಾನು ಯಾವ್ಯಾವ ಇಲಾಖೆಗಳನ್ನು ದಿವಾಳಿಯ ಅಂಚಿಗೆ ದೂಡಿದ್ದೆ ಎಂಬುದನ್ನು ಸವಿವರವಾಗಿ ಜಗಜ್ಜಾಹೀರುಗೊಳಿಸಿದೆ. ಬಿಜೆಪಿ ಸರ್ಕಾರ ಯಾವೆಲ್ಲ ಇಲಾಖೆಗಳಿಗೆ ಮುಳುಗು ನೀರು ತಂದಿತ್ತು ಎಂಬುದನ್ನು ರಾಜ್ಯದ ಜನತೆಗೆ ವಿವರಿಸಿದ್ದಕ್ಕೆ ಅಭಿನಂದನೆಗಳು!" ಎಂದು ತಿರುಗೇಟು ಕೊಟ್ಟಿದ್ದಾರೆ.

ಕಾಂಗ್ರೆಸ್ ಆಕಾಶದಲ್ಲಿ ಇದೆ, ನಾವು ನೆಲದಲ್ಲಿ ಇದ್ದೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ಯಾಕೆ?ಕಾಂಗ್ರೆಸ್ ಆಕಾಶದಲ್ಲಿ ಇದೆ, ನಾವು ನೆಲದಲ್ಲಿ ಇದ್ದೇವೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ಯಾಕೆ?

"ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇನ್ನೂ 15 ದಿನ ಕೂಡ ಆಗಿಲ್ಲ, ಅದು ಹೇಗೆ ಸಾರ್ವಜನಿಕ ಉದ್ಯಮಗಳು ಬಂದಾಗುವದಕ್ಕೆ ಕಾಂಗ್ರೆಸ್ಸ ಸರ್ಕಾರ ಜವಾಬ್ದಾರಿ? ಅದು ಬಿಜೆಪಿಯ ಹಿಂದಿನ ಸರ್ಕಾರದ ಕೊಡುಗೆ." ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತೊಬ್ಬ ಟ್ವಿಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದು, "ಅಂದ್ರೆ ನಿಮ್ಮ ಹಿಂದಿನ ಸರ್ಕಾರ ವ್ಯವಸ್ಥೆಯನ್ನು ಅಷ್ಟು ಗಬ್ಬೆಬ್ಬಿಸಿದೆ ಅಂತ ಅರ್ಥವಾಯಿತು. ಮತ್ತೆ ನಿಮಗೆ ಅಧಿಕಾರ ಕೊಟ್ಟಿದ್ರೆ ರಾಜ್ಯದ ಕತೆ ಮುಗಿದೆ ಹೊಗುತ್ತಿತ್ತು ಜನ ಪ್ರಜ್ಞಾ ವಂತಿಕೆಯಿಂದ ಮತ ಚಲಾಯಿಸಿದ್ದಾರೆ." ಎಂದು ಹೇಳಿದ್ದಾರೆ.

ಬಿಜೆಪಿ ನಾಲ್ಕು ವರ್ಷದ ಆಡಳಿತದಲ್ಲಿ ಇದನ್ನೆಲ್ಲಾ ಮಾಡಿ ಈಗ ಕಾಂಗ್ರೆಸ್ ತಲೆಗೆ ಕಟ್ಟಲು ನೋಡುತ್ತಿದೆ. ನಿಮ್ಮ ಸಾಧನೆಯನ್ನು ನೀವೇ ಹೇಳಿಕೊಂಡಿದ್ದೀರಿ, ಸರಿಯಾಗಿ ಆರೋಪ ಕೂಡ ಮಾಡಲು ಬರಲ್ಲವಾ ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

English summary
Karnataka Congress Slams BJP in Twitter, Shared the tweet don by BJP, said that BJP Explained How They Destroyed The Karnataka Economy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X