ಮೋದಿ ಭೇಟಿಗೆ ಆಹ್ವಾನ ಪಡೆದಿದ್ದ ಚೈತ್ರಶ್ರೀ ಪಕ್ಷದಿಂದ ಅಮಾನತು!

ಚಿಕ್ಕಮಗಳೂರು, ಫೆಬ್ರವರಿ 22: ಪಕ್ಷದ ನಿಯಮ ಪಾಲಿಸದ ಹಿನ್ನಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್.ಚೈತ್ರಶ್ರೀ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಗುರುವಾರದಂದು ಅಮಾನತುಗೊಳಿಸಲಾಗಿದೆ.

ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೋರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೈತ್ರಶ್ರೀ ಮಾಲತೇಶ್ ಅವರು ಪತ್ರ ಬರೆದಿದ್ದರು. ಪ್ರಧಾನಿ ಸಚಿವಾಲಯದಿಂದ ಆಹ್ವಾನ ಸಿಕ್ಕಿತ್ತು.

Chikkamagaluru Zilla Panchayat President Chaitra Shree expelled from BJP

ಜಿಲ್ಲೆಯ ನಕ್ಸಲ್ ಸಮಸ್ಯೆ, ಸ್ವಚ್ಛತಾ ಅಭಿಯಾನ,ಗಿರಿಜನ ಕಲ್ಯಾಣ, ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಲು ಚೈತ್ರಶ್ರೀ ಸಿದ್ಧರಾಗುತ್ತಿದ್ದರು.

Chikkamagaluru Zilla Panchayat President Chaitra Shree expelled from BJP

'ಪಕ್ಷದ ಆದೇಶ ಪಾಲಿಸದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ' ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಸಹಿ ಮಾಡಿರುವ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

ಬಿಜೆಪಿ ಆಂತರಿಕ ಒಪ್ಪಂದದಂತೆ 20 ತಿಂಗಳು ಅವಧಿ ಮುಗಿದಿದ್ದರೂ ಚೈತ್ರಶ್ರೀ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆ ಪಕ್ಷದ ಸೂಚನೆಯನ್ನು ಉಲ್ಲಂಘಿಸಿದ್ದರು. ಇದಲ್ಲದೆ, ಈ ಬಾರಿಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಬಿ.ಬಿ ನಿಂಗಯ್ಯ ಅವರ ವಿರುದ್ಧ ಸ್ಪರ್ಧಿಸಲು ಚೈತ್ರಶ್ರೀ ಅವರು ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+